ಪಾಲಬಾವಿ(ಅ.10): ವಿಕಲಚೇತನರ ಮನೋಬಲ ಹಾಗೂ ಭವಿಷ್ಯ ಜೀವನ ಭದ್ರಪಡಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು ನೈಜ ಫಲಾನುಭವಿಗಳಿಗೆ ದೊರೆಯದೆ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಗಳು ಯಶಸ್ವಿಯಾಗುವಲ್ಲಿ ಹಿನ್ನಡೆಯಾಗುವುದರೊಂದಿಗೆ ಯೋಜನೆಗಳ ಪ್ರಯೋಜನ ಪಡೆಯುವ ಅವಲಂಬಿತರನ್ನು ಭಾರೀ ಸಂಕಷ್ಟಕ್ಕೆ ದೂಡಿದೆ.

ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ ವಿಕಲಚೇತನ ರಮೇಶ ಶಿವಲಿಂಗಪ್ಪ ಖಾನಗೌಡ (21) ಕಳೆದ 2 ವರ್ಷಗಳಿಂದ ಮಾಶಾನವಿಲ್ಲದೆ ಪರಿತಪಿಸುತ್ತಿದ್ದಾನೆ. ಕಳೆದ ಎರಡು ವರ್ಷಗಳಿಂದ ಮಾಸಾಶನವಿಲ್ಲದೆ ತಾಲೂಕು ಸಂಬಂಧಿಸಿದ ಅಧಿಕಾರಿಗಳ ಕಚೇರಿಗೆ ರಮೇಶ ಅಲೆದು ಸೋತು ಸುಮ್ಮನಾಗಿದ್ದಾನೆ. 

ಬರುತ್ತಿದ್ದ 400 ಕೂಡ ನಿಂತಿದೆ:

ಈ ಮೊದಲು ತಿಂಗಳಿಗೆ 400 ರಂತೆ ಮಾಸಾಶನವು ಬರುತಿತ್ತು. 2009 ಜನವರಿ 30 ರಂದು ಅಂದಿನ ತಾಲೂಕು ದಂಡಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಅಂಗವಿಕಲ ರಮೇಶನ ದಾಖಲೆ ಪರಿಶೀಲಿಸಿ ವ್ಯಕ್ತಿಗೆ ಶೇ.75 ರಷ್ಟು ಅಂಗವಿಕಲತೆ ಇರುವುದರಿಂದ ಮಾಸಿಕ 400 ಮಾಸಾಶನ ರದ್ದು ಪಡಿಸಿ ತಕ್ಷಣವೇ ಮಾರ್ಚ್ 2009ರಿಂದ ತಿಂಗಳಿಗೆ 1000 ಮಾಸಿಕ ಮಾಸಾಶನ ಜಾರಿಗೆ ಬರುವಂತೆ ಮಂಜೂರಾತಿಯ ಆದೇಶ ಪತ್ರ ನೀಡಿದರು. ಕೇವಲ 3-4 ತಿಂಗಳು ಮಾತ್ರ ಒಂದು ಸಾವಿರ ಮಾಸಾಶನ ನೀಡಿ ಮತ್ತೇ ಬಂದಾಗಿದೆ. ನಂತರ 400 ಮಾಸಾಶನ ಮುಂದುವರೆಸಿದ್ದು, ಕೆಲವೇ ತಿಂಗಳ ನಂತರ ಅದೂ ಕೂಡ ನಿಂತು ಹೋಗಿದೆ.

ಮರಿಚಿಕೆಯಾದ ವಿಕಲಚೇತನರ ಯೋಜನೆಗಳು:

ಜನಪ್ರತಿನಿಧಿಗಳ, ಸರ್ಕಾರದ ಅಧಿಕಾರಿಗಳ ಕಚೇರಿಗೆ ಅನೇಕ ಬಾರಿ ಅಲೆದರು ಏನು ಪ್ರಯೋಜನವಾಗಿಲ್ಲ. ಸರ್ಕಾರದಿಂದ ವಿಕಲಚೇತನರಿಗೆ ಸಿಗುವಂತಹ ಸೈಕಲ್‌ ಹಾಗೂ ತ್ರಿಚಕ್ರ ವಾಹನ(ಬೈಕ್‌) ಯೋಜನೆಗಳು ರಮೇಶ ಪಾಲಿಗೆ ಮರಿಚಿಕೆಯಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರು, ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ ವಿಕಲಚೇತನ ರಮೇಶಗೆ ಕಳೆದ 2 ವರ್ಷಗಳಿಂದ ಮಾಶಾಸನ ಬರುವುದು ನಿಂತು ಹೋಗಿರುವುದು ತಿಳಿದು ಬಂದಿದೆ. ಅವರಿಗೆ ಸರ್ಕಾರ ಯೋಜನೆಗಳು ಸಿಕ್ಕಿರುವುದಿಲ್ಲ. ಸಂಬಂಧಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರತಿ ತಿಂಗಳು 1 ಸಾವಿರ ಮಾಶಾಸವನ್ನು ಪುನಃ ಆರಂಭಿಸಲಾಗುವುದು. ಅವರಿಗೆ ಸರ್ಕಾದಿಂದ ತ್ರಿಚಕ್ರ(ಬೈಕ್‌) ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ. 

ಸ್ವಾವಲಂಬಿ ಜೀವನ ನಡೆಸಬೇಕು. ನನ್ನಂತೆ ಅನೇಕ ವಿಕಲಚೇತನರು ಸರ್ಕಾರದಿಂದ ಅನೇಕ ಸೌಲಭ್ಯ ಪಡೆದು ಸ್ವಾಲಂಬಿಗಳಾಗಿ ಜೀವನ ನಡೆಸುತ್ತಿದ್ದಾರೆ. ನನಗೂ ಕುಡಾ ಅವರಂತೆ ಸರ್ಕಾರವು ಆರ್ಥಿಕ ನೆರವನ್ನು ನೀಡಿದರೆ ಸ್ವತಃ ನನ್ನ ಕಾಲ ಮೆಲೆ ನಿಂತು. ಜೀವನ ನಡೆಸಬೇಕು ಎಂದು ಆಸೆ ಹಂಬಲವಿದೆ ಎಂದು ಸುಲ್ತಾನಪುರದ ವಿಕಲಚೇತನ ರಮೇಶ ಶಿವಲಿಂಗಪ್ಪ ಖಾನಗೌಡ ಅವರು ತಿಳಿಸಿದ್ದಾರೆ.