ಚೆನ್ನೈ(ಮೇ.17):  ಟಿವಿಎಸ್ ಕಂಪನಿಯ ಅಪಾಚೆ ಬೈಕ್ ಹೆಚ್ಚು ಜನಪ್ರಿಯವಾಗಿದೆ. ಅಪಾಚೆ 160 ಸೇರಿದಂತೆ ಹಲವು ಸಿಸಿ ಎಂಜಿನ್ ಬೈಕ್‌ಗಳು ಮಾರುಕಟ್ಟೆಯಲ್ಲಿದೆ. ಇದೀಗ ಅಪಾಚೆ  RR 310 ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಹೆಚ್ಚುವರಿ ಫೀಚರ್ಸ್, ಗರಿಷ್ಠ ಸುರಕ್ಷತೆಗಳನ್ನೊಳಗೊಂಡ ನೂತನ  TVS ಅಪಾಚೆ RR 310 ಬೈಕ್ ಇದೇ 28 ರಂದು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಎಪ್ರಿಲ್ ಮಾರಾಟ ಲಿಸ್ಟ್ ಬಹಿರಂಗ- ಅಗ್ರಸ್ಥಾನದಲ್ಲಿ ಹೀರೋ, ಹೊಂಡಾ!

KTM RC390 ಬೈಕ್‌ಗೆ ಪ್ರತಿಸ್ಪರ್ಧಿಯಾಗಿರುವ TVS ಅಪಾಚೆ RR 310 ಈಗಾಗಲೇ ಮಾರುಕಟ್ಟೆಯಲ್ಲಿದೆ. ಇದೇ ಬೈಕ್ ಅಪ್‌ಗ್ರೇಡ್ ಆಗಿ ಬಿಡುಗಡೆಯಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ TVS ಅಪಾಚೆ RR 310 ಬೈಕ್ ಬೆಲೆ 2.24 ಲಕ್ಷ ರೂಪಾಯಿ. ಇದು KTM RC390 ಬೈಕ್ ಬೆಲೆಗಿಂತ ಕಡಿಮೆ.

ಇದನ್ನೂ ಓದಿ: ಬೈಕನ್ನೇ ದೇವರಂತೆ ಪೂಜಿಸುವ ಬುಲೆಟ್ ಬಾಬಾ ಮಂದಿರ!

ನೂತನ TVS ಅಪಾಚೆ RR 310 ಬೈಕ್ 311cc,4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್, ಹೊಂದಿದೆ. ಇದೇ ಎಂಜಿನ್   BMW ಮೊಟ್ರಾಡ್‌ನಲ್ಲೂ ಬಳಸಲಾಗಿದೆ.   34 Bhp ಪವರ್ ಹಾಗೂ 28 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.