Belagavi suvarna soudha ಉದ್ದೇಶ ಈಡೇರುತ್ತಿಲ್ಲ ಸಮಸ್ಯೆ ಪರಿಹಾರವಾಗುತ್ತಿಲ್ಲ, ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೆ ಹೆಚ್‌ಡಿಕೆ
- ಸುವರ್ಣ ಸೌಧ ನಿರ್ಮಾಣದ ಉದ್ದೇಶ ಈಡೇರುತ್ತಿಲ್ಲ
- ಉ.ಕ.ದ ಸಮಸ್ಯೆ ಪರಿಹಾರಕ್ಕೆ ಸುವರ್ಣಸೌಧದಿಂದ ಪ್ರಯೋಜನವಿಲ್ಲ
- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಅಸಮಾಧಾನ
ಬೆಳಗಾವಿ(ಡಿ.22): ಯಾವ ಉದ್ದೇಶಕ್ಕಾಗಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ(belagavi suvarna soudha) ನಿರ್ಮಾಣ ಮಾಡಿದ್ದೇವೋ ಆ ಉದ್ದೇಶ ಈಡೇರುತ್ತಿಲ್ಲ. ಉತ್ತರ ಕರ್ನಾಟಕ(North Karnataka) ಭಾಗದ ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸುವರ್ಣ ಸೌಧ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, 2006ರಲ್ಲಿ ಯಾವ ಉದ್ದೇಶದಿಂದ ವಿಧಾನಸಭೆ ಕಲಾಪ(assembly session) ನಡೆಸಬೇಕೆಂದು ಸುವರ್ಣಸೌಧ ಕಟ್ಟಲು ನಿರ್ಧಾರ ಮಾಡಿದ್ದೆವೋ ಆ ಆಶಯ ಈಡೇರುತ್ತಿಲ್ಲ ಎಂಬ ಭಾವನೆ ನನ್ನನ್ನೂ ಸೇರಿಸಿ ಎಲ್ಲರಲ್ಲೂ ಇದೆ. ಕೊನೆಯ ಎರಡು ದಿನ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚೆಗೆ ಅವಕಾಶ ನೀಡುವುದಾದರೆ ಮಾತ್ರ ನಾನು ಅಧಿವೇಶನದಲ್ಲಿ ಭಾಗಿಯಾಗುತ್ತೇನೆ ಎಂದು ಸ್ಪೀಕರ್‌ಗೆ ಮೊದಲೇ ಮಾಹಿತಿ ನೀಡಿದ್ದೆ. ಹೀಗಾಗಿ ಈಗ ಸದನದಲ್ಲಿ ಭಾಗಿಯಾಗಲು ಆಗಮಿಸಿದ್ದೇನೆ ಎಂದರು.
Belagavi Assembly Session: ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಗಳ ಕುರಿತು ಮಾತನಾಡುತ್ತೇನೆ : ಎಚ್‌ಡಿಕೆ
ಮತಾಂತರ ನಿಷೇಧ(Anti Conversion Bill) ವಿಧೇಯಕಕ್ಕೆ ವಿರೋಧ: ಮತಾಂತರ ನಿಷೇಧ ಮಸೂದೆಯನ್ನು ನಾವು ಸ್ಪಷ್ಟವಾಗಿ ವಿರೋಧಿಸುತ್ತೇವೆ. ಸದನದಲ್ಲಿ ನಮಗೆ ಬಹುಮತ ಇದೆ ಎಂದು ಅವರಿಗೆ ಎಲ್ಲ ಕಾನೂನನ್ನು ಜಾರಿಗೆ ತರಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಈ ಮಸೂದೆಗೆ ಜೆಡಿಎಸ್ ಬೆಂಬಲಿಸುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಪುಂಡರನ್ನು ಗಡೀಪಾರು ಮಾಡಿ-ಎಚ್‌ಡಿಕೆ
ರಾಜ್ಯದಲ್ಲಿ ಶಾಂತಿ ಕದಡಿ, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುವ ಮೂಲಕ ಗೂಂಡಾವರ್ತನೆ ತೋರುವವರನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು. ಇಂಥ ಪುಂಡರ ವಿರುದ್ಧ ದೇಶದ್ರೋಶ ಮತ್ತು ರಾಜ್ಯದ್ರೋಹದ ಕೇಸ್ ಹಾಕುವ ಕುರಿತು ತೀರ್ಮಾನ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಹೇಳಲಾಗುತ್ತಿದೆ. ಆದರೆ, ನನ್ನ ಅಭಿಪ್ರಾಯದಲ್ಲಿ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ರಾಜ್ಯದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವವರನ್ನು ಗಡಿಪಾರು ಮಾಡಬೇಕು ಎಂದರು.
Belagavi Winter Session ಅಧಿವೇಶನಕ್ಕೆ ಹೋಗಿ ಏನ್ಮಾಡಲಿ? ಪ್ರತಿ ದಿನ ಕಲಾಪ ವ್ಯರ್ಥ ಎಂದ ಹೆಚ್‌ಡಿ ಕುಮಾರಸ್ವಾಮಿ!
ಇದೇ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧವೂ ಕಿಡಿಕಾರಿದ ಅವರು, ಉದ್ಧವ್‌ಠಾಕ್ರೆ ಅವರೇ ನಿಮ್ಮ ರಾಜಕೀಯ ನಿಮ್ಮ ರಾಜ್ಯದಲ್ಲಿ ಇಟ್ಟುಕೊಳ್ಳಿ, ಇಲ್ಲಿ ಮೂಗು ತೂರಿಸಲು ಬರಬೇಡಿ ಎಂದರು.
ಪ್ರತಿಮೆ ಧ್ವಂಸಕ್ಕೆ ಕಿಡಿ ಕಾರಿದ್ದ ಮಾಜಿ ಸಿಎಂ:
ಬೆಳಗಿನ ಜಾವ ಬೆಳಗಾವಿಯಲ್ಲಿ ನಡೆದಿರುವ ಘಟನೆ ಖಂಡನೀಯ. ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಅವರ ಜೊತೆಗೂಡಿ ಹೋರಾಟ ನಡೆಸಿದ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಧಕ್ಕೆ ಉಂಟು ಮಾಡಿರುವುದು ದೇಶ ದ್ರೋಹದ ಕೆಲಸ. ನಮ್ಮವರೇ ನಮ್ಮ ಸ್ವಾತಂತ್ರ್ಯ ಹೋರಾಟಗಾರ ಪ್ರತಿಮೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮಹಾರಾಷ್ಟ್ರದ ಮರಾಠಿಗರ ಅಭಿಮಾನವನ್ನು ದುರುಪಯೋಗ ಮಾಡಿಕೊಂಡು ಇಂಥ ಕೆಲಸ ಮಾಡಿರುವುದು ಖಂಡನೀಯ. ಇದು ಕೇವಲ ಕನ್ನಡಿಗರಿಗೆ ಮಾತ್ರವಲ್ಲ, ದೇಶಕ್ಕೆ ಮಾಡಿರುವ ದ್ರೋಹ ಎಂದು HD ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದರು. ನವದೆಹಲಿಯಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಪ್ರತಿಮೆಯನ್ನು ಹಾಳು ಮಾಡಿರುವುದು ಹಾಗೂ ಬೆಳಗಾವಿಯಲ್ಲಿ ವಾಹನಗಳನ್ನು ಸುಟ್ಟು ಹೋಟೆಲ…ಗಳಿಗೆ ಕಲ್ಲು ಹೊಡೆದಿರುವ ಘಟನೆ ಅತ್ಯಂತ ಹೇಯ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಹನಗಳ ಮೇಲೆ ಕಲ್ಲು ತೂರುವುದು, ಬಂದ್ ಮಾಡುವುದು, ಅಂಗಡಿ ಮುಚ್ಚಿಸುವುದು ನೋಡಿದರೆ ಸರ್ಕಾರ ನಿಷ್ಕಿ್ರಯವಾಗಿದೆಯೇ? ಅಥವಾ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮೂರ್ನಾಲ್ಕೂ ಸಾವಿರ ಪೊಲೀಸರು ಇದ್ದರೂ ಇಂಥ ಘಟನೆ ನಡೆದಿರುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಚಾಟಿ ಬೀಸಿದರು.