ತೇರದಾಳ: ಮನೆ ಛಾವಣಿ ಕುಸಿದು 11 ತಿಂಗಳ ಮಗು ಸಾವು
ಮನೆ ಛಾವಣಿ ಕುಸಿತ| 11 ತಿಂಗಳ ಮಗು ಸಾವು| ತೇರದಾಳ ಬಳಿಯ ತಮದಡ್ಡಿ ಗ್ರಾಮದಲ್ಲಿ ನಡೆದ ಘಟನೆ|ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ| ಮೃತ ಮಗುವಿನ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ಶಾಸಕ ಸಿದ್ದು ಸವದಿ|
ಬಾಗಲಕೋಟೆ[ಅ.30]: ಮನೆ ಛಾವಣಿ ಕುಸಿದು 11 ತಿಂಗಳ ಮಗು ಸಾವನ್ನಪ್ಪಿ, ತಾಯಿ ಗಾಯಗೊಂಡ ಘಟನೆ ತೇರದಾಳ ಬಳಿಯ ತಮದಡ್ಡಿ ಗ್ರಾಮದಲ್ಲಿ ನಡೆದಿದೆ. ಅಚಲ್ ಮೃತ ಮಗುವಾಗಿದೆ. ತಾಯಿ ಅಕ್ಷತಾ ಅವರಿಗೆ ಗಂಭೀರವಾದ ಗಾಯಗಳಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ವಾರ ನಿರಂತರವಾಗಿ ಮಳೆಯಾದ ಪರಿಣಾಮ ಮನೆ ನೆನೆದು ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಪುಟ್ಟ ಮಗು ದಾರುಣ ಸಾವು ಕಂಡ ಹಿನ್ನಲೆಯ್ಲಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತೇರದಾಳ ಶಾಸಕ ಸಿದ್ದು ಸವದಿ ಅವರು ಘಟನಾ ಸ್ಥಳಕ್ಕೆ ತಹಶೀಲ್ದಾರ್ ಅವರ ಜೊತೆ ಆಗಮಿಸಿ ಸಂತ್ವಾನ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ಮೃತ ಮಗುವಿನ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಘಟನೆಯಲ್ಲಿ ಗಾಯಗೊಂದ ಮಗುವಿನ ತಾಯಿ ಅಕ್ಷತಾಳ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ. ಕುಟುಂಬಸ್ಥರ ಸದ್ಯ ವಾಸಕ್ಕೆ ತಾತ್ಕಾಲಿಕ ಶೆಡ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.