ಬಾಗಲಕೋಟೆ(ಅ.29): ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವಾಗಿ 1200 ಕೋಟಿ ರು. ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ, ಜಿಲ್ಲೆಯ ಬಾದಾಮಿ ತಾಲೂಕಿನ ಕಗಲಗೊಂಬ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ವೆಂಕಟೇಶ್ ಜಂಬಗಿ ಎಂಬುವರು ಸಿಎಂ ಯಡಿಯೂರಪ್ಪ ಅವರಿಗೆ ಟ್ವೀಟ್ ಮಾಡಿ ಮಾನ್ಯ ಬಿಎಸ್ವೈಯವರೇ, ಕೇಂದ್ರ ನೆರೆ ಪರಿಹಾರ 1200 ಕೋಟಿ ನೀಡಿದೆ ಅಂತೀರಾ,ಆದ್ರೆ ಎಲ್ಲೂ ಸಂತ್ರಸ್ತರಿಗೆ ಪರಿಹಾರ ವಿತರಣೆ ಆಗಿಲ್ಲ ಎಂದು ಬರೆದುಕೊಂಡಿದ್ದಾರೆ. ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಟ್ವೀಟ್‌ನಲ್ಲಿ ಏನಿದೆ? 

 

ಮಾನ್ಯ ಬಿಎಸ್ವೈಯವರೇ, ಕೇಂದ್ರ ನೆರೆ ಪರಿಹಾರ  1200 ಕೋಟಿ ರು. ನೀಡಿದೆ ಅಂತೀರಾ,ಆದ್ರೆ ಎಲ್ಲೂ ಸಂತ್ರಸ್ತರಿಗೆ ಪರಿಹಾರ ವಿತರಣೆ ಆಗಿಲ್ಲ. ಸಂತ್ರಸ್ತರಿಗೆ ಸೂರು ಕಲ್ಪಿಸೋದು ಕನಸಾಗಿಯೇ ಉಳಿಯೋ ಹಾಗಿದೆ. ಅಧಿಕಾರಿಗಳು ಸರ್ವೇ ಮಾಡೋದ್ರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಹೇಳೋರಿಲ್ಲ, ಕೇಳೋರಿಲ್ಲ. ನಿಮ್ಮದು ತುಘಲಕ್ ಸರ್ಕಾರವಾಗಿದೆ. ಕೊಡೆ ಹಿಡಿದು ಮಳೆ ಮಧ್ಯೆ ದೀಪಾವಳಿ ಆಚರಿಸುವ ‌ನೆರೆ ಸಂತ್ರಸ್ತನ ಕಾರ್ಟೂನ್ ಚಿತ್ರ ಹಾಕಿ ಟ್ವೀಟ್ ಮಾಡಿದ್ದಾರೆ.