ಬಾಗಲಕೋಟೆ(ಅ.28): ಪ್ರವಾಹ ಇಳಿಮುಖವಾದ ಹಿನ್ನಲೆಯಲ್ಲಿ ಜಿಲ್ಲೆಯ ಬಾದಾಮಿ ತಾಲೂಕಿನ ಹುಬ್ಬಳ್ಳಿ- ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಮತ್ತೆ ವಾಹನಗಳ ಸಂಚಾರ ಆರಂಭವಾಗಿದೆ. ಆದರೆ, ಗೋವಿನಕೊಪ್ಪ ಸೇತುವೆ ಮೇಲೆ ಸಂಚರಿಸಲು ವಾಹನಗಳು ಪರದಾಡಿದ ಘಟನೆ ಭಾನುವಾರ ನಡೆದಿದೆ. 

ಪ್ರವಾಹ ಬಂದು ಹೋದ ಮೇಲೆ ಬಹಳಷ್ಟತು ಕೆಸರು ಬಂದಿತ್ತು. ಹೀಗಾಗಿ ಇದೇ ಕೆಸರಿನಲ್ಲಿ ವಾಹನಗಳಸಂಚಾರ ಬಹಳ ದುಸ್ತರವಾಗಿದೆ. ಹೀಗಾಗಿ ಸೇತುವೆ ಮೇಲೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರ ಪರದಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಸ್ತೆ ಸುಗಮ ಸಂಚಾರಕ್ಕೆ ಗೋವಿನಕೊಪ್ಪ ಗ್ರಾಮಸ್ಥರು ನೆವೆರವಿಗೆ ಬಂದಿದ್ದರು.ಗ್ರಾಮಸ್ಥರಿಂದ ಕಲ್ಲು ಮಣ್ಣು ಹಾಕಿ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರಿಂದ ಮರಳಿ ಸಂಚಾರ ಆರಂಭವಾಯಿತು. ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಗೋವಿನಕೊಪ್ಪ ಸೇತುವೆ ಸತತ ಮೂರನೇ ಬಾರಿಗೆ ನೆರೆ ಪ್ರವಾಹಕ್ಕೆ ತುತ್ತಾಗಿದೆ.