ಬಾಗಲಕೋಟೆ: ಡಿಸಿಎಂ ಕಾರಜೋಳ ಹೇಳಿಕೆಗೆ ಟೀಕೆ

ಕಾರಜೋಳ ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಅನೀಲಕುಮಾರ ಎಚ್‌ ದಡ್ಡಿ ಅಸಮಾಧಾನ| ಕೇವಲ ಉಡಾಫೆ ಮಾತುಗಳನ್ನು ಆಡುತ್ತಿರುವ ಮತ್ತು ನಿದ್ರಾವಸ್ಥೆಯಲ್ಲಿರುವ ಸರ್ಕಾರ| ಆಡಳಿತವನ್ನು ಎಚ್ಚರಿಸಲು ಪಾದಯಾತ್ರೆಯಂತಹ ಹೋರಾಟದ ಅವಶ್ಯಕತೆ ಇದೆ| 

Criticism On DCM Govind Karjol Statement About Siddaramaiah

ಬಾಗಲಕೋಟೆ(ಅ.29): ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಡಲು ಬೇರೆ ಕೆಲಸವಿಲ್ಲ ಪಾದಯಾತ್ರೆ ಮಾಡುತ್ತಿದ್ದಾರೆ ಮತ್ತು ಸ್ಪೀಕರ್‌ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗಿರುತ್ತದೆ ಎಂದು ಬಾಗಲಕೋಟೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಮಾಧ್ಯಮ ವಕ್ತಾರ ಅನೀಲಕುಮಾರ ಎಚ್‌ ದಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದ ನಾಯಕನಂತಹ ಜವಾಬ್ದಾರಿ ಸ್ಥಾನದಲ್ಲಿದ್ದು ರಾಜ್ಯದ ಜನತೆ ನೆರೆ ಹಾವಳಿಯಿಂದ ತತ್ತರಿಸಿ ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿರುವಾಗ ನಿಮ್ಮ ಹಾಗೆ ವಿಧಾನ ಸೌಧದಲ್ಲಿ ಕುಳಿತು ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಕೇವಲ ಉಡಾಫೆ ಮಾತುಗಳನ್ನು ಆಡುತ್ತಿರುವ ಮತ್ತು ನಿದ್ರಾವಸ್ಥೆಯಲ್ಲಿರುವ ನಿಮ್ಮ ಸರ್ಕಾರದ ಆಡಳಿತವನ್ನು ಎಚ್ಚರಿಸಲು ಪಾದಯಾತ್ರೆಯಂತಹ ಹೋರಾಟದ ಅವಶ್ಯಕತೆ ಇದೆ ಎಂದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದುವರೆಗೂ ವಿರೋಧ ಪಕ್ಷದ ನಾಯಕರುಗಳಿಗೆ ಇಷ್ಟೇ ಸಮಯ ತೆಗೆದುಕೊಂಡು ಮಾತಾಡಬೇಕು ನಿಮ್ಮ ಮಾತು ಮುಗಿಸಿ ಎಂದು ಇತಿಹಾಸದಲ್ಲಿ ಯಾವುದೇ ಸ್ಪೀಕರ್‌ಗಳು ಹೇಳಿದ ನಿದರ್ಶನಗಳಿಲ್ಲ. ಆದರೆ ಈಗಿನ ಸ್ಪೀಕರ್‌ ರವರು ರಾಜ್ಯದಲ್ಲಿ ನೆರೆ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಅತೀ ಅವಶ್ಯವಾಗಿ ಸದನದಲ್ಲಿ ಚರ್ಚಿಸಲೇಬೇಕಾದಂತಹ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಮಾತನಾಡಲು ಅವಕಾಶ ನೀಡದೇ ಇರುವುದು ಹಕ್ಕು ಚ್ಯುತಿಯಾಗುವುದಿಲ್ಲವೇ? ಎಂದು ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.

ಗೋವಾ ಮುಖ್ಯಮಂತ್ರಿಗಳ ವಿರುದ್ಧ ಕಿಡಿ

ಕಳಸಾ ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಹಾಗೂ ಅರಣ್ಯ ಇಲಾಖೆಯು ತನ್ನ ಅನುಮತಿ ನೀಡಿ ರಾಜ್ಯ ನೀರಾವರಿ ನಿಗಮಕ್ಕೆ ಪತ್ರ ಬರೆದ್ದಿದ್ದಕ್ಕೆ ಗೋವಾ ಮುಖ್ಯಮಂತ್ರಿ ಪ್ರಬಲ ವಿರೋಧ ವ್ಯಕ್ತಪಡಿಸಿರುವುದು ಹಾಗೂ ಈ ಕುರಿತು ನ್ಯಾಯಾಲಯ ಮೊರೆ ಹೋಗುವುದಾಗಿ ನೀಡಿರುವ ಎಚ್ಚರಿಕೆ ಖಂಡನೀಯ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ಎ.ಎ.ದಂಡಿಯಾ ತಿಳಿಸಿದ್ದಾರೆ.

ಪ್ರಕಟಣೆ ಮೂಲಕ ಖಂಡಿಸಿರುವ ಅವರು, ಗೋವಾ ಮುಖ್ಯಮಂತ್ರಿಗಳು ತಮ್ಮದೇ ಪಕ್ಷದ ಕೇಂದ್ರ ಸರ್ಕಾರದ ವಿರುದ್ಧವೇ ಸಮರ ಸಾರಿದಂತಿದೆ. ಇದರಿಂದ ಎರಡೂ ರಾಜ್ಯಗಳ ಸಂಬಂಧದಮೇಲೂ ದುಷ್ಪರಿಣಾಮ ಬೀರಲಿದೆ. ಇದಕ್ಕೆ ನಮ್ಮ ರಾಜ್ಯಸರ್ಕಾರ ತಕ್ಕ ಉತ್ತರ ನೀಡಿ ಗೋವಾ ಮುಖ್ಯಮಂತ್ರಿಗಳಿಗೆ ಕಡಿವಾಣ ಹಾಕಲೇಬೇಕು ಎಂದು ಆಗ್ರಹಿಸಿದ್ದಾರೆ.

ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಉತ್ತರ ಕರ್ನಾಟದಲ್ಲಿರುವುರುವುದರಿಂದ ಇದಕ್ಕೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಬಾರದೆಂದು ಹೇಳಿರುವ ಅವರು, ಉತ್ತರ ಕರ್ನಾಟಕದಿಂದ ಭಾರತೀಯ ಜನತಾ ಪಕ್ಷದಿಂದಲೇ 12 ಲೋಕಸಭಾ ಸದಸ್ಯರನ್ನು ಆಯ್ಕೆಗೊಳಿಸಲಾಗಿದೆ. ಇದನ್ನು ನಮ್ಮ ಭಾಗದ ಸಂಸದರು ಗಂಭೀರವಾಗಿ ಗಮನಿಸಬೇಕೆಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ವೈ. ಗೋವಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಸಮಸ್ಯೆ ಬಗೆಹರಿಸುವುದಾಗಿ ರಾಜ್ಯ ಜನತೆಗೆ ಭರವಸೆ ನೀಡಿದ್ದಾರೆ. ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 15 ದಿನಗಳಲ್ಲಿಯೇ ಮಹದಾಯಿ ನದಿಯ ಹಾಗೂ ಕಳಸಾ ಬಂಡೂರಿ ನಾಲೆಯ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದಾಗಿ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸುವಂತೆ ಯಡಿಯೂರಪ್ಪಗೆ ಪತ್ರ ಬರೆದು ಅರಿಕೆ ಮಾಡಿಕೊಳ್ಳುವುದಾಗಿ ದಂಡಿಯಾ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios