ಚೆನ್ನೈ(ಫೆ.14): TVS ಮೋಟರ್ ಸ್ಟಾರ್ ಸಿಟಿ + ಲಿಮಿಟೆಡ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ 1999ರ ಕಾರ್ಗಿಲ್ ಯುದ್ಧದ ಹಾಗೂ ಹುತಾತ್ಮ ಯೋಧರಿಗಾಗಿ  ನೂತನ ಕಾರ್ಗಿಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಭಾರತೀಯ ಸೇನೆಯ ಬಣ್ಣದಲ್ಲಿ ನೂತನ ಬೈಕ್ ಲಭ್ಯವಿದೆ.

ಇದನ್ನೂ ಓದಿ: ಮಹೀಂದ್ರ XUV 300 ಬಿಡುಗಡೆ- ಕಡಿಮೆ ಬೆಲೆಯ SUV ಕಾರು!

TVS ಕಾರ್ಗಿಲ್ ಎಡಿಶನ್ ಬೈಕ್ ಬೆಲೆ 54,399 ರೂಪಾಯಿ(ಎಕ್ಸ್ ಶೋ ರೂಂ). ಬಿಳಿ ಹಾಗೂ ಹಸಿರು ಮಿಶ್ರಿತ ಬಣ್ಣದಲ್ಲಿ ಆರ್ಮಿ ಸಮವಸ್ತ್ರದ ಗ್ರಾಫಿಕ್ಸ್ ಈ ಬೈಕ್ ಅಂದವನ್ನ ಮತ್ತಷ್ಟು ಹೆಚ್ಚಿಸಿದೆ. ಬದ್ಧವೈರಿ ಪಾಕಿಸ್ತಾನ ಹಿಮ್ಮೆಟ್ಟಿಸಿದ ಭಾರತೀಯ ವೀರ ಯೋಧರ ಸಾಹಸಕ್ಕೆ ಇದೀಗ TVS ಕಾರ್ಗಿಲ್ ಎಡಿಶನ್ ಬೈಕ್ ಬಿಡುಗಡೆ ಮಾಡೋ ಮೂಲಕ ಗೌರವ ಸೂಚಿಸಿದೆ.

ಇದನ್ನೂ ಓದಿ: 2019ರ ದೀಪಾವಳಿಗೆ ಬಜಾಜ್‌ನಿಂದ ಬಂಪರ್ ಕೊಡುಗೆ!

TVS ಕಾರ್ಗಿಲ್ ಎಡಿಶನ್ ಬೈಕ್ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. TVS ಮೋಟರ್ ಸ್ಟಾರ್ ಸಿಟಿ + ಎಂಜಿನ್ ಹಾಗೂ ವಿನ್ಯಾಸ ಹೊಂದಿದೆ. 110 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್, 8bhp ಹಾಗೂ 8.7 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.