Asianet Suvarna News Asianet Suvarna News

Saraswat Bank Recruitment 2022: ಸಾರಸ್ವತ ಬ್ಯಾಂಕಿನಲ್ಲಿ 300 ಜೂನಿಯರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

  • ಮುಂಬೈ ಮತ್ತು ಪುಣೆಯ ತನ್ನ ಶಾಖೆಗಳಲ್ಲಿನ ಹುದ್ದೆಗಳಿಗೆ ಸಾರಸ್ವರ ಬ್ಯಾಂಕ್ ನೇಮಕಾತಿ
  • ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ
  • ಒಂದು ವರ್ಷದ ಅನುಭವ ಅಪೇಕ್ಷಿತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
Saraswat Bank is recruiting 300 junior officer posts gow
Author
Bengaluru, First Published Dec 23, 2021, 12:57 PM IST

ಬೆಂಗಳೂರು(ಡಿ.23): ನೀವು ಜಸ್ಟ್ ಯಾವುದಾದರೂ ಒಂದು ಡಿಗ್ರಿ ಮುಗಿಸಿದ್ದೀರಾ? ಬಿ.ಎ, ಬಿ.ಕಾಂ, ಬಿ.ಎಸ್ಸಿ - ಹೀಗೆ ಯಾವುದಾದರೂ ಸರಿಯೇ. ಪದವಿ ಪೂರೈಸಿ ಕೆಲಸ  ಹುಡುಕುತ್ತಿದ್ದೀರಾ? ಅದರಲ್ಲೂ‌ ಬ್ಯಾಂಕ್ ಕೆಲಸ ಸಿಕ್ಕರೆ ಸಾಕು ಅಂತ ಕಾಯ್ತಿರೋರಿಗೆ ಇಲ್ಲೊಂದು ಬಂಪರ್ ಆಫರ್ ಇದೆ. ಇನ್ನು ಈಗಾಗಲೇ ಯಾವುದಾದ್ರೂ ಫೈನಾನ್ಸ್ / ಸೊಸೈಟಿ ಗಳಲ್ಲಿ ಕೆಲಸ ಮಾಡಿದ್ರೆ ಈ ಜಾಬ್ ನಿಮಗೆ ಗ್ಯಾರಂಟಿ ನೋಡಿ. ಹೌದು.. ಸಾರಸ್ವತ್ ಬ್ಯಾಂಕ್ (Saraswat Bank) ಖಾಲಿ ಇರುವ ಜೂನಿಯರ್ ಆಫೀಸರ್ (Junior Officer) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸಾರಸ್ವತ್ ಬ್ಯಾಂಕ್ (saraswat bank) ನಲ್ಲಿ ಖಾಲಿ ಇರೋ 300 ಪೋಸ್ಟ್‌ಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು https://www.saraswatbank.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಆಸಕ್ತಿಯುಳ್ಳ ಅಭ್ಯರ್ಥಿಗಳು  ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ನೋಂದಣಿ ಪ್ರಕ್ರಿಯೆಯು ಡಿಸೆಂಬರ್ 22ರಿಂದ ಶುರು ವಾಗಿದ್ದು,  ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. 

ಸಾರಸ್ವತ್ ಬ್ಯಾಂಕ್ (saraswat bank)ನ ಈ ನೇಮಕಾತಿಯು ಮುಂಬೈ  ಮತ್ತು ಪುಣೆಯಲ್ಲಿನ ತನ್ನ ಶಾಖೆಗಳಿಗೆ ಆಯ್ಕೆ ಮಾಡಿಕೊಳ್ಳುವುದು ಆಗಿರುತ್ತದೆ. ಮಾರ್ಕೆಟಿಂಗ್ ಮತ್ತು ಕ್ಲೇರಿಕಲ್ ಕೇಡರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ ಅಭ್ಯರ್ಥಿಗಳು ವೆಬ್ ಸೈಟ್ ಗೆ ಭೇಡಿ ಪರಿಶೀಲಿಸಬಹುದು. ಈ ಎಲ್ಲ ಹುದ್ದೆಗಳಿಗ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ICAR Recruitment 2022: ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಹಾಯಕ, ಕೌಶಲ್ಯಯುಕ್ತ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ

ಸಾರಸ್ವತ್ಪ ಬ್ಯಾಂಕ್ (saraswat bank)ನ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.   ಬ್ಯಾಂಕ್/ಎನ್‌ಬಿಎಫ್‌ಸಿ/ಡಿಎಸ್‌ಎ/ಕ್ರೆಡಿಟ್ ಸೊಸೈಟಿಗಳಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿದ ಅನುಭವವಿದ್ದರೂ ಒಳ್ಳೆಯದೇ.  

ಅಭ್ಯರ್ಥಿಯ ವಯಸ್ಸಿನ ಮಿತಿಯು ಡಿಸೆಂಬರ್ 1, 2021 ರಂತೆ 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದಹಾಗೇ ಸಾರಸ್ವತ್ಪ ಬ್ಯಾಂಕ್ (saraswat bank) ನೇಮಕಾತಿಗೆ ಅರ್ಜಿ ಸಲ್ಲಿಸುವ ಆಭ್ಯರ್ಥಿಗೆ ಮಹಾರಾಷ್ಟ್ರ ರಾಜ್ಯದ ನಿವಾಸ ಪ್ರಮಾಣಪತ್ರವು ಕಡ್ಡಾಯವಾಗಿದೆ. ಜೊತೆಗೆ ಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಾರಸ್ವತ್ ಬ್ಯಾಂಕ್ ಮುಂಬೈ ಮತ್ತು ಪುಣೆಯಲ್ಲಿನ ತನ್ನ ಶಾಖೆಗಳಿಗಾಗಿ ಮಾರ್ಕೆಟಿಂಗ್ ಮತ್ತು ಕಾರ್ಯಾಚರಣೆಗಳಲ್ಲಿ (ಕ್ಲೇರಿಕಲ್ ಕೇಡರ್) ಒಟ್ಟು 300 ಜೂನಿಯರ್ ಆಫೀಸರ್‌ಗಳ ಪೋಸ್ಟ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

BEL Recruitment 2021: ಹೈದ್ರಾಬಾದ್ ಬಿಇಎಲ್‌ನಲ್ಲಿ 84 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಿ! 

ಆಯ್ಕೆ ಪ್ರಕ್ರಿಯೆಯು ಸಂದರ್ಶನವನ್ನು ಒಳಗೊಂಡಿರುತ್ತದೆ. ಅರ್ಜಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಬ್ಯಾಂಕಿನ ನಿಯತಾಂಕಗಳ ಪ್ರಕಾರ ಸೂಕ್ತ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು. ಅಭ್ಯರ್ಥಿಗಳು ಸಾರಸ್ವತ್ ಬ್ಯಾಂಕ್‌ನ ಅಧಿಕೃತ ಸೈಟ್ ಮೂಲಕ ಹೆಚ್ಚಿನ ಸಂಬಂಧಿತ ವಿವರಗಳನ್ನು ಪರಿಶೀಲಿಸಬಹುದು. 

SAI Recruitment 2022: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗವಕಾಶ, ಮಾಸಿಕ 1 ಲಕ್ಷದವರೆಗೆ ವೇತನ

ಬೆಂಗಳೂರಿನಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದೆ: ರಾಮನ್​ ಸಂಶೋಧನಾ ಸಂಸ್ಥೆ (Raman Research Institute) ಬೆಂಗಳೂರಿನಲ್ಲಿ ಖಾಲಿ ಇರುವ ಒಂದು ಟೆಕ್ನಿಕಲ್ ಅಸಿಸ್ಟೆಂಟ್(Technical Assistant) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಬಿಇ, ಬಿ.ಟೆಕ್, ಬಿಎಸ್ಸಿ, ಬಿಸಿಎ, ಡಿಪ್ಲೋಮಾ ಪದವಿ ಪೂರ್ಣಗೊಳಿಸಿರುವ ಒಂದು ವರ್ಷಗಳ ಅನುಭವ ಹೊಂದಿರುವ  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಆನ್‌ಲೈನ್ ಮೂಲಕ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಜನವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂರ್ಸತೆಯ ಅಧಿಕೃತ ವೆಬ್​​ಸೈಟ್ www.rri.res.in ಗೆ ಭೇಟಿ ನೀಡಿ.

ರಾಮನ್​ ಸಂಶೋಧನಾ ಸಂಸ್ಥೆ ನೇಮಕಾತಿಯ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ. ಮತ್ತು ಮಾಸಿಕ ವೇತನ 23,500 ರೂ ಇರಲಿದೆ. ದಾಖಲಾತಿ ಪರಿಶೀಲನೆ ಮಗತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

Follow Us:
Download App:
  • android
  • ios