ಬೆಳಗಾವಿ[ಅ.21]:  ಜಿಲ್ಲೆಯಲ್ಲಿ ಭಾರೀ ಸುರಿಯುತ್ತಿರುವ ಪರಿಣಾಮ ಮಲಪ್ರಭಾ ಜಲಾಶಯದಲ್ಲಿ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ  ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಬಳಿ ಇರುವ ಜಲಾಶಯದಿಂದ  30 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೀಗೆ ಏಕಾಏಕಿ ಡ್ಯಾಂನಿಂದ ನೀರು ಬಿಟ್ಟಿದ್ದರಿಂದ ಜಿಲ್ಲೆಯ ರಾಮದುರ್ಗ ಸೇರಿ ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿ ನದಿ ಪಾತ್ರದಲ್ಲಿರುವ ಗ್ರಾಮದ ಜನರಲ್ಲಿ ಮತ್ತೆ ಆತಂಕ ಪಡುತ್ತಿದ್ದಾರೆ. ಡ್ಯಾಂನಿಂದ ನೀರು ಬಿಟ್ಟಿದ್ದರಿಂದ ರಾಮದುರ್ಗ ತಾಲೂಕಿನ ಸುನ್ನಾಳ್, ಹಿರೇ ಹಂಪಿಹೋಳಿ, ಚಿಕ್ಕ ಹಂಪಿಹೋಳಿ ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಒಂದೇ ವರ್ಷದಲ್ಲಿ ಮೂರು ಭಾರೀ ಪ್ರವಾಹದ ಪರಿಸ್ಥಿತಿ ಬಂದಿದೆ.