ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ನೂರಾರು ಮನೆಗಳಿಗೆ ಆತಂಕ ತಂದಿದ್ದ ಬೃಹದಾಕಾರದ ಬಂಡೆಯನ್ನು ಸುರಕ್ಷಿತವಾಗಿ ತೆರವುಗೊಳಿಸುವಲ್ಲಿ ಎನ್‌ಡಿಆರ್‌ಎಫ್‌ ತಂಡ ಬುಧವಾರ ಯಶಸ್ವಿಯಾಗಿದೆ. ಈ ಮೂಲಕ ಪ್ರದೇಶದ ನಿವಾಸಿಗಳ ಆತಂಕ ದೂರವಾಗಿದೆ.

ಬೆಳಗಾವಿ(ಅ.24): ಭಾರಿ ಪ್ರಮಾಣದ ಮಳೆಯಿಂದಾಗಿ ಬೆಳಗಾವಿ ಜಿಲ್ಲೆ ಗೋಕಾಕ್‌ ನಗರದ ಮಲ್ಲಿಕಾರ್ಜುನ ಬೆಟ್ಟದಡಿ ಮಣ್ಣು ಕುಸಿದು, ನೂರಾರು ಮನೆಗಳಿಗೆ ಅಪಾಯ ತಂದೊಡ್ಡಿದ್ದ ಬಂಡೆಗಳ ಪೈಕಿ ಒಂದು ಬಂಡೆಯನ್ನು ಒಡೆದು ಸುರಕ್ಷಿತವಾಗಿ ತೆರವುಗೊಳಿಸುವಲ್ಲಿ ಎನ್‌ಡಿಆರ್‌ಎಫ್‌ ತಂಡ ಬುಧವಾರ ಯಶಸ್ವಿಯಾಗಿದೆ.

ಗೋಕಾಕ್‌ನಲ್ಲಿ ನಗರಸಭೆ ನೇತೃತ್ವದಲ್ಲಿ ಎನ್‌ಡಿಆರ್‌ಎಫ್‌ ತಂಡವು ಬುಧವಾರ ಬೆಳಗ್ಗೆ 7.30ಕ್ಕೆ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ಈ ವೇಳೆ ರಾಜಸ್ಥಾನ ಮೂಲದ ಮೂರು ಜನ ಬಂಡೆಗಲ್ಲು ಒಡೆಯುವ ತಜ್ಞರು ಮತ್ತು ಹತ್ತು ಜನ ಸಹಾಯಕರು, ಕೊಲ್ಲಾಪುರ ಹಾಗೂ ಇಳಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಕಾರ್ಮಿಕರು ಕೂಡ ಕಾರ್ಯಾಚರಣೆಯಲ್ಲಿ ಹಾಜರಿದ್ದರು.

ಕೊಟ್ಟಿದ್ದ ಚಿನ್ನಾಭರಣ ವಾಪಾಸ್‌ ಕೇಳಿದ್ದಕ್ಕೆ ಪ್ರೇಯಸಿಯ ಕೊಂದ KSRTC ಚಾಲಕ!

110 ಟನ್‌ ಮತ್ತು 211 ಟನ್‌ ಸಾಮರ್ಥ್ಯದ ಎರಡು ಬಂಡೆಗಳ ಪೈಕಿ 110 ಟನ್‌ ಸಾಮರ್ಥ್ಯದ ಬಂಡೆಗಲ್ಲನ್ನು ಮಾತ್ರ ಈಗ ತೆರವುಗೊಳಿಸಲಾಗಿದೆ. ಉಳಿದ ಬಂಡೆಗಲ್ಲನ್ನು ಗುರುವಾರಕ್ಕೆ ತೆರವುಗೊಳಿಸಲು ನಿರ್ಧರಿಸಲಾಗಿದೆ.

ಮಲ್ಲಿಕಾರ್ಜುನ ಬೆಟ್ಟದಿಂದ ಅಪಾಯಕ್ಕೆ ಒಳಗಾಗುವ ಗೋಕಾಕ ನಗರದ ಮನೆಗಳ ಮಾಲೀಕರು ಬೇರೆ ಕಡೆ ತೆರಳುವಂತೆ ತಾಲೂಕು ಆಡಳಿತವು ಸೂಚನೆ ನೀಡಿತ್ತು. ಕೆಲವರು ಈ ಸೂಚನೆಯನ್ನು ಪಾಲಿಸಿದರು. ಇನ್ನೂ ಕೆಲವರು ಮನೆಯಿಂದ ಯಾವ ಕಾರಣಕ್ಕೂ ಹೊರಗೆ ಹೋಗಲಿಲ್ಲ.

ಗಂಗಾವತಿ: ಪ್ರವಾಹ ಬಂದರೆ ಇಲ್ಲಿನ ಮಕ್ಕಳಿಗೆ ಬಯಲಲ್ಲೇ ಪಾಠ