ಆಡಿಲೆಡ್(ಡಿ.10): ಟೀಂ ಇಂಡಿಯಾದ ಪ್ರತಿ ಆಸ್ಟ್ರೇಲಿಯಾ ಪ್ರವಾಸ ವಿವಾದಗಳಿಂದ ಮುಕ್ತವಾಗಿಲ್ಲ. ಒಂದಲ್ಲ ಒಂದು ಘಟನೆ ವಿವಾದಕ್ಕೆ ಕಾರಣವಾಗಿದೆ. ಇದೀಗ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರುತ್ತಿದ್ದಂತೆ ಫಾಕ್ಸ್ ಸ್ಪೋರ್ಟ್ಸ್ ವಾಹಿನಿ ಟ್ವೀಟ್ ಇದೀಗ ಭಾರತೀಯ ಅಭಿಮಾನಿಗಳನ್ನ ಕೆರಳಿಸಿದೆ.

ಇದನ್ನೂ ಓದಿ: ಮತ್ತೆ ಸ್ಲೆಡ್ಜಿಂಗ್ ಮಾಡಿದ ಪಂತ್; ಟ್ವಿಟರ್’ನಲ್ಲಿ ವಿಡಿಯೋ ವೈರಲ್..!

ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ನ 120ನೇ ಓವರ್ 5ನೇ ಎಸೆತದಲ್ಲಿ ಜೋಶ್ ಹೇಜಲ್‌ವುಡ್ ಸೆಕೆಂಡ್ ಸ್ಲಿಪ್‌ಗೆ ಕ್ಯಾಚ್ ನೀಡಿದರು. ಕೆಎಲ್ ರಾಹುಲ್ ಪಡೆದುಕೊಂಡ ಕ್ಯಾಚ್ ಕುರಿತು ಫಾಕ್ಸ್ ಸ್ಪೋರ್ಟ್ಸ್ ಟ್ವೀಟ್ ಮಾಡಿತ್ತು. ಈ ಕ್ಯಾಚನ್ನ ರಾಹುಲ್ ಸರಿಯಾಗಿ ಪಡೆದುಕೊಂಡಿದ್ದಾರ? ಎಂದು ಪ್ರಶ್ನಿಸಿತ್ತು.

 

 

ಫಾಕ್ಸ್ ಸ್ಪೋರ್ಟ್ಸ್ ಟ್ವೀಟ್‌ಗೆ ಭಾರತೀಯ ಅಭಿಮಾನಿಗಳು ಗರಂ ಆಗಿದ್ದಾರೆ. ಈ ಹಿಂದೆ ರಿಕಿ ಪಾಂಟಿಂಗ್ ಪಡೆದುಕೊಂಡ ಕ್ಯಾಚ್‌ಗಿಂತ ಇದು ಸರಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.  ಅಭಿಮಾನಿಗಳ ಟ್ವೀಟ್ ಇಲ್ಲಿದೆ.