ಬೆಂಗಳೂರು ಕನ್ನಡಿಗರದ್ದು, ಕನ್ನಡ ಪ್ರಯತ್ನ ಮಾಡದವರೆಲ್ಲಾ ಹೊರಗಿನವರು;ಟ್ವೀಟ್‌ನಿಂದ ಚರ್ಚೆ ಶುರು!
ಬೆಂಗಳೂರು ಕನ್ನಡಿಗರಿಗೆ ಸೇರಿದ್ದು. ಇಲ್ಲಿಗೆ ಬಂದು ಕನ್ನಡ ಮಾತನಾಡಲು, ಕನಿಷ್ಠ ಕನ್ನಡ ಭಾಷೆ ಮಾತನಾಡಲು ಪ್ರಯತ್ನಿಸದವರನ್ನು ಹೊರಗಿನವರೆಂದು ನಾವು ಪರಿಗಣಿಸುತ್ತೇವೆ. ಕನ್ನಡಿಗನ ಈ ಟ್ವೀಟ್ ಇದೀಗ ಭಾರಿ ಚರ್ಚೆಗೆ ಶುರುವಾಗಿದೆ.
ಬೆಂಗಳೂರು(ಸೆ.9) ಬೆಂಗಳೂರಿನಲ್ಲಿ ಕನ್ನಡ ಭಾಷೆ ಕುರಿತು ಹಲವು ಹೋರಾಟಗಳು, ಚಳುವಳಿ, ಆಂದೋಲನಗಳು ನಡೆದಿದೆ. ಇಲ್ಲಿ ನೆಲೆಸುವ ಹೊರ ರಾಜ್ಯದವರು ಕನ್ನಡವನ್ನು ನಿರ್ಲಕ್ಷಿಸಿದಾಗ, ಹೀಯಾಳಿಸಿದಾಗ ತಕ್ಕ ಪ್ರತ್ಯುತ್ತರ ನೀಡಿದ ಉದಾಹರಣೆಗಳೂ ಇವೆ. ಇದೀಗ ಕನ್ನಡಿಗನ ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿಗೆ ಬಂದು ನೆಲೆಸಿರುವವರು ಕನ್ನಡ ಮಾತನಾಡಲು ಇದುವರೆಗೂ ಪ್ರಯತ್ನಿಸದ ಇರುವ ಎಲ್ಲರನ್ನೂ ಹೊರಗಿನವರೇ ಎಂದು ಪರಿಗಣಿಸುತ್ತೇವೆ. ಬೆಂಗಳೂರು ಯಾವತ್ತೂ ಕನ್ನಡಿಗರಿಗೆ ಸೇರಿದ್ದು ಎಂದು ಟ್ವೀಟ್ ಮಾಡಲಾಗಿದೆ. ಇದಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ.
ಲಕ್ಷ್ಮಿ ತನಯ ಅನ್ನೋ ಎಕ್ಸ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಲಾಗಿದೆ. ಬೆಂಗಳೂರಿಗೆ ಆಗಮಿಸುತ್ತಿರುವ ಎಲ್ಲರಿಗೂ, ಇಲ್ಲಿಗೆ ಬಂದು ಕನ್ನಡ ಮಾತನಾಡದೇ ಇದ್ದರೆ, ಅಥವಾ ಕನಿಷ್ಠ ಕನ್ನಡ ಮಾತನಾಡಲು ಪ್ರಯತ್ನಿಸದಿದ್ದರೆ ನಿಮ್ಮನ್ನು ಹೊರಗಿನವರು ಎಂದು ಪರಿಗಣಿಸುತ್ತೇವೆ. ಬರೆದಿಟ್ಟುಕೊಳ್ಳಿ, ಎಲ್ಲರಿಗೂ ಹಂಚಿಕೊಳ್ಳಿ, ನಾವು ಜೋಕ್ ಮಾಡುತ್ತಿಲ್ಲ. ಬೆಂಗಳೂರು ಕನ್ನಡಿಗರಿಗೆ ಸೇರಿದ್ದು ಎಂದು ಟ್ವೀಟ್ ಮಾಡಲಾಗಿದೆ.
ಕೆಲಸಕ್ಕಾಗಿ ಬಂದು ನಮ್ಮಿಂದಲೇ ಬೆಂಗಳೂರು ಉದ್ಧಾರ ಎನ್ನುವ ಹಿಂದಿ, ಕೇರಳಿಗರಿಗೆ ನಟ ಬೆಳವಾಡಿ ಕೌಂಟರ್!
ಪ್ರಮುಖವಾಗಿ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡು ಬಳಿಕ ಅಹಂಕಾರದ ಮಾತುಗಳನ್ನಾಡುವ, ಕನ್ನಡ ಭಾಷೆಯನ್ನು ಹೀಯಾಳಿಸುವ ಮಂದಿಗೆ ಹೇಳಿದ ನೇರ ನುಡಿ. ಬೆಂಗಳೂರಿಗೆ ಬಂದು ಕನ್ನಡ ಮಾತನಾಡಲೇಬೇಕು ಎಂದಲ್ಲ. ಆದರೆ ಇಲ್ಲಿನ ಭಾಷೆ, ಸಂಸ್ಕೃತಿ ಬಗ್ಗೆ ಗೌರವ ಇರಬೇಕು. ಇಲ್ಲೆ ನೆಲೆಸಿದರೆ ಕನ್ನಡ ಕಲಿಯುವ ಪ್ರಯತ್ನ ಮಾಡಬೇಕು. ಕನ್ನಡ ಕಲಿತರೆ ಅಥವಾ ಕನ್ನಡ ಮಾತನಾಡುವ ಪ್ರಯತ್ನ ಮಾಡಿದರೆ ಮಾತ್ರ ಇಲ್ಲಿಯವರಾಗಲು ಸಾಧ್ಯ ಅನ್ನೋ ಈ ಟ್ರೀಟ್ ಕೆಲವರಿಗೆ ಅಸಮಾಧಾನ ತರಿಸಿದ್ದರೆ, ಕನ್ನಡಿಗರು ಬೆಂಬಲಿಸಿದ್ದಾರೆ.
ಈ ಟ್ವೀಟ್‌ಗೆ ಭಾರಿ ಪರ ವಿರೋಧಗಳು ವ್ಯಕ್ತವಾಗಿದೆ. ಬೆಂಗಳೂರಿಗೆ ಬಂದು ಇಲ್ಲಿಯ ಭಾಷೆಯ ಬಗ್ಗೆ ಗೌರವ, ಅದನ್ನು ಕಲಿಯುವ ಕನಿಷ್ಠ ಪ್ರಯತ್ನ ಮಾಡಬೇಕ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಂದು ನೆಲೆಸುವ ಮಂದಿ ಈ ಪ್ರಯತ್ನ ಮಾಡಬೇಕು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಉತ್ತರ ಭಾರತ ಸೇರಿದಂತೆ ಕೆಲ ರಾಜ್ಯದವರು ಈ ಟ್ವೀಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಭಾರತೀಯರದ್ದು ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಿಂದ ನಾನು ಕನ್ನಡ ಕಲಿಯಲು ಪ್ರಯತ್ನಿಸುವುದಿಲ್ಲ. ಹಿಂದಿ ಅಥವಾ ಇಂಗ್ಲೀಷ್‌ನಲ್ಲೇ ಮಾತನಾಡುತ್ತೇನೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ನಟ ಪ್ರಕಾಶ ಬೆಳವಾಡಿ ಬೆಂಗಳೂರು , ಕನ್ನಡ ಭಾಷೆ ಕುರಿತು ಹೊರಗಿನಿಂದ ಬಂದವರ ದರ್ಪದ ಮಾತುಗಳಿಗೆ ತಿರುಗೇಟು ನೀಡಿದ್ದರು. ತಮ್ಮಿಂದಲೇ ಬೆಂಗಳೂರು ಅಭಿವೃದ್ಧಿಯಾಗಿದೆ ಅನ್ನೋ ಮಂದಿಯನ್ನು ಉದ್ದೇಶಿ ಪ್ರಕಾಶ್ ಬೆಳವಾಡಿ, ನೀವು ಬರುವ ಮೊದಲೇ ಬೆಂಗಳೂರು ಹೀಗೆ ಇತ್ತು. ನೀವೆ ಮಾಡಿದ್ದು ಎನ್ನುವುದಾದರೆ ನಿಮ್ಮ ಊರನ್ನೇ ಮಾಡಬಹುದಿತ್ತಲ್ವಾ ಎಂದು ತಿರುಗೇಟು ನೀಡಿದ್ದರು.
ಗಡಿನಾಡು ಕಾಸರಗೋಡಲ್ಲಿ ಈಗ ಅಂಗನವಾಡಿ ಹಂತದಲ್ಲೇ ಕನ್ನಡಕ್ಕೆ ಕೊಕ್..!