'370 ರದ್ದು ಮಾಡಲು ಅಮಿತ್ ಶಾ ಹುಟ್ಟಿ ಬರಬೇಕಾಯ್ತ'
ಸುಮಾರು ನಾಲ್ಕು ದಶಕಗಳ ಬಳಿಕ ಹೊಸಪೇಟೆ-ಹರಿಹರ ರೈಲ್ವೆ ಮಾರ್ಗ ಇಂದು ಉದ್ಘಾಟನೆ| ನೂತನ ಹೊಸಪೇಟೆ-ಹರಿಹರ ರೈಲಿಗೆ ಚಾಲನೆ ನೀಡಿದ ಕೇಂದ್ರ ಸಚಿವ ಸುರೇಶ್ ಅಂಗಡಿ| ಹೊಸಪೇಟೆ-ಹರಿಹರ ಸಂಚಾರ ಆರಂಭವಾಗಿದ್ದು ಹಲವು ದಶಕಗಳ ಹೋರಾಟಕ್ಕೆ ಸಿಕ್ಕ ಪ್ರತಿಫ| ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತನ್ನು ಜೋಡನೆ ಮಾಡಿದ್ದಾರೆ| ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿ ರದ್ದು ಮಾಡುವ ಮೂಲಕ ದೇಶವನ್ನು ಒಂದು ಮಾಡಿದ್ದಾರೆ|370 ರದ್ದು ಮಾಡಲು ಅಮಿತ್ ಶಾ ಹುಟ್ಟಿ ಬರಬೇಕಾಯ್ತ ಎಂದ ಸುರೇಶ್ ಅಂಗಡಿ|
ಬಳ್ಳಾರಿ(ಅ.17): ಸುಮಾರು ನಾಲ್ಕು ದಶಕಗಳ ಬಳಿಕ ಹೊಸಪೇಟೆ-ಹರಿಹರ ರೈಲ್ವೆ ಮಾರ್ಗ ಇಂದು ಉದ್ಘಾಟನೆಯಾಗಿದೆ. ಗುರುವಾರ ಹೊಸಪೇಟೆಯ ರೈಲು ನಿಲ್ದಾಣದಲ್ಲಿ ನೂತನ ಹೊಸಪೇಟೆ-ಹರಿಹರ ರೈಲಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಹೊಸಪೇಟೆ-ಹರಿಹರ ಸಂಚಾರ ಆರಂಭವಾಗಿದ್ದು ಹಲವು ದಶಕಗಳ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತನ್ನು ಜೋಡನೆ ಮಾಡಿದ್ದಾರೆ. ಯೋಗ ಮುಖಾಂತರ ಜಗತ್ತು ಒಂದು ಮಾಡಿದ್ದು ಮೋದಿ ಅವರು, ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿ ರದ್ದು ಮಾಡುವ ಮೂಲಕ ದೇಶವನ್ನು ಒಂದು ಮಾಡಿದ್ದಾರೆ. 370 ರದ್ದು ಮಾಡಲು ಅಮಿತ್ ಶಾ ಹುಟ್ಟಿ ಬರಬೇಕಾಯ್ತ ಎಂದು ಹೇಳಿದ್ದಾರೆ.
ಕಾಶ್ಮೀರದಿಂದ ಕನ್ಯಾಕುಮಾರಿಯಿಂದ ಒಂದು ಮಾಡೋ ರೈಲ್ವೆ ಇಲಾಖೆ,ನಮ್ಮ ಹೆಮ್ಮೆಯ ರೈಲ್ವೆ ಇಲಾಖೆಯಾಗಿದೆ. ರೈಲ್ವೆ ಬಜೆಟ್ ಬೇರೆ ಇತ್ತು, ರೈಲ್ವೆ ಟಿಕೆಟ್ ದರ ಒಂದೆರಡು ರೂಪಾಯಿ ಜಾಸ್ತಿ ಮಾದಿದ್ರೆ ಸಾಕು ಪ್ರತಿಭಟನೆ ಮಾಡಿ ರಾಜಕೀಯ ಮಾಡ್ತಿದ್ರು, ಇದೆಲ್ಲಾ ಬಿಟ್ಟು ಒಂದೇ ಬಜೆಟ್ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಎಂದು ತಿಳಿಸಿದರು.
ಹಳ್ಳಿ ಹಳ್ಳಿಗೂ ಕನೆಕ್ಟಿವಿಟಿ ಮಾಡಿದ ಹೆಗ್ಗಳಿಕೆ ಮೋದಿಗೆ ಸೇರುತ್ತದೆ. ಈ ಮೊದಲು ರೈಲ್ವೆ ಸ್ಟೇಷನ್ ಗೆ ಹೋಗಬೇಕಾದ್ರೆ ಮೂಗು ಮುಚ್ಚಿಕೊಳ್ಳುತ್ತಿದ್ರು ಇದೀಗ ಸೆಲ್ಫಿ ತೆಗೆದುಕೊಳ್ಳವಷ್ಟು ಕ್ಲೀನ್ ಇದೆ. ಇದೆಲ್ಲದಕ್ಕೆ ಮೋದಿ ಕಾರಣ. ಮೋದಿ ಅವರು ಕೈಯಲ್ಲಿ ಕಸಬರಿಗೆ ಹಿಡಿದ ಕೂಡಲೇ ಎಲ್ಲಾ ಬದಲಾಯ್ತು ಎಂದು ಹೇಳಿದ್ದಾರೆ.
ಎಲ್ಲ ಯೋಜನೆಗಳಿಗೆ ಹಣ ನೀಡಿದ್ದು ಮೋದಿ
ಕರ್ನಾಟಕದ ಸಂಪೂರ್ಣ ಯೋಜನೆ ಮುಗಿಸ್ತೀನಿ ಅಂತ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು, ಜಾಫರ್ ಷರಿಫ್, ಬಸವರಾಜ ರಾಯರೆಡ್ಡಿ ಹಲವು ಯೋಜನೆ ಅಡಿಗಲ್ಲು ಮಾತ್ರ ಹಾಕಿದ್ರು, ಹಣ ಬಿಡುಗಡೆ ಮಾಡಿರಲಿಲ್ಲ, ಈ ಎಲ್ಲ ಯೋಜನೆಗಳಿಗೆ ಹಣ ಕೊಟ್ಟಿದ್ದು ಪ್ರಧಾನಿ ಮೋದಿ ಅವರು ಎಂದು ಹೇಳಿದ್ದಾರೆ.
ಆರ್ಥಿಕ ಪ್ರಗತಿಗೆ ರೈಲ್ವೆ ಯೋಜನೆ ಸಹಕಾರಿ
ಆರ್ಥಿಕ ಪ್ರಗತಿಗೆ ರೈಲ್ವೆ ಯೋಜನೆ ಸಹಕಾರಿಯಾಗಿದೆ.ರಾಜ್ಯ ಸರ್ಕಾರದ ಸಹಕಾರದೊಂದಿಗೆ ಕೆಲಸ ಮಾಡುತ್ತೇವೆ. ಕೆಲವೆಡೆ ಭೂಸ್ವಾಧೀನ ಸಮಸ್ಯೆಯಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಎಲ್ಲ ರಾಜ್ಯಗಳ ನಡುವೆ ಸಂಪರ್ಕ ಮಾಡ್ತೇವೆ.. ಹಿಂದಿನ ಸರ್ಕಾರ ಲ್ಯಾಂಡ್ ಅಕ್ವಿಜೇಷನ್ ಮಾಡಿ ನೀಡಲಿಲ್ಲ ಎಂದು ಹೇಳಿದ್ದಾರೆ. ಲ್ಯಾಂಡ್ ಸಮಸ್ಯೆ ಇದ್ದ ಕಡೆ ರೈಲ್ವೆ ಯೋಜನೆಗಳು ವಿಳಂಬವಾಗುತ್ತಿವೆ. ಹಿಂದಿನ ಯೋಜನೆಗಳ ಮೊದಲು ಕಂಪ್ಲೀಟ್ ಮಾಡುತ್ತೇವೆ, ದೇವೇಗೌಡರು ಬರೀ ಅಡಿಗಲ್ಲು ಇಟ್ರು ಹಣ ನೀಡಲಿಲ್ಲ ಎಂದು ತಿಳಿಸಿದರು.
ಗೋಲ್ಡನ್ ಚಾರಿಟ್ ಟ್ರೈನ್ ನಿಂತಿದೆ. ಅದರಿಂದ ರಾಜ್ಯ ಸರ್ಕಾರಕ್ಕೆ ನಷ್ಟವಾಗಿದೆ. ರಾಜ್ಯ ಸರ್ಕಾರ ನಡೆಸೋಕೆ ಆಗಲಿಲ್ಲ ಅಂದ್ರೇ ಕೇಂದ್ರಕ್ಕೆ ನೀಡಿ ನಾವು ಮಾಡ್ತೇವೆ. ನೋ ಪ್ರಾಫಿಟ್ ನೋ ಲಾಸ್ ಆಗವಂತೆ ಯೋಜನೆ ತರುತ್ತೇವೆ. ಪ್ರೈವೇಟ್ ಟ್ರೈನ್ ಚೆನ್ನಾಗಿ ನಡಿತಿದೆ. ಹೀಗಾಗಿ 150 ಟ್ರೈನ್ ಪ್ರೈವೇಟ್ ನೀಡೋ ಯೋಜನೆ ಇದೆ. ಕರ್ನಾಟಕಕ್ಕೂ ಖಾಸಗಿ ರೈಲು ಬರೋದಿದೆ ಎಂದು ಹೇಳಿದ್ದಾರೆ.