Asianet Suvarna News Asianet Suvarna News

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ಟೊಯೋಟಾ ಕಿರ್ಲೋಸ್ಕರ್

ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ದಿಗ್ಗಜನಾಗಿ ಗುರುತಿಸಿಕೊಂಡಿರುವ ಟೊಯೋಟಾ ಕಿರ್ಲೋಸ್ಕರ್ ತನ್ನ ಸಾಮಾಜಿಕ ಸೇವೆಯನ್ನು ಮುಂದುವರಿಸಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಎರಡು ನೀರು ಶುದ್ಧೀಕರಣ ಘಟಕಗಳ ಸ್ಥಾಪಿಸುವ ಮೂಲಕ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಮಾಡಿದೆ.
 

Toyota Kirloskar Motor Enables Access to Clean Drinking in Mandya
Author
Bengaluru, First Published Jun 25, 2020, 2:51 PM IST

ಬೆಂಗಳೂರು(ಜೂ.25): ಆರೋಗ್ಯಯುತ ಸಮಾಜವನ್ನು ನಿರ್ಮಿಸುವ ಮೂಲಕ ಜನ ಜೀವನವನ್ನು ಸಮೃದ್ಧಗೊಳಿಸುವ ಮಹತ್ವದ ಉದ್ದೇಶದಿಂದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಇಂದು ಸಮುದಾಯ ಆಧಾರಿತ ನೀರಿನ ಶುದ್ಧೀಕರಣ ಘಟಕಗಳನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಉದ್ಘಾಟಿಸಿದೆ. ಶಾಸಕ ಹಾಗೂ ಮಾಜಿ ಸಚಿವ ಡಿ.ಸಿ. ತಮ್ಮಣ್ಣ  ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.

ಕರ್ನಾಟಕದಲ್ಲಿ ಕೊರೋನಾ ಪರೀಕ್ಷೆ ಹೆಚ್ಚಿಸಲು ಟೊಯೋಟಾ ಕಿರ್ಲೋಸ್ಕರ್ ನೆರವು!..

ಜೊತೆಗೆ ರಾಮನಗರ ಜಿಲ್ಲೆಯಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ಇನ್ನೂ ಎರಡು ಘಟಕಗಳಿಗೆ ಚಾಲನೆ ನೀಡಲು ಮುಂದಾಗಿದೆ. ಇದರೊಂದಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಉತ್ಪಾದನಾ ಘಟಕದಲ್ಲಿ ರಾಮನಗರದಲ್ಲಿ ಮತ್ತು ಸುತ್ತಮುತ್ತಲ ಒಟ್ಟು 41 ಘಟಕಗಳನ್ನು ಸ್ಥಾಪಿಸಿದೆ. ಜೊತೆಗೆ ವಾರಣಾಸಿ ಮತ್ತು ವೈಶಾಲಿಯಲ್ಲಿ ಎರಡು ಘಟಕಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದೆ.

ಸುಲಭ EMI, ತಡೆರಹಿತ ಸಂಪರ್ಕ; ವಿಶೇಷ ಸೇವಾ ಕೊಡುಗೆ ಪರಿಚಯಿಸಿದ ಟೊಯೋಟಾ ಕಿರ್ಲೋಸ್ಕರ್

ನೂತನವಾಗಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕವು ಗಂಟೆಗೆ 1000 ಲೀಟರ್ ಪೂರೈಕೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಕನಿಷ್ಠ 6-ಹಂತದ ಶುದ್ಧೀಕರಣ ವ್ಯವಸ್ಥೆಯನ್ನು ಹೊಂದಿದೆ. ಸುಧಾರಿತ ಘಕಟವು ನೈಜ ಸಮಯದಲ್ಲಿ ನೀರನ್ನು ಶುದ್ಧೀಕರಿಸುವ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ ಗ್ರಾಮಸ್ಥರಿಗೆ ಶುದ್ಧೀಕರಿಸಿದ ನೀರಿನ ಉನ್ನತ ಗುಣಮಟ್ಟವನ್ನು ತಿಳಿಸಲು “ಒಟ್ಟು ಕರಗಿದ ಘನವಸ್ತುಗಳು (ಟಿಡಿಎಸ್), ಪಿಎಚ್ ಮೌಲ್ಯದ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಜನದಟ್ಟಣೆಯನ್ನು ನಿವಾರಿಸಲು ಈ ಘಟಕಕ್ಕೆ ಅನೇಕ ಕಡೆ ನೀರು ಪೂರೈಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದಲ್ಲದೆ, ಘಟಕವು ಸೂಲಾರ್ ವ್ಯವಸ್ಥೆ, ವಿದ್ಯುತ್ ಬ್ಯಾಕಪ್, ತ್ಯಾಜ್ಯ ನೀರಿನ ನಿರ್ವಹಣೆ ಮಾಡುವ ವ್ಯವಸ್ಥೆ ಹೊಂದಿದೆ. ಘಟಕವು ಬಹುಕಾಲ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಟಿಕೆಎಂ ಏಜೆನ್ಸಿಯೊಂದಿಗೆ 15 ವರ್ಷಗಳ ಘಟಕ ನಿರ್ವಹಣಾ ಒಪ್ಪಂದವನ್ನು ಮಾಡಿಕೊಂಡಿದೆ.

ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂ. ನೀಡಿದ ಟೊಯೋಟಾ ಕಿರ್ಲೋಸ್ಕರ್!.

ಟಿಕೆಎಂನ ಮಾರ್ಗದರ್ಶಿ ಸೂತ್ರವು ಯಾವಾಗಲೂ ಜನ ಜೀವನ ಮಟ್ಟವನ್ನು ಸುಧಾರಿಸುವುದು , ದಿನನಿತ್ಯದ ಜೀವನದ ಅಗತ್ಯ ವಿಷಯಗಳಲ್ಲಿ ಕಾರ್ಯನಿರ್ವಹಿಸಿ, ಸಂಬಂಧಿತ ಕ್ಷೇತ್ರಗಳಲ್ಲಿ ಸ್ವ-ಸುಸ್ಥಿರ ಮತ್ತು ಅರ್ಥಪೂರ್ಣವಾದ ಪ್ರಯತ್ನಗಳಿಂದ ಸಮಾಜಕ್ಕೆ ಸದಾ ಕೊಡುಗೆಯನ್ನು ನೀಡಲು ಬಯಸುತ್ತದೆ ಎಂದು ಘಟಕವನ್ನು ಉದ್ಘಾಟಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಹೇಳಿದರು.

ಕೊರೋನಾ ಹೋರಾಟಕ್ಕೆ ಮತ್ತಷ್ಟು ನೆರವು; ಆರೋಗ್ಯ ಇಲಾಖೆ ಜೊತೆ ಕೈಜೋಡಿಸಿದ ಟೊಯೋಟಾ ಕಿರ್ಲೋಸ್ಕರ್!

ಆದ್ದರಿಂದ, ನಮ್ಮ ಆದ್ಯತೆ ಯಾವಾಗಲೂ ಸ್ಥಳೀಯ ಸಮುದಾಯಗಳಿಗೆ ಬೆಂಬಲ ಸೂಚಿಸುವುದಾಗಿರುತ್ತದೆ. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಅಧ್ಯಯನ ಮಾಡಿದ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ್ನು ಪೂರೈಸುವುದು ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯರೂಪಕ್ಕೆ ಮುಂದಾದ ಸಂಸ್ಥೆ 2013ರಲ್ಲಿ ಸುರಕ್ಷಿತ ಮತ್ತು ಕೈಗೆಟುಕುವ ಬೆಲೆಯಲ್ಲಿ ಸಾರ್ವಜನಿಕರಿಗೆ ಒದಗಿಸಲು ಕ್ರಮ ಕೈಗೊಂಡೆವು. ಸಂಸ್ಥೆಯ ಸಿ.ಎಸ್.ಆರ್ ನಿಧಿಯನ್ನು ಬಳಸಿಕೊಂಡು ನಾವು ಇಂದು 250 ಗ್ರಾಮ ವ್ಯಾಪ್ತಿಯ 260000 ಕ್ಕಿಂತ ಹೆಚ್ಚು ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಒದಗಿಸುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ನಮ್ಮ ಸಿಎಸ್‍ಆರ್ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ. ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಮಾಡುವ ಬದ್ಧತೆಯೊಂದಿಗೆ ಇದುವರೆಗೆ 14,00,000 ಕ್ಕೂ ಹೆಚ್ಚು ಜನರ ಜೀವನವನ್ನು ಮುಟ್ಟಿರುವುದು ಹೆಚ್ಚಿನ ತೃಪ್ತಿ ನೀಡಿದೆ. ಇದೇ ರೀತಿ ನಮ್ಮ ಬದ್ಧತೆ ಮುಂದುವರೆಯಲಿದ್ದು, ಸಮಾಜ ಸುಧಾರಣೆಗೆ ಶ್ರಮಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮತ್ತು ಮಾಜಿ ಸಾರಿಗೆ ಸಚಿವರಾದ ಶ್ರೀ ಡಿಸಿ ತಮ್ಮಣ್ಣ ಅವರು, ಜವಾಬ್ದಾರಿಯುತ ನಾಗರಿಕರಾಗಿ ಸಮುದಾಯಗಳ ಆರೋಗ್ಯ, ಸುರಕ್ಷತೆ ಮತ್ತು ನೈರ್ಮಲ್ಯವನ್ನು ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ. ಸಮುದಾಯದ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಅಗತ್ಯ ನೆರವು ನೀಡಲು ಸ್ಥಳೀಯ ಅಧಿಕಾರಿಗಳು ಮತ್ತು ಕಾರ್ಪೊರೇಟರ್‍ಗಳು ಒಟ್ಟಾಗಿ ಕೆಲಸ ಮಾಡಬೇಕು. ಶುದ್ಧ ಕುಡಿಯುವ ನೀರನ್ನು ಪಡೆಯುವುದು ಮನುಷ್ಯನ ಮೂಲಭೂತ ಹಕ್ಕು. ಈ ನೀರಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಟೊಯೋಟಾ ನೀರಿನ ಸಮಸ್ಯೆಯನ್ನು ಪರಿಹರಿಸಲು ಮಹತ್ವದ ಕೊಡುಗೆ ನೀಡಿದೆ. ಟೊಯೋಟಾದಂತಹ ಕಂಪನಿಗಳ ಬೆಂಬಲದೊಂದಿಗೆ ನಾವು ಹೆಚ್ಚು ಹೆಚ್ಚು ಹಳ್ಳಿಗಳನ್ನು ಇಂತಹ ಸಮಸ್ಯೆಗಳಿಂದ ಮುಕ್ತಗೊಳಿಸಲು ಸಾಧ್ಯವಾಗುತ್ತದೆ ಎಂದರು.

2001 ರಿಂದ, ಟಿಕೆಎಂನ ಸಿಎಸ್‍ಆರ್ ಕಾರ್ಯಕ್ರಮಗಳು ಸಂಸ್ಥೆಯ ಅವಿಭಾಜ್ಯ ಅಂಗವಾಗಿದೆ. ಟಿಕೆಎಂ ಮತ್ತು ನಮ್ಮ ಉದ್ಯೋಗಿಗಳು ಕೈಗೊಂಡ ಸ್ವಯಂಪ್ರೇರಿತ ಕಾರ್ಯಕ್ರಮಗಳು ಪ್ರಮುಖವಾಗಿ ಸಾಮಾಜಿಕ ಬದಲಾವಣೆಯ ಕೇಂದ್ರಿತವಾಗಿರುತ್ತವೆ. ಕಾರ್ಯಕ್ರಮಗಳು ಶಿಕ್ಷಣ, ಪರಿಸರ, ಆರೋಗ್ಯ ಮತ್ತು ನೈರ್ಮಲ್ಯ, ರಸ್ತೆ ಸುರಕ್ಷತೆ ಮತ್ತು ಕೌಶಲ್ಯ ಅಭಿವೃದ್ಧಿಯ ಐದು ಪ್ರಮುಖ ವಿಷಯಗಳ ಬಗ್ಗೆ ಆದ್ಯತೆ ನೀಡಲಿವೆ. ಇವು ಸಮುದಾಯದ ಅಗತ್ಯದ ಮೇಲೆ ದೊಡ್ಡ ಮತ್ತು ರಾಷ್ಟ್ರೀಯ ಆದ್ಯತೆಗಳಾಗಿವೆ. ನಮ್ಮ ಎಲ್ಲಾ ಸಾಮಾಜಿಕ ಯೋಜನೆಗಳಲ್ಲಿ ಫಲಿತಾಂಶ ಮತ್ತು ಪರಿಣಾಮ-ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳಲು ನಿರಂತರವಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿದೆ ಎಂದರು.

 ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ನೈರ್ಮಲ್ಯ ಸೌಲಭ್ಯಗಳು ಮತ್ತು ಶಾಲಾ ಮಕ್ಕಳಲ್ಲಿ ಸಾಕಷ್ಟು ತರಬೇತಿಯ ಕೊರತೆಯ ಬಗ್ಗೆ ಹೆಚ್ಚುತ್ತಿರುವ ಸಮಸ್ಯೆಗಳನ್ನು ಎದುರಿಸಲು ಟಿಕೆಎಂ ಸರಣಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಟಿಕೆಎಂ ಸ್ವಚ್ ಭಾರತ್ ಅಭಿಯಾನಕ್ಕೆ ತನ್ನ ಬೆಂಬಲವನ್ನು ಘೋಷಿಸಿದೆ. ಈ ಕಾರ್ಯಕ್ರಮದಡಿ ಟಿಕೆಎಂ ರಾಮನಗರ ಜಿಲ್ಲೆಯಲ್ಲಿ 907 ಶಾಲಾ ನೈರ್ಮಲ್ಯ ಘಟಕಗಳನ್ನು ನಿರ್ಮಿಸಿದೆ (125 ಘಟಕಗಳು ವಾರಣಾಸಿಯಲ್ಲಿ ಮತ್ತು 125 ಘಟಕಗಳು ಬಿಹಾರದ ವೈಶಾಲಿಯಲ್ಲಿವೆ) ಈ ಕಾರ್ಯಕ್ರಮದಿಂದ ಸುಮಾರು 29,406 ಹೆಣ್ಣು ಮಕ್ಕಳಿಗೆ ಅನುಕೂಲವಾಗಿದೆ.

 ಹೊಸ ವಿಧಾನದ ಅಗತ್ಯವನ್ನು ಗುರುತಿಸಿದ ಟಿಕೆಎಂ ಕಾರ್ಯಶೈಲಿಯ ಬದಲಾವಣೆಯನ್ನು ತರುವತ್ತ ಗಮನಹರಿಸಿ “ಎಬಿಸಿಡಿ” ಯೋಜನೆಯನ್ನು ಸಹ ಪ್ರಾರಂಭಿಸಿದೆ. ಪ್ರಾಜೆಕ್ಟ್ ಎಬಿಸಿಡಿ (ಎ ಬಿಹೇವಿಯರಲ್ ಚೇಂಜ್ ಡೆಮನ್‍ಸ್ಟ್ರೇಶನ್) ಜಾಗೃತಿ ಹೆಚ್ಚಿಸುವ ಮೂಲಕ 100% ಶಾಲಾ ನೈರ್ಮಲ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ, ಇದು ಅಸ್ತಿತ್ವದಲ್ಲಿರುವ ಆರೋಗ್ಯಕರವಲ್ಲದ ಶಾಲಾ ಶೌಚಾಲಯಗಳನ್ನು ಬಳಸಬಹುದಾದ ಸ್ಥಿತಿಗೆ ನವೀಕರಿಸುವುದರ ಮೂಲಕ ಹೆಣ್ಣು ಮಗುವಿಗೆ ಘನತೆ ಮತ್ತು ಗೌಪ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ಕಲಿಕೆಯನ್ನು ಉತ್ತೇಜಿಸುತ್ತದೆ.

ಶಾಲಾ ಮಕ್ಕಳು, ಶಿಕ್ಷಕರು ಮತ್ತು ಸಮುದಾಯದ ಸದಸ್ಯರು ಈ ಕಾರ್ಯಕ್ರಮದಡಿಯಲ್ಲಿ ವೈಯಕ್ತಿಕ ಗೃಹ ನೈರ್ಮಲ್ಯ ಘಟಕಗಳನ್ನು ನಿರ್ಮಿಸಲು ಸಮುದಾಯವನ್ನು ಪ್ರೇರೇಪಿಸುವ ವಿಶೇಷ ಕಾರ್ಯಕ್ರಮವನ್ನು ರೂಪಿಸಿದ್ದರು. ಇದರ ಮೂಲಕ 10,754 ಕ್ಕೂ ಹೆಚ್ಚು ವೈಯಕ್ತಿಕ ಗೃಹ ಘಟಕಗಳನ್ನು ನಿರ್ಮಿಸಲಾಗಿದೆ. ಮತ್ತು 92 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ಘೋಷಿಸಲು ನೆರವಾಗಿದೆ ಎಂದರು.

ನಮ್ಮ ಎಲ್ಲಾ ಕಾರ್ಯಕ್ರಮಗಳು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವಾಗಿ ರೂಪುಗೊಳ್ಳುತ್ತವೆ. ಸಮುದಾಯಗಳಲ್ಲಿ ದೀರ್ಘಾವಧಿಯ ಸುಸ್ಥಿತರೆಯನ್ನು ಕಾಪಾಡಲು ಜಾಗರೂಕತೆಯನ್ನು ಪರಿಹಾರವನ್ನು ರಚಿಸಲಾಗಿದೆ ಎಂದು ವಿವರಿಸಿದರು.

Follow Us:
Download App:
  • android
  • ios