ಸಂಡೂರು: ನಾರಿಹಳ್ಳ ಡ್ಯಾಂನಲ್ಲಿ 2.80 ಲಕ್ಷ ಮೀನು ಬಿತ್ತನೆ
ಮೀನುಗಾರರಿಗೆ ಸರ್ಕಾರದಿಂದ ಸಿಗಬೇಕಾದ ಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿರುವೆ ಎಂದ ಶಾಸಕ ಈ. ತುಕಾರಾಂ| ಮೀನುಗಾರಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ 2.80 ಲಕ್ಷ ಕಟ್ಲಾ ಜಾತಿಯ ಬಿತ್ತನೆಯ ಮೀನು ಮರಿಗಳನ್ನು ಜಲಾಶಯಕ್ಕೆ ಬಿಡಲಾಗಿದೆ|
ಸಂಡೂರು[ಅ.21]: ತಾಲೂಕಿನಲ್ಲಿ ಮೀನುಗಾರಿಕೆಯನ್ನು ಅನುಸರಿಸಿ ನೂರಾರು ಕುಟುಂಬಗಳು ಬದುಕುತ್ತಿವೆ. ಅವರಿಗೆ ಸರ್ಕಾರದಿಂದ ಸಿಗಬೇಕಾದ ಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿರುವೆ ಎಂದು ಶಾಸಕ ಈ. ತುಕಾರಾಂ ಅವರು ತಿಳಿಸಿದ್ದಾರೆ.
ನಾರಿಹಳ್ಳದಲ್ಲಿ ಮೀನುಗಾರಿಕೆ ಇಲಾಖೆಯಿಂದ ಕೆರೆಗೆ ಬಿತ್ತನೆ ಮೀನುಗಳನ್ನು ಬಿಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಮೀನುಗಾರಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ 2.80 ಲಕ್ಷ ಕಟ್ಲಾ ಜಾತಿಯ ಬಿತ್ತನೆಯ ಮೀನುಮರಿಗಳನ್ನು ಜಲಾಶಯಕ್ಕೆ ಬಿಡಲಾಗಿದೆ. ಅದರಂತೆ ತಾಲೂಕಿನ ಉಳಿದ ಕೆರೆಗಳಲ್ಲಿ ನೀರಿನ ಪ್ರಮಾಣದ ಸಂಗ್ರಹ ನೋಡಿಕೊಂಡು ಬಿತ್ತನೆ ಮೀನುಗಳನ್ನು ಬಿಡಲಾಗುವುದು ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಚಿಕ್ಕ ವೀರನಾಯಕ್, ಜಿಲ್ಲಾ ಮೀನುಗಾರಿಕೆ ಅಧಿಕಾರಿ ಶಿವಣ್ಣ, ತಾಲೂಕು ಅಧಿಕಾರಿ ಬಸವನಗೌಡ, ಮೀನುಗಾರಿಕೆ ಇಲಾಖೆಯಿಂದ ಪರವಾನಗಿ ಪಡೆದ ಮೀನುಗಾರಿಕೆ ವೃತ್ತಿ ನಿರತರು, ಜಿಪಂ ಸದಸ್ಯರಾದಸೌಭಾಗ್ಯ ತಿರುಮಲ ಹಾಗೂ ಗಂಟೆ ಕುಮಾರಸ್ವಾಮಿ, ಶರಣಯ್ಯ ಸ್ವಾಮಿ, ಮಾದಾಪುರ ಮಾರಪ್ಪ,ನಾಗನಗೌಡ, ಗಡಾದ ರಮೇಶ್, ಸುರೇಶ ಇತರರಿದ್ದರು.