ಮೂಡಲಗಿ[ನ.7]: ನಾಗನೂರ ಪಟ್ಟಣದ ಅಭಿವೃದ್ಧಿಗೆ 3.87 ಕೋಟಿ ರು. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಾಗನೂರ ಪಟ್ಟಣದಲ್ಲಿ 2019-20 ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿಯ 37.47 ಲಕ್ಷ ವೆಚ್ಚದ ಕಾಮಗಾರಿಗಳು, 14 ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದ 1.75 ಕೋಟಿ ವೆಚ್ಚದ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ 1.75 ಕೋಟಿ ವೆಚ್ಚದ ನಾಗನೂರ ಹಳ್ಳಕ್ಕೆ ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಾಗನೂರ ಪಟ್ಟಣದ ಪ್ರಗತಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈಗ ಮಂಜೂರಾಗಿರುವ ಕಾಮಗಾರಿಗಳಿಂದ ಪಟ್ಟಣ ಮತ್ತಷ್ಟು ಸುಂದರವಾಗಿ ಗೋಚರಿಸುತ್ತದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ, ಶೌಚಾಲಯ ನಿರ್ಮಾಣ ಕಾಮಗಾರಿಗಳು ನಡೆಯಲಿವೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ ಜನರ ಪ್ರೀತಿ ಗಳಿಸುವಂತೆ ಪಂಚಾಯತಿ ಸದಸ್ಯರಿಗೆ ಸಲಹೆ ಮಾಡಿದರು.

ದೇವರು, ತಾಯಿ-ತಂದೆ ಮತ್ತು ಜನರ ಪ್ರೀತಿ ವಿಶ್ವಾಸ ಹಾಗೂ ಆಶೀರ್ವಾದದಿಂದ ಸಹಕಾರಿರಂಗದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷನಾಗಿ ರೈತರ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕೆಎಂಎಫ್ ಬಲವರ್ಧನೆಗೆ ವಿನೂತನ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದಾಗಿ ತಿಳಿಸಿದರು.

ಮುಖಂಡರಾದ ಚಂದ್ರು ಬೆಳಗಲಿ, ಕೆಂಚಗೌಡಪಾಟೀಲ, ಶಂಕರ ಹೊಸಮನಿ, ಸುಭಾಸ ಬೆಳಗಲಿ,ಪರಸಪ್ಪ ಬಬಲಿ, ಅಲ್ಲಪ್ಪ ಗುಡೆನ್ನವರ, ಬಾಳಗೌಡಪಾಟೀಲ, ಮುತ್ತೆಪ್ಪ ಖಾನಪ್ಪಗೋಳ, ಯಲ್ಲಪ್ಪ ಹೊರಟ್ಟಿ, ಸಿದ್ದಪ್ಪ ಯಾದಗೂಡ, ಶಂಕರ ದಳವಾಯಿ,ಭೀಮಗೌಡ ಹೊಸಮನಿ, ಗಜಾನನ ಯರಗಣವಿ,ಬಸವರಾಜ ಹಳಿಗೌಡರ, ಸತ್ತೆಪ್ಪ ಕರವಾಡಿ, ಮಂಗಳಾ ಕೌಜಲಗಿ, ಸಣ್ಣ ನೀರಾವರಿ ಇಲಾಖೆಯ ಜೆಇಜೈಭೀಮ, ಪಪಂ ಮುಖ್ಯಾಧಿಕಾರಿ ರವಿ ರಂಗಸುಭೆ,ಗುತ್ತಿಗೆದಾರ ಬಸವರಾಜ ಕಸ್ತೂರಿ, ಪಪಂ ಸದಸ್ಯರು,ಪ್ರಮುಖರು ಉಪಸ್ಥಿತರಿದ್ದರು.