ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‌ಪೇಟ್ ಬಳಿ ಮಣಿಪುರದ ಲಾಲ್ಜಮ್ಲುವೈ ಮತ್ತು ಮಿಜೋರಾಂನ ಲಾಲ್ತಾಂಗ್ಲಿಯಾನಿ ಎಂದು ಗುರುತಿಸಲಾದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.
ಬೆಂಗಳೂರು (ಜು.22): ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಸೋಮವಾರ ಸೋಪ್ ಬಾಕ್ಸ್‌ಗಳಲ್ಲಿ ಅಡಗಿಸಿಟ್ಟಿದ್ದ 14.69 ಕೋಟಿ ರೂ. ಮೌಲ್ಯದ ಏಳು ಕಿಲೋಗ್ರಾಂಗಳಷ್ಟು ಕೊಕೇನ್ ಅನ್ನು ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‌ಪೇಟ್ ಬಳಿ ಮಣಿಪುರದ ಲಾಲ್ಜಮ್ಲುವೈ ಮತ್ತು ಮಿಜೋರಾಂನ ಲಾಲ್ತಾಂಗ್ಲಿಯಾನಿ ಎಂದು ಗುರುತಿಸಲಾದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಈ ಕಾರ್ಯಾಚರಣೆಯು ಉನ್ನತ ಮಟ್ಟದ ಅಂತರರಾಜ್ಯ ಕಳ್ಳಸಾಗಣೆ ದಂಧೆಯ ಭಾಗವಾಗಿತ್ತು ಎಂದು ತಿಳಿದುಬಂದಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 40 ಕೋಟಿ ರೂ. ಮೌಲ್ಯದ ನಾಲ್ಕು ಕಿಲೋಗ್ರಾಂಗಳಷ್ಟು ಕೊಕೇನ್‌ನೊಂದಿಗೆ ಭಾರತೀಯ ಪುರುಷ ಪ್ರಯಾಣಿಕನನ್ನು ಡಿಆರ್‌ಐ ತಡೆದ ಬಂಧಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಕೂಡ ಹೇಳಿಕೆಯಲ್ಲಿ ತಿಳಿಸಿತ್ತು.
ಪ್ರಾಥಮಿಕ ತನಿಖೆಯಲ್ಲಿ ಪ್ರಯಾಣಿಕನು ಮ್ಯಾಗಜೀನ್ ಕವರ್‌ಗಳಲ್ಲಿ ಬಿಳಿ ಪುಡಿಯನ್ನು ಎಚ್ಚರಿಕೆಯಿಂದ ಮರೆಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ಮತ್ತೊಂದು ಘಟನೆಯಲ್ಲಿ, ಮಾರ್ಚ್ 3 ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ 33 ವರ್ಷದ ಪ್ರಯಾಣಿಕನನ್ನು ಡಿಆರ್‌ಐ ತಡೆದಿದ್ದು, 14.2 ಕಿಲೋಗ್ರಾಂಗಳಷ್ಟು ತೂಕದ ಮತ್ತು 12.56 ಕೋಟಿ ರೂ. ಮೌಲ್ಯದ ವಿದೇಶಿ ಮೂಲದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
