Asianet Suvarna News Asianet Suvarna News

ಎಎನ್‌ಪಿ ಟ್ರಾವೆಲ್ಸ್‌ ನಿಂದ ವಾಹನಗಳ ಚಾರ್ಜರ್‌ ಘಟಕ ಆರಂಭ

ಬೆಂಗಳೂರಿನ ವಾಹನಗಳ ಚಾರ್ಜ್ ಮಾಡುವ ಘಟಕ ಆರಂಭ ಮಾಡಲಾಗಿದೆ.  ಜಯನಗರದಲ್ಲಿ ಎಲೆಕ್ಟ್ರಾನಿಕ್‌ ಮೋಟಾರ್ಸ್ ಗೆ ಚಾಲನೆ ನೀಡಲಾಗಿದೆ. 

Vehicle Charging Unit Begins in Bengaluru Jayanagar
Author
Bengaluru, First Published Aug 13, 2019, 9:06 AM IST

 ಬೆಂಗಳೂರು [ಆ.13]: ಜಯನಗರದ ಪಟ್ಟಾಭಿರಾಮ ನಗರದಲ್ಲಿ ಎಎನ್‌ಪಿ ಟ್ರಾವೆಲ್ಸ್‌ ವತಿಯಿಂದ ವಾಹನಗಳನ್ನು ಚಾರ್ಜ್ ಮಾಡುವ ಎಲೆಕ್ಟ್ರಾನಿಕ್‌ ಮೋಟಾರ್ಸ್‌ ಆರಂಭಿಸಲಾಯಿತು.

ದತ್ತಾತ್ರೆಯ ಪೀಠದ ವಿನಯ್ ಗುರೂಜಿ ಎಲೆಕ್ಟ್ರಾನಿಕ್‌ ಮೋಟಾರ್ಸ್‌ಗೆ ಚಾಲನೆ ನೀಡಿದರು. ನಂತರ ಮಾತನಾಡಿ, ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಪರಿಸರ ಮಾಲಿನ್ಯ ತಡೆಯಬೇಕಾದರೆ ಮನೆಗೆ ಒಂದೇ ವಾಹನ ಎಂದು ನಿಯಮ ಮಾಡಬೇಕು. ಹಾಗೆಯೇ ಪರಿಸರ ರಕ್ಷಣೆಗಾಗಿ ಎಲ್ಲರಲ್ಲೂ ಸಸಿ ನೆಡುವುದು ಮತ್ತು ಇರುವ ಮರಗಳನ್ನು ಬೆಳೆಸುವ ಪರಿಪಾಠಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ನಮ್ಮ ಜಯನಗರದಲ್ಲಿ ಇ-ಮೋಟಾರ್ಸ್‌ ಆರಂಭಿಸಿರುವುದು ನಮ್ಮೆಲ್ಲರ ಹೆಮ್ಮೆ. ಹಾಗೆಯೇ ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್‌ ಮೋಟಾರ್ಸ್‌ ಮೇಲಿನ ಜಿಎಸ್ಟಿಶೇ.5 ರಷ್ಟುಇಳಿಸಿ ಅನುಕೂಲ ಮಾಡಿದೆ. ಜನತೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಸಲಹೆ ನೀಡಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಬಿಎಂಪಿ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಮಾತನಾಡಿ, ಎಎನ್‌ಪಿ ಟ್ರಾವೆಲ್ಸ್‌ ಸಂಸ್ಥೆಯ ವತಿಯಿಂದ ಹೊಸದಾಗಿ ಉದ್ಯೋಗ ಅರಸಿ ಬರುವವರಿಗೆ ಹೆಚ್ಚಿನ ಅವಕಾಶ ಲಭಿಸಲಿದೆ ಎಂದರು. ಶಾಸಕರಾದ ರಾಮಲಿಂಗಾರೆಡ್ಡಿ, ಬಿಬಿಎಂಪಿ ಸದಸ್ಯರಾದ ನಾಗರತ್ನ ರಾಮಮೂರ್ತಿ, ಸಿ.ಕೆ.ಮುರುಳಿ ಮತ್ತು ಎಂ.ಕೆ.ನಾಗೇಶ್‌ ಭಾಗವಹಿಸಿದ್ದರು.

Follow Us:
Download App:
  • android
  • ios