Asianet Suvarna News Asianet Suvarna News

Fact Check: 'ಹೊಯ್ಸಳ' ಸಿನಿಮಾ ಚಿತ್ರೀಕರಣದ ವಿಡಿಯೋ 'ಬೆಳಗಾವಿ ಪೊಲೀಸರ ದಬ್ಬಾಳಿಕೆ' ಹೆಸರಲ್ಲಿ ವೈರಲ್‌

Cop Seen Kicking Man Fact Check: ಪೊಲೀಸ್ ಯೂನಿಫಾರ್ಮ್‌ನಲ್ಲಿದ್ದ ಡಾಲಿ ಧನಂಜಯ್ ಖಳನಟನೋರ್ವನಿಗೆ ಬೂಟುಗಾಲಿನಿಂದ ಒದ್ದು ಎಳೆದುಕೊಂಡು ಹೋಗುವ ದೃಶ್ಯದ ಚಿತ್ರೀಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ 

Video from Hoysala movie shooting in Belagavi Shared as police kicking man mnj
Author
First Published Nov 22, 2022, 3:03 PM IST

ಬೆಳಗಾವಿ (ನ. 22): ಬೆಳಗಾವಿ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಡಾಲಿ ಧನಂಜಯ (Daali Dhananjay) ಅಭಿನಯದ 'ಹೊಯ್ಸಳ' (Hoysala Cinema) ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಮಧ್ಯೆ ನವೆಂಬರ್ 16ರ ಮಧ್ಯಾಹ್ನ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ (Belagavi Channamma Circle) ನಟ ಡಾಲಿ ಧನಂಜಯ್ ಫೈಟ್ ಸೀನ್ ಚಿತ್ರೀಕರಣ ನಡೆದಿತ್ತು. ಈ ಸೀನ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ದೃಶ್ಯ ನೈಜ ಘಟನೆ ಎಂದು ಕೆಲವರು ಹೇಳುತ್ತಿದ್ದಾರೆ. ವೈರಲ್ ವಿಡಿಯೋದಲ್ಲಿ ಪೊಲೀಸ್ ಯೂನಿಫಾರ್ಮ್‌ನಲ್ಲಿದ್ದ ಡಾಲಿ ಧನಂಜಯ್ ಖಳನಟನೋರ್ವನಿಗೆ ಬೂಟುಗಾಲಿನಿಂದ ಒದ್ದು ಎಳೆದುಕೊಂಡು ಹೋಗುವ ದೃಶ್ಯ ಇದೆ‌. ಈ ದೃಶ್ಯವನ್ನು ಕೆಲವರು ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬೆಳಗಾವಿ ಪೊಲೀಸರನ್ನು ಟೀಕಿಸುತ್ತಿದ್ದಾರೆ. 'पोलिसाची दादागिरी बघायला जण समुदाय' (ಪೊಲೀಸರ ದಬ್ಬಾಳಿಕೆ ನೋಡಲು ಸೇರಿದ ಜನರು) ಎಂಬ ಕ್ಲೈಮ್‌ನೊಂದಿಗೆ ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ

Claim: Viral Video of Cop Seen Kicking Man | ವ್ಯಕ್ತಿಯನ್ನು ಪೊಲೀಸ್‌ ಒದೆಯುತ್ತಿರುವ ವೈರಲ್ ವಿಡಿಯೋ

Video from Hoysala movie shooting in Belagavi Shared as police kicking man mnj

Fact Check: ವೈರಲ್‌ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಡಿಯೋದ ಸ್ಕ್ರೀನ್‌ಶಾಟ್‌ ತೆಗೆದು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ (Google Reverse Image Search) ಮಾಡಿದಾಗ ಇದು ಬೆಳಗಾವಿ ನಗರದ ಚನ್ನಮ್ಮ ವೃತ್ತದ ದೃಶ್ಯ ಎಂಬುದು ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬೆಳಗಾವಿ ಪ್ರತಿನಿಧಿ ಮಹಾಂತೇಶ ಕುರಬೇಟ್ (Mahantesh Kurbet) ಅವರನ್ನು ಸಂಪರ್ಕಿಸಿದಾಗ ಈ ಬಗ್ಗೆ ಪೊಲೀಸರು ಪ್ರಕಟಣೆ ಹೊರಡಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 

ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಹೊಯ್ಸಳ ಚಿತ್ರದ ಚಿತ್ರೀಕರಣದ ವಿಡಿಯೋ ಕ್ಲಿಪ್ (ಪೊಲೀಸ್ ಅಧಿಕಾರಿ ಒಬ್ಬ ವ್ಯಕ್ತಿಯನ್ನು ಕೆಳಗೆ ತಳ್ಳಿ ಬೂಟಗಾಲಿನಿಂದ ಒದೆಯುತ್ತಿರುವ ದೃಶ್ಯ) ವೈರಲ್ ಮಾಡಿ ನೈಜ ಘಟನೆ ಎಂಬಂತೆ ಬಿಂಬಿಸಿ ಪೊಲೀಸ್ ಇಲಾಖೆಯ ಬಗ್ಗೆ ತಪ್ಪು ಸಂದೇಶ ರವಾನಿಸುತ್ತಿದ್ದು, ಕಾರಣ ಈ ಬಗ್ಗೆ ತಪ್ಪಾಗಿ ಅರ್ಥೈಸುಕೊಳ್ಳದಂತೆ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಪೋಸ್ಟ್ ಕಮೆಂಟ್ ಮಾಡದಂತೆ ಕೋರಲಾಗಿದೆ' ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.

Video from Hoysala movie shooting in Belagavi Shared as police kicking man mnj

ನವೆಂಬರ್ 16ರ ಮಧ್ಯಾಹ್ನ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸಾರ್ವಜನಿಕರು ಯಾರೂ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡದಂತೆ ಚಿತ್ರತಂಡ ಮನವಿ ಮಾಡಿತ್ತು.‌ ಆದರೂ ಕೆಲವರು ಈ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೀಗಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸುವ ಮೂಲಕ ಇದು ನೈಜ ದೃಶ್ಯವಲ್ಲ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಸಾರ್ವಜನಿಕ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ. 

Conclusion: ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಹೊಯ್ಸಳ ಚಿತ್ರದ ಚಿತ್ರೀಕರಣದ ವಿಡಿಯೋ ಕ್ಲಿಪ್ಪನ್ನು ವೈರಲ್ ಮಾಡಿ ನೈಜ ಘಟನೆ ಎಂಬಂತೆ ಬಿಂಬಿಸಿ ಪೊಲೀಸ್ ಇಲಾಖೆಯ ಬಗ್ಗೆ ತಪ್ಪು ಸಂದೇಶ ರವಾನಿಸಲಾಗುತ್ತಿದೆ.  

Follow Us:
Download App:
  • android
  • ios