ಲಾಕ್‌ಡೌನ್ ವಿಸ್ತರಣೆಯಾಗುತ್ತಾ? ಸಭೆ ಬಳಿಕ ಸರ್ಕಾರ ನಿಲುವು ತಿಳಿಸಿದ ಅಶೋಕ್
ಕೊರೋನಾ ಭೀತಿಯಿಂದ ದಿನೇ ದಿನೇ ಬೆಂಗಳೂರು ನಗರದಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಮತ್ತೆ ಒಂದು ವಾರ ನಂತ್ರ ಮುಂದುವರೆಯಲಿದೆ ಎನ್ನುವ ಗೊಂದಲಗಳಿಗೆ ಸಚಿವ ಆರ್.ಅಶೋಕ್ ತೆರೆ ಎಳೆದಿದ್ದಾರೆ.
ಬೆಂಗಳೂರು, (ಜುಲೈ.17): ಬೆಂಗಳೂರಿನಲ್ಲಿ ಒಂದು ವಾರಗಳು ಮಾತ್ರವೇ ಲಾಕ್ ಡೌನ್, ಆನಂತ್ರ ಮುಂದುವರಿಕೆಯಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಇಂದು (ಶುಕ್ರವಾರ) ನಗರದ ಸಚಿವರೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಲಾಕ್‌ಡೌನ್ ಮುಂದುವರಿಯಲ್ಲ..ಲಾಕ್‌ಡೌನ್ ಮುಂದುವರಿಯಲ್ಲ...ಲಾಕ್‌ಡೌನ್ ಮುಂದುವರಿಯಲ್ಲ ಎಂದು ಮೂರು ಬಾರಿ ಹೇಳಿದರು.
ಬೆಂಗಳೂರು ಮತ್ತೊಂದು ವಾರ ಲಾಕ್‌ಡೌನ್ ?
ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಮಾತ್ರವೇ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ. ನಗರದಲ್ಲಿ ಒಂದು ವಾರಗಳಿಗಿಂತ ಹೆಚ್ಚು ದಿನ ಲಾಕ್ ಡೌನ್ ಜಾರಿ ಮಾಡುವುದಿಲ್ಲ ಎಂದು ಸರ್ಕಾರದ ನಿಲುವು ತಿಳಿಸಿದರು.
ಮುಖ್ಯಮಂತ್ರಿ ಬಿಎಸ್‌ವೈ, ಬೆಂಗಳೂರು ನಗರದ ಕೊರೋನಾ ನಿಯಂತ್ರಣದ ಉಸ್ತುವಾರಿ ಹೊತ್ತಿರುವ 8 ವಲಯಗಳ ಸಚಿವರೊಂದಿಗೆ ಸಭೆ ನಡೆಸಿದರು. ಈ ವೇಳೆ ಲಾಕ್‌ಡೌನ್ ಮುಂದುವರೆಸುವುದನ್ನು ಸಿಎಂ ಖಡಖಂಡಿತವಾಗಿ ನಿರಾಕರಿಸಿದ್ದಾರೆ. ಯಾರಿಗೂ ಈ ಬಗ್ಗೆ ಸಂಶಯ ಬೇಡ ಎಂದರು.
ಕೊರೋನಾ ಭೀತಿಯಿಂದ ದಿನೇ ದಿನೇ ಬೆಂಗಳೂರು ನಗರದಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದೇ ಭಯದಿಂದಲೇ ಬೆಂಗಳೂರನ್ನು ತೊರೋಯುತ್ತಿರುವವ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಈ ಸಂದರ್ಭದಲ್ಲಿಯೇ ಬೆಂಗಳೂರಿನಲ್ಲಿ ಕೊರೋನಾ ಕಂಟ್ರೋಲ್ ಗಾಗಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿ ಮಾಡಲಾಗಿತ್ತು.
ಅಲ್ಲದೇ ಲಾಕ್ ಡೌನ್ ಮತ್ತೆ ಒಂದು ವಾರ ನಂತ್ರ ಮುಂದುವರೆಯಲಿದೆ ಎಂಬುದಾಗಿ ಹೇಳಲಾಗುತ್ತಿತ್ತು. ಇದಕ್ಕೆ ತೆರೆ ಎಳೆದಿರುವ ಸಚಿವ ಆರ್.ಅಶೋಕ್ ಬೆಂಗಳೂರಿನಲ್ಲಿ ಒಂದು ವಾರಗಳು ಮಾತ್ರವೇ ಲಾಕ್ ಡೌನ್, ಆನಂತ್ರ ಮುಂದುವರಿಕೆಯಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.