Bank of Baroda Recruitment 2022; 325 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬ್ಯಾಂಕ್ ಆಫ್ ಬರೋಡಾದಿಂದ ಖಾಲಿ ಇರುವ ವಿವಿಧ 325 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಜುಲೈ 12ರಂದು ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿದೆ.
ಬೆಂಗಳೂರು (ಜೂನ್ 29): ಬ್ಯಾಂಕಿಂಗ್ ವಲಯವು ನೇಮಕಾತಿ ಪ್ರಕ್ರಿಯೆನ್ನು ಮುಂದುವರಿಸಿದ್ದು, ಇದೀಗ ಬ್ಯಾಂಕ್ ಆಫ್ ಬರೋಡಾ ಕೂಡ ನೇಮಕಾತಿ ನಡೆಸುವ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಬ್ಯಾಂಕ್ ಆಫ್ ಬರೋಡಾದ ಹಲವು ಬ್ರಾಂಚ್‌ಗಳಲ್ಲಿ ವಿಶೇಷ ಆಫೀಸರ್‌ಗಳ ಹುದ್ದೆಗಳು ಖಾಲಿ ಇದ್ದು, ಇದಕ್ಕೆ ಬ್ಯಾಂಕ್ ವತಿಯಿಂದ ನೇಮಕಾತಿ ನಡೆಸಲಾಗುತ್ತದೆ. ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆ, ವೇತನ ಶ್ರೇಣಿ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ಬೇಕಾದ ದಾಖಲೆಗಳು ಇತ್ಯಾದಿ ವಿವಿರಗಳನ್ನು ನೀಡಲಾಗಿದೆ. ಅವುಗಳಲ್ಲಿ ಮುಖ್ಯ ವಿವರಗಳನ್ನು ಕೆಳಗಡೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ https://www.bankofbaroda.in/ ಭೇಟಿ ನೀಡಬಹುದು.
ಹುದ್ದೆಗಳು, ಶುಲ್ಕ: ಬ್ಯಾಂಕ್ ಆಫ್ ಬರೋಡವು ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಹುದ್ದೆಗಳ ವಿವರಗಳನ್ನು ನೀಡಲಾಗಿದ್ದು, ವಿವಿಧ ಶಾಖೆಗಳಲ್ಲಿ ಸೇರಿ ಒಟ್ಟು 325 ಹುದ್ದೆಗಳು ಖಾಲಿ ಇದೆ. ಈ ಪೈಕಿ ರಿಲೇಶನ್ ಶಿಪ್ ಮ್ಯಾನೇಜರ್ (ಎಸ್‌ಎಂಜಿ/ಎಸ್-4) ಹುದ್ದೆಗಳು 75, ಕಾರ್ಪೊರೇಟ್ ಮತ್ತು ಇನ್‌ಸ್ಟಾಕ್ರೆಡಿಟ್(ಎಂಎಂಜಿ/ಎಸ್-3) ಹುದ್ದೆಗಳು 100, ಕ್ರೆಡಿಟ್ ಅನಾಲಿಸ್ಟ್ ಹುದ್ದೆಗಳು 100, ಕಾರ್ಪೊರೇಟ್ ಮತ್ತು ಇನ್‌ಸ್ಟಾಕ್ರೆಡಿಟ್ (ಎಂಎಂಜಿ/ಎಸ್-2) ಹುದ್ದೆಗಳು 50ಕ್ಕೆ ನೇಮಕಾತಿ ನಡೆಸಲಾಗುತ್ತಿದೆ. ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದ್ದು, ಸಾಮಾನ್ಯ ಅಭ್ಯರ್ಥಿಗೆ 600 ರು. ವಿಧಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 600 ರು., ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ಇದ್ದು ಪ್ರಕ್ರಿಯೆ ಶುಲ್ಕ ಮಾತ್ರ 100 ಇದೆ. ಎಸ್‌ಸಿ/ಎಸ್‌ಟಿ, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದ್ದರೂ ಪ್ರಕ್ರಿಯೆ ಶುಲ್ಕ 100 ರು. ನಿಗದಿ ಮಾಡಲಾಗಿದೆ.
Cochin Shipyard Recruitment 2022: ವಿವಿಧ 106 ಹುದ್ದೆಗಳಿಗೆ ನೇಮಕಾತಿ
ವಯಸ್ಸು, ಅನುಭವ: ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದಂತೆ ಬ್ಯಾಂಕ್ ಆಫ್ ಬರೋಡಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಟ25 ವರ್ಷ ದಾಟಿರಬೇಕು. ಗರಿಷ್ಟಎಂದರೆ 42 ವರ್ಷದೊಳಗೆ ಇರಬೇಕಿದೆ. ಹುದ್ದೆವಾರು ಅನುಭವ ಹಾಗೂ ಕಾರ್ಯಕ್ಷಮತೆ ಹೊಂದಿರಲೇಬೇಕಿದೆ.ರಿಲೇಶನ್ ಶಿಪ್ ಮ್ಯಾನೇಜರ್ ಹುದ್ದೆಗೆ ಫಿನಾನ್ಸ್ ವಿಚಾರದಲ್ಲಿ ಡಿಗ್ರ, ಸ್ನಾತಕೋತ್ತರ,ಡಿಪ್ಲೊಮಾ ಪದವಿ ಪಡೆದವರಾಗಿರಬೇಕು. ಕಾರ್ಪೊರೇಟ್ ಮತ್ತು ಇನ್‌ಸ್ಟಾಕ್ರೆಡಿಟ್ ಹುದ್ದೆಗೂ ಮೇಲಿನ ಪದವಿಯಲ್ಲಿ ಯಾವುದಾದರು ಒಂದನ್ನು ಪಡೆದಿರಬೇಕು. ಈ ಎರಡೂ ಹುದ್ದೆಗಳಿಗೆ ಕನಿಷ್ಟಒಂದು ವರ್ಷದ ಅನುಭವ ಹೊಂದಿರಬೇಕು. ಜೊತೆಗೆ ಡಿಗ್ರಿ ಅಥವಾ ಸಿಎ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಮೇಲಿನ ಹುದ್ದೆಗಳಿಗೆ ಸಿಎ, ಸಿಎಫ್‌ಎ, ಸಿಎಸ್, ಸಿಎಂಎ ತೇರ್ಗಡೆಯಾವದರಿಗೆ ಮೊದಲ ಆದ್ಯತೆ ಆಗಿದೆ.
ವೇತನ ಶ್ರೇಣಿ: ಬ್ಯಾಂಕ್ ಆಫ್ ಬರೋಡಾ ನೇಮಕಾತಿ ವಿಭಾಗವು ತನ್ನ ಅಧಿಸೂಚನೆಯಲ್ಲಿ ವೇತನ ಶ್ರೇಣಿ ಕುರಿತು ನಿಖರವಾಗಿ ಮಾಹಿತಿ ನೀಡಿದೆ. ಅಧಿಸೂಚನೆ ಅನ್ವಯ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಂಎಂಜಿಎಸ್ 2ನೇ ಲೆವೆಲ್ ಅನ್ವಯ 48,170ರಿಂದ 69,180 ರು. ಮಾಸಿಕ ವೇತನ ನೀಡಲಾಗುತ್ತದೆ. ಅಂತೆಯೆ ಎಂಎಂಜಿಎಸ್ 3ರ ಪ್ರಕಾರ 63,840ರು.ಇಂದ 78,230 ರು., ಎಸ್‌ಎಂಜಿ/ಎಸ್(4)ರ ಅನ್ವಯ 76,010 ರು.ಇಂದ 89,890 ರು.ವರೆಗೆ ಮಾಸಿಕ ವೇತನ ನೀಡಲಾಗುತ್ತದೆ ಎಂದು ಬರೋಡಾ ನೇಮಕಾತಿ ವಿಭಾಗ ಮಾಹಿತಿ ನೀಡಿದೆ.
Shivamogga Library Recruitment 2022; ಶಿವಮೊಗ್ಗ ಗ್ರಂಥಾಲಯದಲ್ಲಿ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ, ಗಡುವು: ಮೊದಲು ಅಭ್ಯರ್ಥಿಯು ಬ್ಯಾಂಕಿಂಗ್ ವೆಬ್‌ಸೈಟ್ ವಿಳಾಸವಾದ https://www.bankofbaroda.in/ ಗೆ ಲಾಗಿನ್ ಮಾಡಿಕೊಳ್ಳಬೇಕು. ಬಳಿಕ ಅಲ್ಲಿ ದೊರೆಯುವ ಆನ್ಲೈನ್ ಅರ್ಜಿ ನಮೂನೆಯನ್ನು ಸರಿಯಾದ ದಾಖಲೆಗಳ ಲಗತ್ತಿಸುವಿಕೆಯೊಂದಿಗೆ ಭರ್ತಿ ಮಾಡಬೇಕು. ಸರಿಯಾದ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕಿದೆ. ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸೆಂಡಿಂಗ್ ನೋಟಿಫಿಕೇಶನ್‌ಗೆ ಕ್ಲಿಕ್ ಮಾಡಿ. ಇಲ್ಲಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. ಬೇಕಿದ್ದರೆ ಒಂದು ಪ್ರತಿಯನ್ನು ಪ್ರಿಂಟ್ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಯ ದಿನಾಂಕವನ್ನು ಅಧಿಸೂಚನೆಯಲ್ಲಿಯೇ ತಿಳಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಜುಲೈ 12ರಂದು ಅಂತಿಮ ದಿನವಾಗಿದೆ ಎಂದು ನೇಮಕಾತಿ ವಿಭಾಗ ತಿಳಿಸಿದೆ.