ಡ್ರಿಂಕ್ & ಡ್ರೈವ್‌ಗಿಂತ ಟಚ್ ಸ್ಕ್ರೀನ್ ಬಳಸುವುದು ಅತ್ಯಂತ ಅಪಾಯಕಾರಿ; ಕಾರಣ ಇಲ್ಲಿದೆ!

ಕುಡಿದು ವಾಹನ ಚಾಲನೆ ಮಾಡುವುದು ಅಪಾಯಕಾರಿ. ಹೀಗಾಗಿ ಡ್ರಿಂಕ್ ಅಂಡ್ ಡ್ರೈವ್‌ಗೆ 10,000 ರೂಪಾಯಿ ದಂಡ, ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಡ್ರಿಂಕ್ ಅಂಡ್ ಡ್ರೈವ್‌ಗಿಂತ ಅಪಾಯಕಾರಿಯಾಗಿಗೆ ಚಾಲನೆ ವೇಳೆ ಕಾರಿನ ಟಚ್ ಸ್ಕ್ರೀನ್ ಸಿಸ್ಟಮ್ ಬಳಕೆ ಮಾಡುವುದು. ಇದು ಹೇಗೆ ಅನ್ನೋದು ಇಲ್ಲಿದೆ

Using Touch screan system while driving more dangerous than Drink and drive study report

ಬೆಂಗಳೂರು(ಸೆ.11): ಆಧುನಿಕ ಯುಗದಲ್ಲಿ ಕಾರಿನ ಫೀಚರ್ಸ್, ತಂತ್ರಜ್ಞಾನ ಊಹಿಸಲು ಅಸಾಧ್ಯವಾದ ಮಟ್ಟಕ್ಕೆ ಬೆಳೆದಿದೆ. ಈಗ ಬಹುತೇಕ ಎಲ್ಲಾ ಕಾರುಗಳಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದ್ದೆ ಇರುತ್ತದೆ. ಇದು ಬೇಸಿಕ್ ಫೀಚರ್ಸ್ ರೀತಿಯೇ ಆಗಿದೆ. ಸಣ್ಣ ಕಾರೇ ಆಗಿರಲಿ ಅಥವಾ ದೊಡ್ಡ ಐಷಾರಾಮಿ ಕಾರೇ ಆಗಿರಲಿ ಟಚ್ ಸ್ಕ್ರೀನ್ ಫೀಚರ್ಸ್ ನೀಡಲಾಗಿರುತ್ತದೆ. ಇದೀಗ ಅಧ್ಯಯನದ ಪ್ರಕಾರ ಕುಡಿದ ವಾಹನ ಚಲಾಯಿಸುವುದಕ್ಕಿಂತ, ಚಾಲನೆ ವೇಳೆ ಕಾರಿನ ಟಚ್ ಸ್ಕ್ರೀನ್ ಬಳಕೆ ಮಾಡುವುದು ಹೆಚ್ಚು ಅಪಾಯಕಾರಿ ಅನ್ನೋ ಮಾಹಿತಿ ಬಹಿರಂಗವಾಗಿದೆ.

3 ಸೆಕೆಂಡ್ ನಿಯಮ; ಚಾಲಕರು ಪಾಲಿಸಲೇಬೇಕು ಈ ರೂಲ್ಸ್!..

ಲಂಡನ್ ಮೂಲದ ಚಾರಿಟಿ ಬೇಸ್ IAM ರೋಡ್ ಸ್ಮಾರ್ಟ್ ಹಾಗೂ ಟ್ರಾನ್ಸ್‌ಪೋರ್ಟ್ ಹಾಗೂ ಮೊಬಿಲಿಟಿ ಗ್ಲೋಬಲ್ ಸೆಂಟರ್ ಜಂಟಿಯಾಗಿ ವಿಶೇಷ ಕಾಳಜಿ ವಹಿಸಿ ಅಧ್ಯಯನ ಮಾಡಿದೆ. ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕುಡಿದು ವಾಹನ ಚಾಲನೆ ಮಾಡುವುದಕ್ಕಿಂತ, ಚಾಲನೆಯಲ್ಲಿ ಕಾರಿನ ಟಚ್ ಸ್ಕ್ರೀನ್ ಸಿಸ್ಟಮ್ ಬಳಕೆ ಮಾಡಿದಾಗ ಚಾಲಕ ತುರ್ತು ಸಂದರ್ಭಕ್ಕೆ ಪ್ರತಿಕ್ರಿಯಿಸುವ ಸಮಯ ಮತ್ತಷ್ಚ ಕಡಿಮೆಯಾಗಿದೆ.

ಡ್ರೈವಿಂಗ್ ವೇಳೆ ಗಮನೆ ಬೆರೆಡೆ ಸೆಳೆಯುವ ವಸ್ತುಗಳ ಬಳಕೆ ವೇಲೆ ಚಾಲಕನ ಪ್ರತಿಕ್ರಿಯೆ ಸಮಯ
ಡ್ರಿಂಕ್ ಅಂಡ್ ಡ್ರೈವ್ ವೇಳೆ ಚಾಲಕ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸುವ ಸರಾಸರಿ ಸಮಯ 12 ಸೆಕೆಂಡ್ ಬಳಿಕ
ಕಾರಿನ ಆಡಿಯೋ ಮೂಲಕ ಅಥವಾ ಹೆಡ್ ಫೋನ್ ಮೂಲಕ ಮೊಬೈಲ್ ಬಳಕೆ ವೇಳೆ 27  ಸೆಕೆಂಡ್ ಬಳಿಕ
ವಾಯ್ಸ್ ರೆಕಗ್ನಿಶನ್ ಮೂಲಕ ಸಂಜ್ಞೆಗಳನ್ನು ಆಜ್ಞೆಗಳನ್ನು ನೀಡುವಾಗ 30 ಸೆಕೆಂಡ್ ಬಳಿಕ
ಚಾಲನೆ ವೇಳೆ ಫೋನ್ ಮೂಲಕ ಮೆಸೇಜ್ ಅಥವಾ ಇತರ ಸಂದೇಶ ಕಳುಹಿಸುವಾಗ 35 ಸೆಕೆಂಡ್ ಬಳಿಕ
ಒಂದು ಕೈಯಲ್ಲಿ ಫೋನ್ ಹಿಡಿದು ಚಾಲನೆ ವೇಳೆ 46 ಸೆಕೆಂಡ್ ಬಳಿಕ
ಆ್ಯಂಡ್ರಾಯ್ಡ್ ಆಟೋ ಟಚ್ ಸ್ಕ್ರೀನ್ ಬಳಕೆ ವೇಳೆ 53 ಸೆಕೆಂಡ್ ಬಳಿಕ
ಆ್ಯಪಲ್ ಕಾರ್ ಪ್ಲೇ ಟಚ್ ಸ್ಕ್ರೀನ್ ಬಳಕೆ ವೇಳೆ 57 ಸೆಕೆಂಡ್ ಬಳಿಕ

Latest Videos
Follow Us:
Download App:
  • android
  • ios