ಮಹಾಮಳೆಗೆ ಜಿಲ್ಲೆ ಅಕ್ಷರಶಃ ನಲುಗಿಹೋಗಿದೆ| ಭಾರೀ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ತಾಲೂಕಿನ ಹೊಸ ವಂಟಮೂರಿ ಬಳಿ ರಸ್ತೆ ಕುಸಿತ|  ಬೆಳಗಾವಿಯಿಂದ ಪನಗುತ್ತಿ ಗ್ರಾಮಕ್ಕೆ ಹೊರಟ್ಟಿದ್ದ ಬಸ್ ಭೂಮಿಯಲ್ಲಿ ಸಿಲುಕಿದೆ| ಪ್ರಯಾಣಿಕರಿಗೆ ಸನ್ನ ಪುಟ್ಟ ಗಾಯ| ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ| 

ಬೆಳಗಾವಿ[ಅ.21]: ಮಹಾಮಳೆಗೆ ಜಿಲ್ಲೆ ಅಕ್ಷರಶಃ ನಲುಗಿಹೋಗಿದೆ. ಭಾರೀ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ತಾಲೂಕಿನ ಹೊಸ ವಂಟಮೂರಿ ಬಳಿ ರಸ್ತೆ ಕುಸಿದಿದೆ. ಈ ವೇಳೆ ಬೆಳಗಾವಿಯಿಂದ ಪನಗುತ್ತಿ ಗ್ರಾಮಕ್ಕೆ ಹೊರಟ್ಟಿದ್ದ ಬಸ್ ಭೂಮಿಯಲ್ಲಿ ಸಿಲುಕಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭೂಮಿಯಡಿ ಬಸ್ ಸಿಲುಕಿದ್ದರಿಂದ ಪ್ರಯಾಣಿಕರಿಗೆ ಸನ್ನ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಬೆಳಗಿನ ಜಾವ ರಸ್ತೆ ಸರಿಯಾಗಿದೆ ಎಂದು ಸರ್ಕರಿ ಬಸ್ ಚಲಾಯಿಸಿದಾಗ ಈ ದುರ್ಘಟನೆ ಸಂಭವಿಸಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಸ್ಥಳಿಯ ಜನರು ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ.