ಬೆಂಗಳೂರು(ಮಾ.12):  ಬಜಾಜ್ ಆಟೋ ಕಂಪನಿ ಈಗಾಗಲೇ ಅತ್ಯುತ್ತಮ ಹಾಗೂ ಜನಪ್ರಿಯ ಬೈಕ್ ಬಿಡುಗಡೆ ಮಾಡಿದ ಖ್ಯಾತಿಗೆ ಪಾತ್ರವಾಗಿದೆ. ಡೊಮಿನಾರ್ 400 ಬೈಕ್ ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಬಜಾಜ್ ಇದೀಗ ಡೊಮಿನಾರ್ 250 ಬೈಕ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಬಜಾಜ್ ಪಲ್ಸರ್ 150 BS6 ಬೈಕ್ ಬಿಡುಗಡೆ; ಬೆಲೆ ವಿಶೇಷತೆ ಇಲ್ಲಿದೆ!

DOHC ಎಂಜಿನ್ ಒಳಹೊಂಡಿರುವ ನೂತನ ಬೈಕ್ 248.8 CC ಸಾಮರ್ಥ್ಯ ಹೊಂದಿದೆ.  27PS ಪವರ್ ಹಾಗೂ 23.5NM ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಸುಪೀರಿಯರ್ ಹ್ಯಾಂಡ್ಲಿಂಗ್, ಆರಾಮಾದಾಯಕ ಡ್ರೈವಿಂಗ್ ಅನೂಕಲಕ್ಕೆ ಅಪ್-ಸೈಡ್(USD) ಫೋರ್ಕ್ಸ್, ಟ್ವಿನ್ ಬ್ಯಾರೆಲ್ ಎಕ್ಸಾಸ್ಟ್ ಸೇರಿದಂತೆ ಹಲವು ವಿಶೇಷತೆ ಒಳಗೊಂಡಿದೆ.

ಕೇವಲ 2 ಸಾವಿರ ರೂ.ಗೆ ಬುಕ್ ಮಾಡಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್!

ಸೀಟಿನ ಕೆಳಗೆ ಹೊಸ ಬಂಗೀ ಪಟ್ಟಿಗಳನ್ನು ಹಾಕಿರುವುದರಿಂದ ಲಾಂಗ್ ರೈಡ್ ವೇಳೆ ಗೇರ್ ಖಾತರಿ ಮಾಡಲು ನೆರವಾಗುತ್ತದೆ. ಡಿಸ್‌ಪ್ಲೇ ಶೋಯಿಂಗ್ ಟೈಮ್, ಗೇರ್ ಪೊಸಿಸಶನ್ ಹಾಗೂ ಟ್ರಿಪ್ ಮಾಹಿತಿಯನ್ನು ಪುನರ್ ವಿನ್ಯಾಸ ಮಾಡಲಾಗಿದೆ. ಇನ್ನು ಟ್ಯಾಂಕ್ ಪ್ಯಾಡ್ ಮತ್ತಷ್ಟು ವಿಸ್ತಾರಗೊಳಿಸಲಾಗಿದೆ.

ಹೊಸ ಅವತಾರದಲ್ಲಿ ಬಜಾಜ್ CT100 ಬೈಕ್ ಬಿಡುಗಡೆ!

ಡೊಮಿನಾರ್ ಹೆಚ್ಚು ಗ್ರಾಹಕರನ್ನು ಆಕರ್ಷಿಸಿದ ಬೈಕ್ ಆಗಿದೆ. ಲಾಂಗ್ ರೈಡ್‌ಗೆ ಜನರು ಆಯ್ಕೆ ಮಾಡುವ ಬೈಕ್ ಆಗಿದ್ದು, ಸುಮಾರು 5 ಖಂಡಗಳನ್ನು ದಾಟಿ ಅಸ್ಥಿತ್ವ ಸಾಧಿಸಿದೆ. ಡೊಮಿನಾರ್ 250 ಉತ್ಸಾರಿ ರೈಡರ್‌ಗಳಿಗೆ ಸೂಕ್ತವಾಗಲಿದೆ ಎಂದು ಬಜಾಜ್ ಅಟೋ ಲಿಮಿಟೆಡ್ ಮೋಟರ್ ಸೈಕಲ್ ಅಧ್ಯಕ್ಷ ಸಾರಂಗ್ ಕಾನಡೆ ಹೇಳಿದರು. 

ನೂತನ ಬಜಾಜ್ ಡೊಮಿನಾರ್ 250 ಭಾರದದಲ್ಲಿ ಎಲ್ಲಾ ಭಾಗಗಳಲ್ಲಿ ಲಭ್ಯವಿದೆ. ಇದರ ಬೆಲೆ 1.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕ್ಯಾನನ್ ರೆಡ್ ಹಾಗೂ ವೈನ್ ಬ್ಲಾಕ್ ಕಲರ್‌ಗಳಲ್ಲಿ ನೂತನ ಬೈಕ್ ಲಭ್ಯವಿದೆ.