ಬೆಸ್ಕಾಂ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ, ನವೆಂಬರ್ 18 ರಂದು ಬೆಂಗಳೂರಿನ ಆಡುಗೋಡಿ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು (ನ.17): ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ ಬೆಂಗಳೂರಿನ ಆಡುಗೋಡಿ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಮೂಲಕ ತಿಳಿಸಿದೆ. ನವೆಂಬರ್‌ 18 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆಡುಗೋಡಿಯಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದ್ದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.

ವಿದ್ಯುತ್‌ ಅಡಚಣೆ ಇರುವ ಪ್ರದೇಶಗಳು

ಇದೇ ಕಾರಣಕ್ಕಾಗಿ ಆಡುಗೋಡಿ, ಸಲಾಪುರಿಯಾ ಟವರ್, ಬಿಗ್ ಬಜಾರ್, ಆಕ್ಸೆಂಚರ್, ಕೆ.ಎಮ್.ಎಫ್‌ ಗೋಡೌನ್, ನಂಜಪ್ಪ ಲೇಔಟ್‌, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮೀ ಲೇಔಟ್‌, ಮಹಲಿಂಗೇಶ್ವರ ಬಡಾವಾಣೆ, ಬೆಂಗಳೂರು ಡ್ಯೆರಿ, ಫೋರಮ್‌, ರಂಗದಾಸಪ್ಪ ಲೇಔಟ್‌, ಲಕ್ಕಸಂದ್ರ, ವಿಲ್ಸನ್ ಗಾರ್ಡನ್‌, ಚಿನ್ನಯ್ಯನ್ನ ಪಾಳ್ಯ, ಚಂದ್ರಪ್ಪ ನಗರ, ನಿಮ್ಯಾನ್ಸ್ ಅಡ್ಮಿನಿಸ್ರೆಟಿವ್ ಬ್ಲಾಕ್, ಬಂಡೆ ಸ್ಲಮ್, ಸುಣ್ಣದಕಲ್ಲು, ಬೃಂದವನ ಸ್ಲಮ್, ಲಾಲ್ ಜಿ ನಗರ, ಶಾಮಣ್ಣ ಗಾರ್ಡನ್‌ , ಎನ್ ಡಿ ರ್ ಐ, ಪೋಲಿಸ್ ವಸತಿ ಗೃಹಗಳು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರೋದಿಲ್ಲ ಎಂದು ಬೆಸ್ಕಾಂ ಕೇಂದ್ರ ಕಚೇರಿಯಿಂದ ಮಾಹಿತಿ ನೀಡಲಾಗಿದೆ.