ಆಟೋ ಡ್ರೈವರ್ ಸೀಟಿನಲ್ಲಿ ಆಫೀಸ್ ಚೇರ್: ಲವ್ ಯೂ ಬೆಂಗಳೂರು ಎಂದ ಶಿವಾನಿ!
ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ತನ್ನ ಸೀಟಿಗೆ ಐಷಾರಾಮಿ ಕುಷನ್ ಆಫೀಸ್ ಚೇರನ್ನು ಅಳವಡಿಸಿಕೊಂಡು ಗಮನ ಸೆಳೆದಿದ್ದಾರೆ. ಟ್ರಾಫಿಕ್ ಜಾಮ್‌ನಲ್ಲಿ ದೀರ್ಘ ಸಮಯ ಕುಳಿತು ಬೆನ್ನು ನೋವು ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಆವಿಷ್ಕಾರ ಮಾಡಿದ್ದಾರೆ.
ಬೆಂಗಳೂರು (ಸೆ.24): ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಜಾಮ್‌ನಿಂದ ಬೇಸತ್ತ ಆಟೋ ಚಾಲಕನೊಬ್ಬ ಹೊಸ ಆವಿಷ್ಕಾರವನ್ನು ಮಾಡಿದ್ದು, ತನ್ನ ಸೀಟಿಗೆ ಐಷಾರಾಮಿ ಹಾಗೂ ಬೆನ್ನು ನೋವಿಗೆ ಮುಕ್ತಿ ನೀಡುವ ಆಫೀಸ್ ಕುಷನ್ ಚೇರನ್ನು ಹಾಕಿಸಿಕೊಂಡಿದ್ದಾರೆ.
ಬೆಂಗಳೂರು ಇತ್ತೀಚೆಗೆ ದೇಶದ ಅತ್ಯಂತ ಟ್ರಾಫಿಕ್ ಜಾಮ್ ನಗರ ಎಂಬ ಅಪಖ್ಯಾತಿಗೆ ಒಳಗಾಗುತ್ತಿದೆ. ಆದರೆ, ಎಂತಹದ್ದೇ ಟ್ರಾಫಿಕ್ ಜಾಮ್ ಇದ್ದರೂ ಪ್ರಯಾಣಿಕರಿಗೆ ಸೇವೆ ನೀಡುವ ಆಟೋ ಚಾಲಕರು ಬೆನ್ನು ನೋವು ಅನುಭವಿಸುತ್ತಿದ್ದಾರೆ. ಟೆಕ್ ವೃತ್ತಿಪರರ ಕೇಂದ್ರವಾಗಿರುವ ಬೆಂಗಳೂರಿನಲ್ಲಿ, ಆಟೋರಿಕ್ಷಾ ಚಾಲಕರು ಸಹ ಆವಿಷ್ಕಾರ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೆಂದರೆ, ಆಟೋ ಚಾಲಕ ತನ್ನ ವಾಹನದ ಸೀಟನ್ನು ಬದಲಿಸಿದ್ದಾನೆ. ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ಗಂಟೆಗಟ್ಟಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ ಬೆನ್ನು ನೋವು ಬಾರದ ರೀತಿಯಲ್ಲಿ ಕುಷನ್ ಕುರ್ಚಿಯನ್ನು ತನ್ನ ಸೀಟಿಗೆ ಅಳವಡಿಸಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶಿವಾನಿ ಮಟ್ಲಪುಡಿ ಎನ್ನುವವರು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆಟೋದಲ್ಲಿ ಕುಳಿತಲ್ಲೇ ಚಾಲಕ ಸಾವು: ಬೀದಿಗಳಲ್ಲಿ ಹೆಣ ಬೀಳ್ತಿದ್ದರೂ ಕಣ್ಮುಚ್ಚಿ ಕುಳಿತ ಸರ್ಕಾರ!
ಶಿವಾನಿ ಮಟ್ಲಪುಡಿ ಹಂಚಿಕೊಂಡ ಫೋಟೋ ಆಟೋ ಡ್ರೈವರ್ ತನ್ನ ಸೀಟಿನ ಸ್ಥಾನಕ್ಕೆ ಸ್ವಿವೆಲ್ ಆಫೀಸ್ ಕುರ್ಚಿಯನ್ನು ಅಳವಡಿಸಿಕೊಂಡಿದ್ದು, ಅದರ ಮೇಲೆ ಆರಾಮವಾಗಿ ಕುಳಿತು ಆಟೋ ಓಡಿಸುವುದನ್ನು ನೀವು ಕಾಣಬಹುದು. 'ಆಟೋ ಡ್ರೈವರ್‌ನ ಸೀಟಿನಲ್ಲಿ ಹೆಚ್ಚುವರಿ ಸೌಕರ್ಯಕ್ಕಾಗಿ ಕಚೇರಿ ಕುರ್ಚಿಯನ್ನು ಅಳವಡಿಸಿಕೊಂಡಿದ್ದಾರೆ, ಮ್ಯಾನ್ ಐ ಲವ್ ಬೆಂಗಳೂರು' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಅನೇಕ X ಬಳಕೆದಾರರು ಚಾಲಕನ ಸೃಜನಶೀಲತೆಯನ್ನು ಹೊಗಳಿದ್ದಾರೆ. ಇದು ನಮ್ಮ ಬೆಂಗಳೂರು ಬ್ಯೂಟಿ ಎಂದು ಹೇಳಿದ್ದಾನೆ. ಇನ್ನು ಕೆಲವರು ಚಾಲಕನ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು, ದೀರ್ಘಕಾಲದವರೆಗೆ ಕುರ್ಚಿಯ ವಿನ್ಯಾಸ ನೋಡಿ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಇನ್ನು ಆಟೋ ಚಾಲಕ ಬೆನ್ನು ನೋವು ಬಾರದಂತೆ ಕುಳಿತುಕೊಳ್ಳುವ ಭಂಗಿಗಾಗಿ ಈ ಕುರ್ಚಿಯ ಅಳವಡಿಕೆ ಸೂಕ್ತವಾಗಿದೆ ಎಂದು ಹೇಳಿದ್ದಾರೆ.
ಆದರೆ, ಈ ಆಟೋ ಚಾಲಕ ಸುರಕ್ಷತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಕೆಲವು ಕಾಳಜಿಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅದು ಬಹುಶಃ ಮೋಟಾರು ವಾಹನ ಕಾಯಿದೆಯ ಕೆಲವು ವಿಭಾಗವನ್ನು ಉಲ್ಲಂಘಿಸುತ್ತದೆ. ಪ್ರತಿಯೊಂದು ಭಾಗವನ್ನು ಪ್ರಮಾಣೀಕರಿಸಬೇಕಾಗಿದೆ, ವಿಶೇಷವಾಗಿ ಸುರಕ್ಷತೆಗೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸಬೇಕು ಎಂದು ಜರ್ಮನ್ ಟ್ರಕ್ ಉತ್ಪಾದನಾ ಕಂಪನಿಯ ವಿನ್ಯಾಸ ವಿಭಾಗದಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿರುವ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು ಆಟೋ ಚಾಲಕನ ಸ್ಮಾರ್ಟ್‌ವಾಚ್‌ಲ್ಲಿ UPI QR ಕೋಡ್, ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್!
ಇನ್ನು ಕಳೆದ ಕೆಲವು ದಿನಗಳ ಹಿಂದೆ ಮತ್ತೊಬ್ಬ ಆಟೋ ಡ್ರೈವರ್ ತನ್ನ ಸ್ಮಾರ್ಟ್ ವಾಚ್‌ನಲ್ಲಿ ಕ್ಯೂಆರ್ ಕೋಡ್ ಮೂಲಕ ಪಾವತಿ ಸ್ವೀಕರಿಸುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ನಮ್ಮ ಸಿಲಿಕಾನ್ ಸಿಟಿ, ಐ ಲವ್ ಬೆಂಗಳೂರು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಇನ್ನು ಆಟೋ ಅಣ್ಣಾ ಪೀಕ್ ಬೆಂಗಳೂರು ಡ್ರೈವ್ ಎಂಬ ಹ್ಯಾಶ್‌ಟ್ಯಾಗ್ ಮೂಲಕ ವೈರಲ್ ಆಗಿದೆ.