ವೋಲ್ವೋ ಕಾರುಗಳಿಗೆ ಸ್ಪೀಡ್ ಲಿಮಿಟ್- ಸುರಕ್ಷೆತೆ ಮುಖ್ಯ ಎಂದ ಕಂಪನಿ!
ವೋಲ್ವೋ ಕಾರುಗಳಿಗೆ ಸ್ಪೀಡ್ ಲಿಮಿಟ್ ಅಳವಡಿಸಲು ಮುಂದಾಗಿದೆ. ದಿಢೀರ್ ವೋಲ್ವೋ ಕಂಪೆನಿ ಸ್ಪೀಡ್ ಲಿಮಿಟ್ ಅಳವಡಿಸಲು ಮುಂದಾಗಿದ್ದೇಕೆ? ಇದಕ್ಕಾಗಿ ವೋಲ್ವೋ ವಿಶೇಷ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. ಇಲ್ಲಿದೆ ಹೆಚ್ಚಿನ ವಿವರ.
ನವದಹೆಲಿ(ಮಾ.04): ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ದುಬಾರಿ ಬೆಲೆಯ ವೋಲ್ವೋ ಕಾರುಗಳಿಗೆ ಸ್ಪೀಡ್ ಲಿಮಿಟ್ ಅಳವಡಿಸಲು ಮುಂದಾಗಿದೆ. ಏರ್ ಬ್ಯಾಗ್ ಸೇರಿದಂತೆ ಗರಿಷ್ಠ ಸುರಕ್ಷತೆಗಳನ್ನ ಅಳವಡಿಸಿರು ವೋಲ್ವೋ ಇದೀಗ ಸ್ಪೀಡ್ ಲಿಮಿಟ್ ಮಾಡೋ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ: ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!
2020ರಿಂದ ವೋಲ್ವೋ ಕಾರುಗಳ ಗರಿಷ್ಠ ವೇಗೆ 180km/h ಮಾತ್ರ. ಗರಿಷ್ಠ ವೇಗದಿಂದ ವೋಲ್ವೋ ಕಾರುಗಳು ಅಪಘಾತವಾದಾಗ ಸಾವು-ನೋವು ಸಂಭವಿಸುತ್ತಿದೆ. ಹೀಗಾಗಿ ವೇಗದ ಮಿತಿ ಅಳವಡಿಸಲು ಮುಂದಾಗಿದೆ. ವೋಲ್ವೋ ಕಾರುಗಳು ಗರಿಷ್ಠ ವೇಗ, ಕಡಿಮೆ ಅವಧಿಯಲ್ಲಿ ನಿರ್ಧಿಷ್ಟ ಕಿ.ಮೀ ಪ್ರಯಾಣ ಮುಖ್ಯವಲ್ಲ. ಗ್ರಾಹಕರ ಸೇಫ್ಟಿ ಅತಿ ಮುಖ್ಯ ಎಂದಿದೆ.
ಇದನ್ನೂ ಓದಿ: ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ!
ಸ್ಪೀಡ್ ಲಿಮಿಟ್‌ಗೆ ಹೊಸ ತಂತ್ರಜ್ಞಾನ ಅಳವಡಿಸಲು ವೋಲ್ವೋ ಮುಂದಾಗಿದೆ. ಇದಕ್ಕಾಗಿ ಜೆಯೊಫೆನ್ಸಿಂಗ್ ಟೆಕ್ನಾಲಜಿ ಅಳವಡಿಸಲು ನಿರ್ಧರಿದೆ. ಈ ಟೆಕ್ನಾಲಜಿಯಿಂದ ಶಾಲಾ ಆವರಣ, ಆಸ್ಪತ್ರೆ, ಅಪಘಾತವಲಯಗಳಲ್ಲಿ ಕಾರು ಆಟೋಮ್ಯಾಟಿಕ್ ಆಗಿ ವೇಗ ಕಡಿಮೆಯಾಗುತ್ತೆ. ಇದರಿಂದ ಅಪಘಾತಗಳನ್ನ ತಪ್ಪಿಸಬಹುದು ಎಂದು ವೋಲ್ಪೋ ಹೇಳಿದೆ.