1167 ಹುದ್ದೆಗಳ ನೇಮಕಾತಿಗೆ ಐಬಿಪಿಎಸ್ ಅರ್ಜಿ ಆಹ್ವಾನ

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ (ಐಬಿಪಿಎಸ್) 1167 ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ವಿವಿಧ ಬ್ಯಾಂಕ್‌ಗಳಲ್ಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತಿದೆ.

IBPS PO 2020 RECRUITMENT Apply For 1167 VACANCIES

ನವದೆಹಲಿ, (ಆ.05): ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ (ಐಬಿಪಿಎಸ್) ವಿವಿಧ 1167 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

 ಸಿಆರ್‌ಪಿಒ / ಎಂಟಿ ಎಕ್ಸ್ ಡ್ರೈವ್ ಅಡಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ 1167 ಹುದ್ದೆಗಳ ಪ್ರೊಬೇಷನರಿ ಆಫೀಸರ್ಸ್ (ಪಿಒ) ಮತ್ತು ಮ್ಯಾನೇಜ್ಮೆಂಟ್ ಟ್ರೈನಿಗಳ (ಎಂಟಿ) ಅಧಿಸೂಚನೆಯನ್ನು ಹೊರಡಿಸಿದೆ. 

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಆಗಸ್ಟ್ 5 ರಿಂದ  ಆಗಸ್ಟ್ 26,2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಅಭ್ಯರ್ಥಿಗಳು ಯಾವುದೇ ತೊಂದರೆ ಇಲ್ಲದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾದ ನೇರ ಲಿಂಕ್ ಅನ್ನು ನಾವು ಇಲ್ಲಿ ಮಾಹಿತಿಯನ್ನು ನೀಡಿದ್ದು, ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೊದಲು, ಪರೀಕ್ಷೆಯ ದಿನಾಂಕಗಳು, ಪ್ರವೇಶ ಪತ್ರ ಬಿಡುಗಡೆ ದಿನಾಂಕ ಮತ್ತು ಇತರವುಗಳನ್ನು ಒಳಗೊಂಡಂತೆ ಐಬಿಪಿಎಸ್ ಪಿಒ 2020 ಪರೀಕ್ಷೆಯ ಪ್ರಮುಖ ದಿನಾಂಕಗಳನ್ನು ಈ ಕೆಳಕಂಡತೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು
* ಐಬಿಪಿಎಸ್ ಪಿಒ ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯ ಪ್ರಾರಂಭ : 5 ಆಗಸ್ಟ್ 2020
* ಅರ್ಜಿ ಪ್ರಕ್ರಿಯೆಯ ಕೊನೆಯ ದಿನಾಂಕ : 26 ಆಗಸ್ಟ್ 2020
* ಪೂರ್ವ ಪರೀಕ್ಷೆಯ ತರಬೇತಿ (ಪಿಇಟಿ)  21 ಸೆಪ್ಟೆಂಬರ್ - 26 ಸೆಪ್ಟೆಂಬರ್ 2020
*  ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್ : ಅಕ್ಟೋಬರ್ 2020
* ಪ್ರಿಲಿಮ್ಸ್  ಪರೀಕ್ಷೆ: ಅಕ್ಟೋಬರ್ 3 , 10 ಮತ್ತು 11 
* ಪ್ರಿಲಿಮ್ಸ್ ಫಲಿತಾಂಶ :ನವೆಂಬರ್ 2020
*  ಮುಖ್ಯ ಪರೀಕ್ಷೆ: ನವೆಂಬರ್ 28, 2020
* ಐಬಿಪಿಎಸ್ ಪಿಒ ಮುಖ್ಯ ಪರೀಕ್ಷೆ ಫಲಿತಾಂಶ : ಡಿಸೆಂಬರ್ 2020
* ಐಬಿಪಿಎಸ್ ಪಿಒ ಸಂದರ್ಶನ ಕರೆ ಪತ್ರ  : ಜನವರಿ 2021
* ಐಬಿಪಿಎಸ್ ಪಿಒ ಸಂದರ್ಶನ 2020 : ಜನವರಿ 2021
* ಐಬಿಪಿಎಸ್ ಪಿಒ ತಾತ್ಕಾಲಿಕ ಹಂಚಿಕೆ : ಏಪ್ರಿಲ್ 2021

ಹುದ್ದೆಗಳ ವಿವರ
IBPS PO 2020 RECRUITMENT Apply For 1167 VACANCIES

Latest Videos
Follow Us:
Download App:
  • android
  • ios