ಬೆಳಗಾವಿ[ನ.3]: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಿಯೋ ಅದು ಆಂತರಿಕವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಇದೆ ಅಲ್ವಾ ಆಡಿಯೋ, ಕಾಂಗ್ರೆಸ್ ದಿವಾಳಿಯಾಗಿದೆ ಅದಕ್ಕೆ ಇದನ್ನೆ ಮುಂದಿಟ್ಟುಕ್ಕೊಂಡು ಈ ರೀತಿ ಮಾಡುತ್ತಿದ್ದಾರೆ. ಮೈತ್ರಿ ಸರಕಾರ ಬೀಳುವುದಕ್ಕೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಆಂತರಿಕ ಕಚ್ಚಾಟದಿಂದ ಸರಕಾರವನ್ನ ಕಳೆದುಕ್ಕೊಂಡಿದ್ದಾರೆ. ಅನರ್ಹ ಶಾಸಕರು ನಾವು ರಾಜೀನಾಮೆ ಕೊಡಲಿಕ್ಕೆ ಸಿದ್ದರಾಮಯ್ಯನೆ ಕಾರಣ ಅಂತ ಹೇಳಿಕ್ಕೊಂಡಿದ್ದಾರೆ. ಅವರೆ ಹೇಳಿರುವಾಗ ಯಾವ ಸರ್ಟಿಫಿಕೆಟ್ ಬೇಕು, ರಮೇಶ್ ಜಾರಕಿಹೊಳಿ ಅವರು ಕೂಡ ಇದನ್ನೆ ಹೇಳಿದ್ದಾರೆ. ಯಡಿಯೂರಪ್ಪ ಅವರ ಆಡಿಯೋ ಬಗ್ಗೆ ತನಿಖೆ ಮಾಡೋ ಪ್ರಶ್ನೆನೆ ಇಲ್ಲ. ರಾಜ್ಯದ ಸ್ಥಿತಿಗತಿಯ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಿದ್ದಾರೆ.