ಬೆಂಗಳೂರು(ಜ.27): ಬೀದಿ ನಾಯಿಗಳು ಇನ್ನು ಮುಂದೆ ಪೊಲೀಸರೊಂದಿಗೆ ಗಸ್ತು ತಿರುಗಲಿದ್ದು, ಠಾಣೆಯಲ್ಲಿ ಸಿಬ್ಬಂದಿಯಂತೆ ಇರಲಿವೆ...! ಹೌದು, ಇಂತಹದೊಂದು ವಿನೂತನ ಪ್ರಯತ್ನಕ್ಕೆ ದಕ್ಷಿಣ ವಿಭಾಗದ ಪೊಲೀಸರು ಮುಂದಾಗಿದ್ದು, ಈ ಬೀದಿ ನಾಯಿಗಳಿಗೆ ಈಗಾಗಲೇ ತರಬೇತಿ ಕೂಡ ಆರಂಭಗೊಂಡಿದೆ.

ನಗರದ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆ, ಜಯನಗರ, ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆ ಸೇರಿದಂತೆ 17 ಪೊಲೀಸ್‌ ಠಾಣೆಗಳಲ್ಲಿ ನಾಯಿಗಳನ್ನು ಸಾಕಲಾಗುತ್ತಿದೆ. ಇವು ಆಯಾಯ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಸಿಕ್ಕಿವೆ. ಪ್ರಸ್ತುತ 25 ಬೀದಿ ನಾಯಿಗಳಿದ್ದು, ಈ ಪೈಕಿ ಏಳು ನಾಯಿ ಮರಿಗಳಿವೆ.

ಇವುಗಳಿಗೆ ವ್ಯಾಕ್ಸಿನ್‌ ಕೊಡಿಸಿದ್ದು, ಕ್ಲೀನಿಂಗ್‌, ವಾಕಿಂಗ್‌, ಜಾಗಿಂಗ್‌ ಸೇರಿದಂತೆ ಹಲವು ರೀತಿಯಲ್ಲಿ ತರಬೇತಿ ನೀಡಲಾಗುತ್ತಿದೆ. ವಿವಿಧ ಪೊಲೀಸ್‌ ಠಾಣೆಯಲ್ಲಿ ಸಿಬ್ಬಂದಿ ನಾಯಿ ಮರಿಗಳಿಗೆ ತರಬೇತಿ ನೀಡಲು ಆರಂಭಿಸಿದ್ದಾರೆ. ಇದಕ್ಕೆಂದು ನಾಯಿಗಳಿಗೆ ತರಬೇತಿ ನೀಡಲು ಖಾಸಗಿ ವ್ಯಕ್ತಿಗಳನ್ನು ನೇಮಿಸಲಾಗಿದೆ. ನಿತ್ಯ ಅವರು ನಾಯಿಗಳಿಗೆ ತರಬೇತಿ ನೀಡುತ್ತಾರೆ ಎಂದು ಡಿಸಿಪಿ ರೋಹಿಣಿ ಕಟೋಚ್‌ ಸೆಪಾಟ್‌ ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತಿಯೊಂದು ಠಾಣಾ ಆವರಣದಲ್ಲಿ ಇರುತ್ತಿದ್ದ ಬೀದಿ ನಾಯಿಗಳನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಿದೆ. ಠಾಣೆಯ ಎಲ್ಲ ಸಿಬ್ಬಂದಿ ಹೊರಗಿನ ಬಂದೋಬಸ್ತ್‌ ಇತರ ಕರ್ತವ್ಯಕ್ಕೆ ನಿಯೋಜನೆಗೊಂಡರೆ ಸೆಂಟ್ರಿ ಮಾತ್ರ ಇರುತ್ತಾರೆ. ಈ ವೇಳೆ ನಾಯಿಗಳನ್ನು ಅಲ್ಲಿ ಬಳಕೆ ಮಾಡಿಕೊಳ್ಳಬಹುದು. ರಾತ್ರಿ ವೇಳೆ ಒಬ್ಬೊಬ್ಬರೆ ಕಾನ್‌ಸ್ಟೇಬಲ್‌ ಗಸ್ತು ತಿರುಗಲು ಹೋದರೆ, ತರಬೇತಿ ನೀಡಿದ ಬೀದಿ ನಾಯಿಯೊಂದನ್ನು ಕರೆದೊಯ್ಯಬಹುದು. ಇದರಿಂದ ಅಕ್ರಮಗಳಿಗೆ ಕಡಿವಾಣ ಹಾಕುವ ಜತೆಗೆ, ಅಪರಾಧ ಎಸಗುವವರಲ್ಲಿ ಭಯ ಹುಟ್ಟಿಸಬಹುದು ಎಂದು ವಿವರಿಸಿದರು.

ಈ ನಾಯಿಗಳಿಗೆ ವಿಶೇಷವಾದ ಆಹಾರ ನೀಡುತ್ತಿಲ್ಲ. ನಿತ್ಯ ಸೇವಿಸುವ ಆಹಾರವನ್ನೇ ನೀಡಲಾಗುತ್ತಿದೆ. ಠಾಣೆಯ ಸಿಬ್ಬಂದಿಯೇ ಆಹಾರ ನೀಡುತ್ತಿದ್ದಾರೆ. ಇನ್ನು 20 ನಾಯಿಗಳಿದ್ದು, ಅವುಗಳಿಗೆ ತರಬೇತಿ ಕೊಡಿಸಬೇಕಿದೆ. ಬೀದಿ ನಾಯಿಗಳನ್ನು ಸಾಕಿ, ತರಬೇತಿ ನೀಡುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಈ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್‌ ಸೆಪಾಟ್‌ ಅವರು, ಪ್ರತಿಯೊಂದು ಠಾಣೆಗೆ ಭೇಟಿ ನೀಡಿದಾಗ ಠಾಣಾ ಆವರಣದಲ್ಲಿ ನಾಯಿಗಳನ್ನು ನೋಡುತ್ತಿದ್ದೆ. ಈ ಬೀದಿ ನಾಯಿಗಳನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಿ, ನಾಯಿಗಳಿಗೆ ತರಬೇತಿ ಕೊಡಿಸಲಾಗುತ್ತಿದೆ. ರಾತ್ರಿ ವೇಳೆ ಗಸ್ತಿಗೆ