EXIM Bank Recruitment 2022 ವಿವಿಧ ವಿಭಾಗದ 30 ಹುದ್ದೆಗಳಿಗೆ ನೇಮಕಾತಿ

ಭಾರತೀಯ ಎಕ್ಸಿಮ್ ಬ್ಯಾಂಕ್  ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 30 ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆಯ ದಿನವಾಗಿದೆ. 

EXIM Bank Recruitment 2022 notification for  various departments posts gow

ಬೆಂಗಳೂರು (ಏ.12): ಭಾರತೀಯ ಎಕ್ಸಿಮ್ ಬ್ಯಾಂಕ್ (Export-Import Bank of India - EXIM)ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಮಾಹಿತಿ ತಂತ್ರಜ್ಞಾನ, ಕಾನೂನು, ಸಂಶೋಧನೆ ಮತ್ತು ವಿಶ್ಲೇಷಣೆ, ಆಡಳಿತ ಹೀಗೆ  ಬ್ಯಾಂಕ್ ನ ವಿವಿಧ ವಿಭಾಗದಲ್ಲಿ ಒಟ್ಟು 30  ಹುದ್ದೆಗಳು ಖಾಲಿ ಇದ್ದು,  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಪ್ರಿಲ್ 28 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು  ಎಕ್ಸಿಮ್ ಬ್ಯಾಂಕ್ ನ ಅಧಿಕೃತ ವೆಬ್‌ತಾಣ https://www.eximbankindia.in/ ಗೆ ಭೇಟಿ ನೀಡಲು ಕೋರಲಾಗಿದೆ. 

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಎಕ್ಸಿಮ್ ಬ್ಯಾಂಕ್ (EXIM bank) ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಹುದ್ದೆಗೆ ಅನುಸಾರವಾಗಿ  ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರಬೇಕು.   ಹಣಕಾಸು ವಿಷಯದಲ್ಲಿ MBA/ PGDBA ಮಾಡಿರಬೇಕು ಅಥವಾ CA (Chartered Accountant ) ಮಾಡಿರಬೇಕು.

ವಯೋಮಿತಿ: ಭಾರತೀಯ ಎಕ್ಸಿಮ್ ಬ್ಯಾಂಕ್  ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  35 ವರ್ಷದ ಒಳಗಿರಬೇಕು.

ಆಯ್ಕೆ ಪ್ರಕ್ರಿಯೆ: ಭಾರತೀಯ ಎಕ್ಸಿಮ್ ಬ್ಯಾಂಕ್  ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ  ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ , ಶಾರ್ಟ್ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ: ಭಾರತೀಯ ಎಕ್ಸಿಮ್ ಬ್ಯಾಂಕ್  ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ ಮತ್ತು OBC ಅಭ್ಯರ್ಥಿಗಳು ₹600 ಮತ್ತು ಮಿಕ್ಕುಳಿದ ವಿದ್ಯಾರ್ಥಿಗಳು 100 ರೂ ಪಾವತಿಸಬೇಕು.

MGNREGA ನರೇಗಾ ಉದ್ಯೋಗದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ತಾರತಮ್ಯ

Bank of Baroda  ಕೃಷಿ ಮಾರುಕಟ್ಟೆ ಅಧಿಕಾರಿ ಹುದ್ದೆಗೆ ನೇಮಕಾತಿ: ಬ್ಯಾಂಕ್ ಆಫ್  ಬರೋಡಾ (Bank of Baroda) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಒಟ್ಟು 26 ಕೃಷಿ ಮಾರುಕಟ್ಟೆ ಅಧಿಕಾರಿ (Agriculture Marketing Officer  ) ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು  ಆನ್​ಲೈನ್ (Online)​ ಮೂಲಕ ಅರ್ಜಿ  ಸಲ್ಲಿಸಲು ಎಪ್ರಿಲ್ 26  ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಅಧಿಕೃತ ವೆಬ್​ಸೈಟ್​ https://www.bankofbaroda.in/ ಗೆ ಭೇಟಿ ನೀಡಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ಬ್ಯಾಂಕ್ ಆಫ್  ಬರೋಡಾದ ಖಾಲಿ ಇರುವ ಕೃಷಿ ಮಾರುಕಟ್ಟೆ ಅಧಿಕಾರಿ  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ  ಕೃಷಿ/ತೋಟಗಾರಿಕೆ/ಪಶುಸಂಗೋಪನೆ/ಪಶುವೈದ್ಯಕೀಯ ವಿಜ್ಞಾನ/ ಡೈರಿ ವಿಜ್ಞಾನ/ ಮೀನುಗಾರಿಕೆ ವಿಜ್ಞಾನ/ ಮೀನುಗಾರಿಕೆ/ ಕೃಷಿಯಲ್ಲಿ ಪದವಿ. ಮಾರ್ಕೆಟಿಂಗ್ ಮತ್ತು ಸಹಕಾರ/ ಸಹಕಾರ ಮತ್ತು ಬ್ಯಾಂಕಿಂಗ್/ ಕೃಷಿ-ಅರಣ್ಯ/ಅರಣ್ಯ/ಕೃಷಿ ಜೈವಿಕ ತಂತ್ರಜ್ಞಾನ/ ಆಹಾರ ವಿಜ್ಞಾನ/ ಕೃಷಿ ವ್ಯವಹಾರ ನಿರ್ವಹಣೆ/ಆಹಾರ ತಂತ್ರಜ್ಞಾನ/ ಡೈರಿ ತಂತ್ರಜ್ಞಾನ/ ಕೃಷಿ ಇಂಜಿನಿಯರಿಂಗ್/ ರೇಷ್ಮೆ ಮತ್ತು 02 ವರ್ಷಗಳ ಪೂರ್ಣ ಸಮಯದ ಸ್ನಾತಕೋತ್ತರ ಪದವಿ ಅಥವಾ PGDM/MBA ನಲ್ಲಿ ಡಿಪ್ಲೊಮಾ ಮಾಡಿರಬೇಕು.  ಜೊತೆಗೆ 3 ವರ್ಷಗಳ ಅನುಭವ ಹೊಂದಿರಬೇಕು.

ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮತ್ತಷ್ಟು ವಿಳಂಬ!

Bank of Baroda 26 ಬ್ರ್ಯಾಂಚ್‌ಗಳಲ್ಲಿ 159 ಹುದ್ದೆಗಳ ಭರ್ತಿಗೆ ನೇಮಕಾತಿ: ಬ್ಯಾಂಕ್ ಆಫ್  ಬರೋಡಾ (Bank of Baroda) ಖಾಲಿ ಇರುವ ಹುದ್ದೆಗಳ ಭರ್ತಿಗೆ  ನೇಮಕಾತಿ ಅಧಿಸೂಚನೆ ಹೊರಡಿಸಿದೆ. ದೇಶದಾದ್ಯಂತ ಇರುವ 26 ಬ್ರ್ಯಾಂಚ್‌ಗಳಲ್ಲಿ ಅಗತ್ಯ ಶಾಖೆಯ ಸ್ವೀಕೃತಿ ವ್ಯವಸ್ಥಾಪಕ (Branch Receivables Manager) ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.  ಒಟ್ಟು 159 ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಅರ್ಜಿ  ಸಲ್ಲಿಸಲು ಎಪ್ರಿಲ್ 14  ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಅಧಿಕೃತ ವೆಬ್​ಸೈಟ್​ https://www.bankofbaroda.in/ ಗೆ ಭೇಟಿ ನೀಡಬಹುದು.

Latest Videos
Follow Us:
Download App:
  • android
  • ios