Asianet Suvarna News Asianet Suvarna News

ಮೊಂಡಾಟ ಮಾಡಿದ ಎಂಇಎಸ್‌ಗೆ ಜಿಪಂ ಸಿಇಒ ಪಂಚ್, ಮೊದಲು ಕನ್ನಡ ಕಲಿಯಿರಿ

ಮತ್ತೆ ಭಾಷಾ ಕ್ಯಾತೆ ತೆಗೆದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಗೆ ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ ಸರಿಯಾದ ಉತ್ತರ ನೀಡಿದ್ದಾರೆ.

Belagavi CEO asks MES people to learn Kannada first
Author
Bengaluru, First Published Jul 15, 2019, 4:03 PM IST

ಬೆಳಗಾವಿ(ಜು.15) ಭಾಷಾ ವಿಷಯದಲ್ಲಿ ಮೊಂಡುತನ ತೋರಿಸಿದ ಎಂಇಎಸ್ ಮುಖಂಡರಿಗೆ ಬೆಳಗಾವಿ ಜಿಪಂ ಸಿಇಒ ಸರಿಯಾಗಿಯೇ ಕಿವಿ ಹಿಂಡಿದ್ದಾರೆ.

ಮರಾಠಿ ಭಾಷೆಯಲ್ಲೇ ಅಗತ್ಯ ದಾಖಲೆ ಬೇಕೆಂದು  ಕ್ಯಾತೆ ತೆಗೆದಿದ್ದ ಎಂಇಎಸ್ ಮುಖಂಡರ ಬೇಡಿಕೆಗೆ ಜಿಲ್ಲಾ ಪಂಚಾಯಿತಿ ಕಿಮ್ಮತ್ತು ನೀಡಿಲ್ಲ.

ಕರ್ನಾಟಕದಲ್ಲಿ ಕನ್ನಡವೇ  ಆಡಳಿತ ಭಾಷೆಯಾಗಿದ್ದು, ಕನ್ನಡದಲ್ಲೇ ಅಗತ್ಯ ದಾಖಲೆ ನೀಡಲಾಗುತ್ತದೆ.  ಕರ್ನಾಟಕದಲ್ಲಿರುವ ನೀವು ಮೊದಲುಕನ್ನಡ ಕಲಿಯಿರಿ ಎಂದು ಡಿಸಿ ಬೊಮ್ಮನಹಳ್ಳಿ ಎಂಇಎಸ್ ಮುಖಂಡರಿಗೆ ಖಡಕ್ ಆಗಿ ಹೇಳಿದ್ದಾರೆ.

ಜೈ ಶ್ರೀರಾಮ್ ಘೋಷಣೆ, ಟ್ರೋಲ್ ಮತ್ತು ಸಂಸದೆ ನುಸ್ರತ್ ಜಹಾನ್!

ನಗರಪಾಲಿಕೆ ಚುನಾವಣೆ ವೇಳೆಯೂ ಎಂಇಎಸ್ ಮೊಂಡಾಟ ತೋರಿಸಿತ್ತು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸದಸ್ಯರು, ಕನ್ನಡ ಹೋರಾಟಗಾರರ ಕುರಿತು ಅವಹೇಳನ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟು ಕಪಿಚೇಷ್ಟೆ ಮಾಡಿದ್ದರು.

ಕನ್ನಡ ಹೋರಾಟಗಾರರ ಗುಂಪೊಂದು ಆರ್‌ಪಿಡಿ ವೃತ್ತದ ಸಮೀಪ ಅಂಗಡಿಗಳಿಗೆ ತೆರಳಿ, ಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ಕೊಡುವಂತೆ ಕೋರಿ ಗುಲಾಬಿ ಹೂ ನೀಡಿತ್ತು. ಮರಾಠಿ, ಇಂಗ್ಲಿಷ್‌ ಬದಲಿಗೆ ಕನ್ನಡಕ್ಕೆ ಅಗ್ರಸ್ಥಾನ ಕೊಡಬೇಕು ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಎಂಇಎಸ್‌ನವರು, ಗಡಿ ವಿಚಾರ ಎತ್ತಿಕೊಂಡು ತಮ್ಮ ಮೊಂಡಾಟಕ್ಕೆ ಸೋಶಿಯಲ್ ಮೀಡಿಯಾ ಬಳಸಿಕೊಂಡಿದ್ದರು.

 

Follow Us:
Download App:
  • android
  • ios