Mann Ki Baat: ಬಾಗಲಕೋಟೆ ಜನರಿಗೆ ನಿರಾಸೆ ಮೂಡಿಸಿದ ಮೋದಿಯ ಮನ್​ ಕೀ ಬಾತ್

  • ಬಾಗಲಕೋಟೆ ಜನರಿಗೆ ನಿರಾಸೆ ಮೂಡಿಸಿದ ಮೋದಿಯ ಮನ್​ ಕೀ ಬಾತ್
  • ಹುಸಿಯಾಯ್ತು ಶಿವಯೋಗ‌ ಮಂದಿರ ಹಾಗೂ ನೇಕಾರಿಕೆ ಬಗ್ಗೆ ಮಾತನಾಡ್ತಾರೆಂಬ ನಿರೀಕ್ಷೆ 
  • ವರ್ಷದ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮ ನಡೆಸಿದ ಮೋದಿ
     
Bagalkot people upset about Modi After Mann ki Baat speech gow

ಬಾದಾಮಿ(ಡಿ.26): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು  ತಮ್ಮ ತಿಂಗಳ ರೇಡಿಯೋ (Redio) ಕಾರ್ಯಕ್ರಮ ಮನ್​ ಕೀ ಬಾತ್ (Mann Ki Baat)​​ನ 84ನೇ ಆವೃತ್ತಿ​​ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ  ಬಾಗಲಕೋಟೆ (Bagalakote) ಜಿಲ್ಲೆಯ ಮಠಾಧೀಶರು ಮತ್ತು ನೇಕಾರರ (weavers) ಪ್ರತಿನಿಧಿಗಳು ಭಾಗಿಯಾಗಲು ಭರ್ಜರಿ  ಸಿದ್ಧತೆ ನಡೆಸಿದ್ದರು. ಆದರೆ ಮೋದಿ ಮನ್ ಕೀ ಬಾತ್ ಭಾಷಣ  ಬಾಗಲಕೋಟೆ ಜನರ ನಿರಾಶೆಗೆ ಕಾರಣವಾಗಿದೆ. ಮೋದಿ ತಮ್ಮ ಭಾಷಣದಲ್ಲಿ ಶಿವಯೋಗ‌ ಮಂದಿರ (shivayoga mandira) ಹಾಗೂ ನೇಕಾರಿಕೆ ಬಗ್ಗೆ ಮಾತನಾಡ್ತಾರೆಂಬ ನಿರೀಕ್ಷೆ ಸುಳ್ಳಾಗಿದೆ. ಅರ್ಧ ಗಂಟೆಯ ತಮ್ಮ ಭಾಷಣದಲ್ಲಿ ಜಿಲ್ಲೆಯ ಶಿವಯೋಗ ಮಂದಿರದ ಬಗ್ಗೆ ಒಂದು ಮಾತು ಕೂಡ ಆಡದ ಪ್ರಧಾನಿ ಮೋದಿ ತಮ್ಮ ಈ ವರ್ಷದ  ಮನ್ ಕೀ ಬಾತ್ ಕಾರ್ಯಕ್ರಮ ಮುಗಿಸಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ವಠುಗಳನ್ನು ರೂಪಿಸೋ ಮಹತ್ವದ ಕೇಂದ್ರವಾಗಿರೋ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ರಾಜ್ಯದಲ್ಲಿ ಅತಿಹೆಚ್ಚು ನೇಕಾರರು ಇರುವ ಜಿಲ್ಲೆ ಬಾಗಲಕೋಟೆಯಾಗಿರೋ ಹಿನ್ನೆಲೆ ನೇಕಾರ ಪ್ರತಿನಿಧಿಗಳೊಂದಿಗೆ ಮೋದಿ  ಸಂವಾದ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು.  ಹೀಗಾಗಿ ಭರ್ಜರಿ ತಯಾರಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳು, ಬಿಜೆಪಿ ಮುಖಂಡರು, ಶಿವಯೋಗ ಮಂದಿರ ವಟುಗಳು ಸೇರಿ ಜಿಲ್ಲೆಯ ಹಲವಾರು ಮಂದಿ ಮನ್ ಕೀ ಬಾತ್ ನೇರ ಸಂವಾದದಲ್ಲಿ ಭಾಗಿಯಾಗಿದ್ದರು.

ಇನ್ನು ಶಿವಮಂದಿರಲ್ಲಿ ಮೋದಿ ಮನ್ ಕೀ ಬಾತ್  ಭಾಷಣವನ್ನು ಆಲಿಸುತ್ತಿದ್ದ ವೇಳೆ ವಟುವೊಬ್ಬರು ಬಿಸಿಲಿನಿಂದ ತಲೆ ಸುತ್ತು ಬಂದು ಬಿದ್ದರು. ಮೃತ್ಯುಂಜಯ ದೇವರು ಎಂಬ ವಟು ಮೋರ್ಚೆ ಹೋಗಿದ್ದು,  ತಕ್ಷಣ ಅವರನ್ನು ಸ್ಥಳೀಯರು ಎತ್ತಿಕೊಂಡು ಹೋಗಿ ಶುಶ್ರೂಶೆ ಮಾಡಿದರು.

PM Modi Address ಹೊಸ ವರ್ಷದ ಹೊಸ್ತಿಲಲ್ಲಿ ಗುಡ್ ನ್ಯೂಸ್ ನೀಡಿದ ಪ್ರಧಾನಿ ಮೋದಿ, ರಾಷ್ಟ್ರವನ್ನುದ್ದೇಶಿಸಿ ಭಾಷಣ!

ಮೋದಿ ಮನ್ ಕೀ ಬಾತ್ ಮುಖ್ಯಾಂಶಗಳು:
*ಮನ್ ಕೀ ಬಾತ್ ಸರಣಿಯ 84ನೇ ಕಾರ್ಯಕ್ರಮ ಜೊತೆಗೆ ಈ ವರ್ಷದ ಕೊನೆಯ ಮನ್ ಕೀ ಬಾತ್ ನಡೆಸಿಕೊಟ್ಟ ಪ್ರಧಾನಿ ಮೋದಿ, ಮೊದಲಿಗೆ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್  ಜೊತೆಗೆ ಎಲ್ಲರನ್ನು ಸ್ಮರಿಸಿದರು.

*ವರುಣ್ ಸಿಂಗ್ ಹಲವು ದಿನಗಳ ಕಾಲ ಧೈರ್ಯದಿಂದ ಸಾವಿನೊಂದಿಗೆ ಹೋರಾಡಿದರು ಆದರೆ ದುರದೃಷ್ಟವಶಾತ್ ಕೊನೆಯುಸಿರೆಳೆದರು. ಆಗಸ್ಟ್ 2021 ರಲ್ಲಿ ಅವರಿಗೆ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಯಿತು. ಶಾಲೆಯ ಪ್ರಾಂಶುಪಾಲರಿಗೆ ವರುಣ್ ಬರೆದ ಪತ್ರವನ್ನು ಕೂಡ ಮೋದಿ ಉಲ್ಲೇಖಿಸಿ ಮಾತನಾಡಿದರು.

*ಕೋವಿಡ್ -19 ಸಾಂಕ್ರಾಮಿಕದ ಮಧ್ಯೆಯು ದೇಶದ ಜೊತೆ ನಿಂತಿರುವುದನ್ನು ಶ್ಲಾಘಿಸಿದ ಮೋದಿ. ಒಮಿಕ್ರಾನ್ ಬಗ್ಗೆ ಎಚ್ಚರದಿಂದ ಇರಿ ಎಂದು ದೇಶದ ಜನರಿಗೆ ಸಲಹೆ ನೀಡಿದರು.

*ದೇಶದಲ್ಲಿ ಹೆಚ್ಚುತ್ತಿರುವ ಸ್ಟಾರ್ಟ್‌ಅಪ್‌ ಕಂಪೆನಿಗಳು ಮತ್ತು ಯುನಿಕಾರ್ನ್‌ಗಳನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ಈ ರೀತಿಯ 70 ಕ್ಕೂ ಹೆಚ್ಚು ಸಂಸ್ಥೆಗಳು ಯುನಿಕಾರ್ನ್ ಸ್ಥಾನಮಾನವನ್ನು ಸಾಧಿಸುವುದರೊಂದಿಗೆ ಭಾರತವು ಹೆಚ್ಚಿನ ಮೌಲ್ಯದ ಸ್ಟಾರ್ಟ್-ಅಪ್‌ಗಳಿಗೆ ನೆಲೆಯಾಗಿದೆ.  ಜೊತೆಗೆ  ದೇಶದ ಒಳಗೆ ಮತ್ತು ಹೊರಗಿನ ಹೂಡಿಕೆದಾರರಿಂದ ಇವುಗಳು ಪಡೆದ ಹಣವನ್ನು ಊಹಿಸಲೂ ಸಾಧ್ಯವಿಲ್ಲ. 'SAAF-Water’ ಎಂಬುದು ಒಂದು ಸ್ಟಾರ್ಟಪ್ ಆಗಿದ್ದು, ಜನರಿಗೆ ಕೃತಕ ಬುದ್ಧಿಮತ್ತೆ ಮತ್ತು IoT(Internet of Things) ಸಹಾಯದಿಂದ ಶುದ್ಧ ಕುಡಿಯುವ ನೀರನ್ನು ನಕ್ಷೆ ಮಾಡಲು ಮತ್ತು ಗುರುತಿಸಲು ಸಹಾಯ ಮಾಡುತ್ತಿದೆ, ಇದು ತಂತ್ರಜ್ಞಾನದ ಸಹಾಯದಿಂದ ಜನರಿಗೆ ಶುದ್ಧ ನೀರನ್ನು ಕುಡಿಯಲು ಅನುವು ಮಾಡಿಕೊಡುತ್ತದೆ ಎಂ

*ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳುವ ಕುರಿತು ಮಾತನಾಡಿದ ಮೋದಿ ಸ್ಕ್ರೀನ್ ಟೈಂ ಹೆಚ್ಚಾಗುತ್ತಿರುವ ಕುರಿತು ಮಾತನಾಡಿದರು. ನಾವು ಓದುವುದನ್ನು ಹೆಚ್ಚು ಜನಪ್ರಿಯಗೊಳಿಸೋಣ. 2021ರಲ್ಲಿ ನೀವು ಓದಿದ ಪುಸ್ತಕದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಿ ಎಂದು ನಾವು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಇತರರು 2022ರಲ್ಲಿ ಪುಸ್ತಕಗಳನ್ನು ಓದಲು ನೀವು ಸಹಾಯ ಮಾಡುತ್ತೀರಿ ಎಂಬ ಭರವಸೆ ಇದೆ ಎಂದರು.

*"ಮುಂದಿನ ಮನ್ ಕೀ ಬಾತ್ 2022ರಲ್ಲಿ ನಡೆಯಲಿದೆ. ನಾವು ಹೊಸ ಕೆಲಸಗಳನ್ನು ಮಾಡೋಣ, ಹೊಸತನವನ್ನು ಹುಡುಕೋಣ ಮತ್ತು ನಮ್ಮ ರಾಷ್ಟ್ರದ ಪ್ರಗತಿ ಮತ್ತು ಭಾರತೀಯರ ಸಬಲೀಕರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಮುನ್ನಡೆಯೋಣ" ಎಂದು ಕರೆ ನೀಡಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ರಾಜಕೀಯ ನಷ್ಟವಾದರೂ ಚಿಂತೆಯಿಲ್ಲ, ನಮ್ಮಿಂದ ಜನೋಪಯೋಗಿ ನಿರ್ಧಾರ: ಶಾ

Latest Videos
Follow Us:
Download App:
  • android
  • ios