ನವದೆಹಲಿ(ಮಾ.11): ಯಮಹಾ ಸ್ಕೂಟರ್ ವಿಭಾಗದಲ್ಲಿ ಫ್ಯಾಸಿನೋ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇದೀಗ ಯಮಹಾ ಫ್ಯಾಸಿನೋ ಡಾರ್ಕ್ ನೈಟ್ ಎಡಿಶನ್ ಸ್ಕೂಟರ್ ಬಿಡುಗಡೆಯಾಗಿದೆ. ಹೊಸ ಫೀಚರ್ಸ್ ಹಾಗೂ ಅತ್ಯಾಕರ್ಷಕ ಲುಕ್‌ನಲ್ಲಿ ಈ ಸ್ಕೂಟರ್ ಮತ್ತೆ ಗ್ರಾಹಕರನ್ನ ಮೋಡಿ ಮಾಡೋ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ -ಬರುತ್ತಿದೆ ಬಜಾಜ್ KTM ಬೈಕ್!

ಡಾರ್ಕ್ ನೈಟ್ ಎಡಿಶನ್  ಸ್ಕೂಟರ್ ಡಾರ್ಕ್ ಬ್ಲಾಕ್ ಹಾಗೂ ಮರೂನ್ ಸೀಟ್ ಹೊಂದಿದೆ. ಯುನಿಫೈಡ್ ಬ್ರೇಕಿಂಗ್ ಸಿಸ್ಟಮ್(UBS) ಇದು ಹೊಂಡಾದ ಕಾಂಬಿ ಬ್ರೇಕಿಂಗ್ ಸಿಸ್ಟಮ್(CBS) ಸರಿಸಮವಾಗಿದೆ. ಇನ್ನು ಎಂಜಿನ್‍ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇದನ್ನೂ ಓದಿ: ಕಾರು ಎಷ್ಟು ಕೊಡುತ್ತೆ ಪ್ರಶ್ನೆಗೆ ಮಹೀಂದ್ರ ಮಾಲೀಕರ ತಕ್ಕ ತಿರುಗೇಟು!

113 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್,  7 bhp ಪವರ್ ಹಾಗೂ 8.1 Nm ಪೀಕ್ ಪವರ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ನೂತನ ಫ್ಯಾಸಿನೋ ಡಾರ್ಕ್ ನೈಟ್ ಎಡಿಶನ್ ಸ್ಕೂಟರ್ ಬೆಲೆ  56,793 ರೂಪಾಯಿ(ಎಕ್ಸ್ ಶೋ ರೂಂ).