ಟೊಯೊಟಾ ಯಾರಿಸ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!
ಟೊಯೊಟಾ ಯಾರಿಸ್ ಕಾರಿನ ಕ್ರಾಶ್ ಟೆಸ್ಟ್ ಫಲಿತಾಂಶ ಪ್ರಕಟಗೊಂಡಿದೆ. ಕಳೆದ ವರ್ಷ ಬಿಡುಗಡೆಯಾದ ಈ ಕಾರಿನ ಸುರಕ್ಷತೆ ಎಷ್ಟಿದೆ? ಇಲ್ಲಿದೆ ವಿವರ.
ನವದೆಹಲಿ(ಏ.07): ನೂತನ ನಿಯಮದ ಪ್ರಕಾಾರ ಭಾರತದಲ್ಲಿ ಕನಿಷ್ಠ ಸುರಕ್ಷತೆ ಇಲ್ಲದ ಕಾರುಗಳನ್ನು ಮಾರಾಟ ಮಾಡುವಂತಿಲ್ಲ. ಟಾಟಾ ನೆಕ್ಸಾನ್ ಕಾರು ಸುರಕ್ಷತೆಯಲ್ಲಿ ಗರಿಷ್ಠ 5 ಸ್ಟಾರ್ ರೇಟಿಂಗ್ ಪಡೆದ ಮೇಲೆ ಇದೀಗ ಗ್ರಾಹಕರು ಹೆಚ್ಚು ಸುರಕ್ಷತೆಯ ಕಾರಿನ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಇತರ ಕಾರು ಕಂಪನಿಗಳಿಗೆ ಗರಿಷ್ಠ ಸುರಕ್ಷತೆ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ: ಇಕೋ ಸ್ಪೋರ್ಟ್, ಮಹೀಂದ್ರ ಹಿಂದಿಕ್ಕಿದ ಟಾಟಾ ನೆಕ್ಸಾನ್!
ಇತ್ತೀಚೆಗೆ ಬಿಡುಗಡೆಯಾದ ಟೊಯೊಟಾ ಯಾರಿಸ್ ಕಾರಿನ ಕ್ರಾಶ್ ಟೆಸ್ಟ್ ಫಲಿತಾಂಶ ಬಿಡುಗಡೆಯಾಗಿದೆ. ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆಯಲ್ಲಿ ಟೊಯೊಟಾ ಯಾರಿಸ್ ಕಾರು 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ವಯಸ್ಕರ ಸುರಕ್ಷತೆಯಲ್ಲಿ 34 ಅಂಕಗಳ ಪೈಕಿ 26.99 ಅಂಕ ಪಡೆದಕೊಂಡಿದ್ದರೆ, ಮಕ್ಕಳ ಸುರಕ್ಷತೆಯ 49 ಅಂಕಗಳ ಪೈಕಿ 38.05 ಅಂಕ ಪಡೆದುಕೊಂಡಿದೆ.
ಇದನ್ನೂ ಓದಿ: MG ಮೋಟಾರ್ಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ- ಪೆಟ್ರೋಲ್ ಕಾರಿಗಿಂತ ಕಡಿಮೆ!
ಮಾರುತಿ ಸಿಯಾಜ್, ಹೊಂಡಾ ಸಿಟಿ, ವೋಕ್ಸ್‌ವ್ಯಾಗನ್ ವೆಂಟೋ ಹಾಗೂ ಹ್ಯುಂಡೈ ವರ್ನಾ ಕಾರಿಗೆ ಪ್ರತಿಸ್ಪರ್ಧಿಯಾಗಿ 2018ರಲ್ಲಿ ಬಿಡುಗಡೆಯಾದ ಯಾರಿಸ್ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನು ಮೋಡಿ ಮಾಡಿದೆ. ನೂತನ ಟೊಯೊಟಾ ಯಾರಿಸ್ ಬೆಲೆ 9.29 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).