Asianet Suvarna News Asianet Suvarna News

'ಹಿಂದೆ ಜೈಲಿಗೋದವರನ್ನು ಬಹಿಷ್ಕರಿಸುತ್ತಿದ್ರು, ಆದರೆ ಇದೀಗ ಸ್ವಾಗತಿಸ್ತಿದ್ದಾರೆ'

ಸಮಾಜ ಬದಲಾಗಬೇಕು, ಸಮಾಜದಲ್ಲಿನ ವ್ಯವಸ್ಥೆ ಬದಲಾಗಬೇಕು ಎಂದ ಸಂತೋಷ ಹೆಗಡೆ| ಜನರಲ್ಲಿ ದುರಾಸೆ ಅಧಿಕಾರದ ಆಸೆ ಹೆಚ್ಚಾಗಿದೆ| ದುಡ್ಡಿದ್ದವರು ಅಧಿಕಾರ ಬೇಕು ಅಂತಾರೆ| ಅಧಿಕಾರದಲ್ಲಿ ಬಂದವರು ಭ್ರಷ್ಟಾಚಾರ ಮಾಡ್ತಿದ್ದಾರೆ| 

People Now Welcoming Those who went to Jail
Author
Bengaluru, First Published Oct 26, 2019, 1:24 PM IST

ಬಳ್ಳಾರಿ(ಅ.26): ಭ್ರಷ್ಟ ವ್ಯವಸ್ಥೆಯಲ್ಲಿ ನಾವಿದ್ದೇವೆ, ಸಮಾಜ ಬದಲಾಗಬೇಕಿದೆ, ಸಮಾಜದಲ್ಲಿನ ವ್ಯವಸ್ಥೆ ಬದಲಾಗಬೇಕು. ಜನರಲ್ಲಿ ಬದಲಾವಣೆ ಬರಬೇಕು. ಜನರಲ್ಲಿ ದುರಾಸೆ ಅಧಿಕಾರದ ಆಸೆ ಹೆಚ್ಚಾಗಿದೆ. ದುಡ್ಡಿದ್ದವರು ಅಧಿಕಾರ ಬೇಕು ಅಂತಾರೆ. ಅಧಿಕಾರದಲ್ಲಿ ಬಂದವರು ಭ್ರಷ್ಟಾಚಾರ ಮಾಡ್ತಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆ ಅವರು ಹೇಳಿದ್ದಾರೆ.

"

ಶನಿವಾರ ನಗರದಲ್ಲಿ ಆಯೋಜನೆಯಾಗಿದ್ದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ  ಜೈಲಿಗೋದವರನ್ನು ಶಿಕ್ಷೆ ಆಗೋ ಮುಂಚೆ ಬಹಿಷ್ಕರಿಸುತ್ತಿದ್ರು. ಆದರೆ ಈಗ ಜನ ಸ್ವಾಗತಿಸುತ್ತಿದ್ದಾರೆ. ಏಕ ವ್ಯಕ್ತಿ ಪೂಜೆ ಮಾಡಿ ಆದ್ರೇ ಭ್ರಷ್ಟರನ್ನು ಪೂಜೆ ಮಾಡಬಾರದು. ಬಲಿಷ್ಠ ಲೋಕಪಾಲ ಬಿಲ್ ಯಾರಿಗೆ ಬೇಕು. ಅಧಿಕಾರದಲ್ಲಿ ಇರೋರು ಎಷ್ಟು ಪ್ರಮಾಣಿಕರು ಇದ್ದಾರೆ ಎಂದು ಪ್ರಶ್ನಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಲೋಕಾಯುಕ್ತ ಕೂಡ ದುರ್ಬಲವಾಗಿದೆ. ಎಸಿಬಿ ಪೊಲೀಸ್ ವ್ಯವಸ್ಥೆಯಲ್ಲಿ ಬರೋ ಸಂಸ್ಥೆ. ಮಂತ್ರಿ ಕೆಳಗೆ ಇರೋ ಎಸಿಬಿ ಏನು ಮಾಡಬಹುದು. ಹೀಗೆ ನೇರವಾಗಿ ಹೆಸರು ಹೇಳದೆ ಪರೋಕ್ಷವಾಗಿ ಮಾಝಿ ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಕಾರ್ಯಕ್ರಮದ ಭಾಷಣದ ವೇಳೆ ‌ಸಂತೋಷ ಹೆಗಡೆ ಲೋ ಶುಗರ್ ನಿಂದ ಕುಳಿತುಕೊಂಡಿದ್ದರು. ಕೆಲ ಕಾಲ ನಿಂತು ಮತ್ತೆ ಭಾಷಣ ಮುಂದುವರೆಸಿದ್ದರು. ಬಳಿಕ ಪ್ರತಿಕ್ರಿಯೆ ನೀಡಿದ ಅವರು ಯಾವುದೇ ತೊಂದರೆ ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. 
 

Follow Us:
Download App:
  • android
  • ios