ಬಳ್ಳಾರಿ[ಡಿ.17]: : ನಗರದ ಏಳು ಮಕ್ಕಳ ತಾಯಿ ದೇವಸ್ಥಾನದಲ್ಲಿ ಮಹಾನಗರ ಪಾಲಿಕೆ ಸದಸ್ಯ ಗೋವಿಂದರಾಜುಲು ಅವರು ಹಮ್ಮಿಕೊಂಡಿದ್ದ ಅಯ್ಯಪ್ಪ ಮಾಲಾಧಾರಿಗಳಿಗೆ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರು ದಾದಾಪೀರ್‌ ಸಾಬ್‌ ಸೇರಿದಂತೆ ಅನೇಕ ಸಮುದಾಯದ ಮುಖಂಡರು ಭಾಗಿಯಾಗಿ ಊಟ ಬಡಿಸಿ ಗಮನ ಸೆಳೆದರು.

ಅಯ್ಯಪ್ಪ ಮಾಲೆ ಧರಿಸಿದ ಮುಸ್ಲಿಂ ಯುವಕ

ಪಾಲಿಕೆ ಸದಸ್ಯ ಗೋವಿಂದರಾಜುಲು ಅವರು ಕಳೆದ 30 ವರ್ಷದಿಂದ ಅಯ್ಯಪ್ಪ ಮಾಲೆ ಹಾಕುತ್ತಿದ್ದು, 41 ದಿನಗಳ ವ್ರತದ 21ನೇ ದಿನವಾದ ಸೋಮವಾರ ನಡೆದ ಮಾಲಾಧಾರಿಗಳ ಪ್ರಸಾದ ವಿತರಣೆ ಕಾರ್ಯದಲ್ಲಿ ಮುಸ್ಲಿಂ ಧರ್ಮಗುರು ಹಾಗೂ ಸಮಾಜದ ಪ್ರಮುಖರು ಭಾಗಿಯಾಗಿದ್ದರು.

ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆಯಲ್ಲಿ ಹೊರಟ ಶ್ವಾನ

ವಕ್ಫ್ ಬೋರ್ಡ್‌ ಮಾಜಿ ಅಧ್ಯಕ್ಷ ರಿಜ್ವಾನ್‌ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮುಸ್ಲಿಂ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಊಟ ಮಾಡಿದರು.