Asianet Suvarna News Asianet Suvarna News

SBI SCO Recruitment 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 39 ಹುದ್ದೆಗಳಿಗೆ ನೇಮಕಾತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಇಲಾಖೆಯಲ್ಲಿ ಖಾಲಿ ಇರುವ ವಿವಿಧ 39 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನವಾಗಿದೆ 

sbi recruitment 2022 notification for SCO posts gow
Author
First Published Dec 10, 2022, 5:51 PM IST

ನವದೆಹಲಿ (ಡಿ.10): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಎಸ್‌ಬಿಐ ಡೆಪ್ಯುಟಿ ಮ್ಯಾನೇಜರ್ (ಡೇಟಾಬೇಸ್ ಅಡ್ಮಿನಿಸ್ಟ್ರೇಟರ್), ಸೀನಿಯರ್ ಎಕ್ಸಿಕ್ಯೂಟಿವ್ (ತಾಂತ್ರಿಕ ಬೆಂಬಲ) ಇತ್ಯಾದಿಗಳನಗನೊಳಗೊಂಡ  36 ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಅಧಿಕೃತ ವೆಬ್‌ಸೈಟ್  sbi.co.in ನಲ್ಲಿ  ಹೆಚ್ಚಿನ ಮಾಹಿತಿ ದೊರೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನವಾಗಿದೆ.

ಒಟ್ಟು 36 ಹುದ್ದೆಗಳ ಮಾಹಿತಿ ಇಂತಿದೆ
ಉಪ ವ್ಯವಸ್ಥಾಪಕರು (ಡೇಟಾಬೇಸ್ ನಿರ್ವಾಹಕರು): 6 ಹುದ್ದೆಗಳು
ಉಪ ವ್ಯವಸ್ಥಾಪಕರು (ಮೂಲಸೌಕರ್ಯ ಎಂಜಿನಿಯರ್): 2 ಹುದ್ದೆಗಳು 
ಉಪ ವ್ಯವಸ್ಥಾಪಕರು (ಜಾವಾ ಡೆವಲಪರ್): 5 ಹುದ್ದೆಗಳು
ಉಪ ವ್ಯವಸ್ಥಾಪಕರು (WAS ನಿರ್ವಾಹಕರು): 3 ಹುದ್ದೆಗಳು
ಹಿರಿಯ ಕಾರ್ಯನಿರ್ವಾಹಕ (ಮುಂಭಾಗದ ಕೋನೀಯ ಡೆವಲಪರ್): 3 ಹುದ್ದೆಗಳು
ಹಿರಿಯ ಕಾರ್ಯನಿರ್ವಾಹಕ (PL & SQL ಡೆವಲಪರ್): 3 ಹುದ್ದೆಗಳು
ಹಿರಿಯ ಕಾರ್ಯನಿರ್ವಾಹಕ (ಜಾವಾ ಡೆವಲಪರ್): 10 ಹುದ್ದೆಗಳು
ಹಿರಿಯ ಕಾರ್ಯನಿರ್ವಾಹಕ (ತಾಂತ್ರಿಕ ಬೆಂಬಲ) : 1 ಹುದ್ದೆ
ಕಾರ್ಯನಿರ್ವಾಹಕ (ತಾಂತ್ರಿಕ ಬೆಂಬಲ) : 2 ಹುದ್ದೆಗಳು
ಹಿರಿಯ ವಿಶೇಷ ಕಾರ್ಯನಿರ್ವಾಹಕ (ತಂತ್ರಜ್ಞಾನ ವಾಸ್ತುಶಿಲ್ಪಿ) : 1 ಹುದ್ದೆ

ಶೈಕ್ಷಣಿಕ ವಿದ್ಯಾಭ್ಯಾಸ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ  BE/ BTech (ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ ಮಾಹಿತಿ ತಂತ್ರಜ್ಞಾನ/ ಸಾಫ್ಟ್‌ವೇರ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್ ಅದಿರು ಸಂಬಂಧಿತ ವಿಭಾಗದಲ್ಲಿ ಸಮಾನ ಪದವಿ) ಅಥವಾ MCA ಅಥವಾ MTech/ MSc ನಲ್ಲಿ (ಕಂಪ್ಯೂಟರ್ ಸೈನ್ಸ್/ ಮಾಹಿತಿ ತಂತ್ರಜ್ಞಾನ/ ಎಲೆಕ್ಟ್ರಾನಿಕ್ & ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್) ಮಾಡಿರಬೇಕು.

ವಯೋಮಿತಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನಿಯಮಾನುಸಾರ ವಯೋಮಿತಿ ಹೊಂದಿರಬೇಕು. ಹಿರಿಯ ಕಾರ್ಯನಿರ್ವಾಹಕ (ತಾಂತ್ರಿಕ ಬೆಂಬಲ) ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 21 ರಿಂದ 35 ವರ್ಷದ ಒಳಗಿರಬೇಕು. ಮಿಕ್ಕುಳಿದ ಹುದ್ದೆಗಳಿಗೆ 21 ರಿಂದ 32 ವರ್ಷದ ಒಳಗಿರಬೇಕು.

Global Layoffs Impact India: ಜಾಗತಿಕ ಮಟ್ಟದ ಉದ್ಯೋಗ ಕಡಿತ ಭಾರತದ ಮೇಲೆ ಹೇಗೆ

ಅರ್ಜಿ ಶುಲ್ಕ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ  ಸಾಮಾನ್ಯ/EWS/OBC ಅಭ್ಯರ್ಥಿಗಳು 750 ರೂ ಅರ್ಜಿ ಶುಲ್ಕ ಪಾವತಿಸಬೇಕು. SC/ ST/ PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಕೆಲಸ ಕೊಡದೆ ಬೀದಿಯಲ್ಲಿಟ್ಟ ಸರ್ಕಾರ, ದಯಾಮರಣಕ್ಕೆ ಅನುಮತಿ ಕೊಡಿ ಅಂತ 500ಕ್ಕೂ ಹೆಚ್ಚು ಅಭ್ಯರ್ಥಿಗಳ ಮನವಿ!

ಆಯ್ಕೆ ಪ್ರಕ್ರಿಯೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

Follow Us:
Download App:
  • android
  • ios