Belagavi ರಣಬಿಸಿಲಿಗೆ ಹೈರಾಣ ಜಾನುವಾರುಗಳ ಮೂಕ ರೋಧನ!

  • ಬರಗಾಲ ಘೋಷಣೆ ಆಗದಿದ್ರೂ ಸಹ ರಣಬಿಸಿಲಿಗೆ ಜಾನುವಾರು ಹೈರಾಣು!
  • ಮೇವು ನೀರಿಗಾಗಿ ಆಗ್ರಹಿಸುತ್ತಿದ್ದಾರೆ ಬೆಳಗಾವಿಯ ಕಡೆ ಭಾಗದ ಜನ! 
  • ಅಥಣಿ ತಾಲೂಕಿನ ಹಲವೆಡೆ ಕುಡಿಯುವ ನೀರು ಮತ್ತು ದನಕರುಗಳಿಗೆ ಮೇವಿನ ಸಮಸ್ಯೆ 
livestock and people are suffering from food and water in belagavi gow

ವರದಿ: ಮುಷ್ತಾಕ್ ಪೀರಜಾದೇ,  ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ(ಏ.23): ಪ್ರತಿಬಾರಿ ಬೇಸಿಗೆ ಬಂತು ಅಂದ್ರೆ ಸಾಕು ಜಿಲ್ಲಾಡಳಿತಗಳು ಬರ ಪೀಡಿತ ಪ್ರದೇಶಗಳಲ್ಲಿ ಗೋಶಾಲೆ (Goshala), ಮೇವು ಬ್ಯಾಂಕ್ ಸೇರಿದಂತೆ ಜಾನುವಾರುಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತಿದ್ದವು.‌ ಬರಪೀಡಿತ ಪ್ರದೇಶಗಳು ಅಂತ ಗುರುತಿಸದಿದ್ದರೂ ಸಹ ಬೆಳಗಾವಿ (Belagavi) ಜಿಲ್ಲೆಯ ಕೆಲ ಭಾಗಗಳಲ್ಲಿ ಜನ ಕುಡಿಯುವ ನೀರು ಹಾಗೂ ದನಕರುಗಳ ಮೇವಿಗಾಗಿ ಪರಿತಪಿಸುತ್ತಿದ್ದಾರೆ.  ಜಾನುವಾರುಗಳಿಗೆ ಹಸಿಮೇವು ನೀಡಿ ಅಂತ ರೈತರು (Farmers) ಅಧಿಕಾರಿಗಳಿಗೆ ಆಗ್ರಹಿಸುತ್ತಿದ್ದಾರೆ. 

ಒಂದು ಕಡೆ ಬತ್ತಿ ಹೋಗಿರುವ ಕೆರೆ (Lake), ಇನ್ನೊಂದು ಕಡೆ ಬಾಡಿ ಹೋಗಿರುವ ಕಬ್ಬಿನ ಬೆಳೆ, ಹಸಿ ಮೇವಿಲ್ಲದೆ ಬಣಗುಡುತ್ತಿರುವ ಜಾನುವಾರು ಕೋಣೆ, ಬಿಸಿಲಿನ ಬೇಗೆಗೆ ಮೂಕ ರೋಧನೆ ಅನುಭವಿಸುತ್ತಿರುವ ಜಾನುವಾರುಗಳು (livestock). ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟ್ಟ ಕಡೆಯ ಹಳ್ಳಿಗಳಲ್ಲಿ ಇಲ್ಲಿನ ಸಂಬರಗಿ, ಕೊಟ್ಟಲಗಿ, ಕಕಮರಿ, ಅನಂತಪುರ,ಐಗಳಿ, ಅಡಳ್ಳಿಹಟ್ಟಿ ಸೇರಿದಂತೆ  10 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರು (Drinking water) ಮತ್ತು ದನಕರುಗಳಿಗೆ ಮೇವಿನ ಸಮಸ್ಯೆ ಆಗ್ತಿದೆ.

ತುಳುನಾಡಿನ ಧರ್ಮ ದಂಗಲ್ ಮಧ್ಯೆಯೂ ಮಸೀದಿಗೆ ದೈವಗಳ ಭೇಟಿ!

ಪ್ರತಿವರ್ಷ ಈ ಸಮಯಕ್ಕೆ ಜಿಲ್ಲಾಡಳಿತದಿಂದ ಗೋಶಾಲೆ ಹಾಗೂ ಮೇವು (fodder) ಬ್ಯಾಂಕ್ ಮಾಡಿ ರೈತರಿಗೆ ಸರ್ಕಾರ ನೆರವಾಗುತ್ತಿತ್ತು ಆದರೆ ಈ ಬಾರಿ ಯಾವುದೇ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಹೀಗಾಗಿ ರೈತರು ಕುಡಿಯುವ ನೀರು ಹಾಗೂ ದನ ಕರುಗಳ  ಮೇವಿಗಾಗಿ ಆಗ್ರಹಿಸುತ್ತಿದ್ದಾರೆ.

ಅಥಣಿ ಭಾಗದ ಕೆಲವು ಕಡೆಗಳಲ್ಲಿ ರೈತರು ಹೆಚ್ಚಾಗಿ ಹೈನುಗಾರಿಕೆಯನ್ನೆ ತಮ್ಮ ಉಪಜೀವನವನ್ನಾಗಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದು ದನಕರುಗಳಿಗೆ ಹಸಿ ಮೇವಿನ ಕೊರತೆಯಿಂದಾಗಿ ಹಾಲಿನ ಇಳುವರಿಯ ಮೇಲೂ ಸಹ ಹೊಡೆತ ಬಿದ್ದಿದೆ ಎನ್ನುವುದು ರೈತರ ಅಭಿಪ್ರಾಯ.‌

ಶೀಘ್ರವೇ 2 ಸಾವಿರಕ್ಕೂ ಹೆಚ್ಚು KSP CONSTABLE RECRUITMENT: ಪ್ರವೀಣ್ ಸೂದ್ 

ಹೀಗಾಗಿ ಅಥಣಿಯ ಒಣಭೂಮಿ ಪ್ರದೇಶಗಳಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್ ಸ್ಥಾಪಿಸಬೇಕು ಅಂತ ರೈತರು ಆಗ್ರಹಿಸುತ್ತದ್ದಾರೆ. ಇನ್ನು ಈ ಬಗ್ಗೆ ಅಧಿಕಾರಿಗಳಿಗೆ ಅಥಣಿ ಶಾಸಕ ಮಹೇಶ ಕುಮಟಳ್ಳಿಯವರೂ ಸಹ ಮನವರಿಕೆ ಮಾಡಿದ್ದಾರೆ. ಬರಗಾಲ ಘೋಷಣೆ ಆಗದಿದ್ದಕ್ಕೆ ನಾವು ಸುಮ್ಮನೆ ಇದ್ದೆವು ಈಗ ಅದ್ಯತೆ ಮೇರೆಗೆ ಎಲ್ಲೆಲ್ಲಿ ನೀರು ಮತ್ತು ಮೇವು ಒದಗಿಸಬೇಕೊ ಅಲ್ಲಿಗೆ ನಾವು  ನೀರು ಹಾಗೂ ಮೇವು ಒದಗಿಸುತ್ತವೆ ಅಂತಿದ್ದಾರೆ ಅಧಿಕಾರಿಗಳು.

ಒಟ್ಟಿನಲ್ಲಿ ಬರಗಾಲ ಘೋಷಣೆ ಆಗದಿದ್ದರೂ ಸಹ ಜಿಲ್ಲೆಯ ಕೆಲವು ಕಡೆಗಳಲ್ಲಿ ಮೇವು ಹಾಗೂ ನೀರಿನ ಕೊರತೆ ಕಾಣಿಸುತ್ತಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರ ಆಧ್ಯತೆಗಳಿಗೆ ಸ್ಪಂದಿಸಬೇಕಿದೆ..

Latest Videos
Follow Us:
Download App:
  • android
  • ios