ಬಿಜೆಪಿಗೆ ಮತ ಹಾಕಿದರೆ ಅನ್ನ, ನೀರು ಸಿಗಲ್ಲ!

ಬಿಜೆಪಿಗೆ ಮತ ಹಾಕಿದರೆ ಜನರಿಗೆ ಅನ್ನ ನೀರೂ ಸಹ ಸಿಗುವುದಿಲ್ಲ ಎಂದು ಶಾಸಕರೋರ್ವರು ಗಂಭೀರ ಆರೋಪ ಮಾಡಿದ್ದಾರೆ. 

MLA Anand nyamagouda Slams Union BJP Govt

ಜಮಖಂಡಿ [ಅ.16]:  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್‌ ಮುಖಂಡರಾದ ಡಿ.ಕೆ.ಶಿವಕುಮಾರ್‌, ಡಾ.ಜಿ.ಪರಮೇಶ್ವರ ಹಾಗೂ ಪಿ.ಚಿದಂದರಂ ಅವರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಿರುವುದೇ ಇದಕ್ಕೆ ಸಾಕ್ಷಿ ಎಂದು ಶಾಸಕ ಆನಂದ ನ್ಯಾಮಗೌಡ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರ್ಚಸ್ಸನ್ನು ಕುಗ್ಗಿಸಲು ಈ ರೀತಿ ಮಾಡಲಾಗುತ್ತಿದೆ. ಇದೇ ರೀತಿ ದ್ವೇಷ ರಾಜಕಾರಣ ಮುಂದುವರೆದರೆ ಜನ ಬಿಜೆಪಿ ವಿರುದ್ಧ ತಿರುಗಿ ಬೀಳಲಿದ್ದಾರೆ. ದೇಶದಲ್ಲಿ ಅರಾಜಕತೆ ಹೆಚ್ಚಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇಶದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮೋದಿ ಸರ್ಕಾರ ಮಾಡಿದೆ. ಬಿಜೆಪಿಗೆ ಮತ ಹಾಕಿದರೆ ಅನ್ನ ನೀರು ಸಿಗುವುದಿಲ್ಲ ಎಂಬುದಕ್ಕೆ ಇವೇ ಸಾಕ್ಷಿ ಎಂದು ದೂರಿದರು.

Latest Videos
Follow Us:
Download App:
  • android
  • ios