Asianet Suvarna News Asianet Suvarna News

ಇನೋವಾ ಕಾರಿಗೆ ಪ್ರತಿಸ್ಪರ್ಧಿ; MG ಹೆಕ್ಟರ್ 7 ಸೀಟ್ ಕಾರು ಅನಾವರಣ!

MG ಹೆಕ್ಟರ್ ಭಾರತದ SUV ಕಾರು ವಿಭಾಗದಲ್ಲಿ ಹೊಸ ಭರವಸೆ ಮೂಡಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳಿವೆ. ಈ ಕಾರಿನ  ಯಶಸ್ಸಿನ ಬೆನ್ನಲ್ಲೇ ಇದೀಗ 7 ಸೀಟಿನ ಕಾರು ಅನಾವರಣ ಮಾಡಿದೆ. ನೂತನ ಕಾರಿನ ವಿಶೇಷತೆ, ಬೆಲೆ ಮಾಹಿತಿ ಇಲ್ಲಿದೆ.

Toyota innova competitor MG hector 7 seats suv car launched
Author
Bengaluru, First Published Jul 22, 2019, 7:51 PM IST

ಇಂಡೋನೇಷ್ಯಾ(ಜು.22): MG ಮೋಟಾರ್ಸ್ ಭಾರತದಲ್ಲಿ ಹೆಕ್ಟರ್ ಕಾರು ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಕಾರು ಬಿಡುಗಡೆ ಮಾಡಿದ MG ಮೋಟಾರ್ಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಕ್ಟರ್ ಯಶಸ್ಸಿನ ಬೆನ್ನಲ್ಲೇ ಟೊಯೊಟಾ ಇನೋವಾ ಕಾರಿಗೆ ಪ್ರತಿಸ್ಪರ್ಧಿಯಾಗಿ 7 ಸೀಟಿನ ಹೆಕ್ಟರ್ ಕಾರು ಅನಾವರಣ ಮಾಡಿದೆ.

ಇದನ್ನೂ ಓದಿ: ಬ್ರೆಜಾ, ನೆಕ್ಸಾನ್ ಪ್ರತಿಸ್ಪರ್ಧಿ; ಬರುತ್ತಿದೆ ಟೊಯೊಟಾ SUV ಕಾರು!

ಇಂಡೋನೇಷ್ಯಾ ಆಟೋ ಎಕ್ಸ್ಪೋದಲ್ಲಿ ನೂತನ ಕಾರನ್ನು MG ಮೋಟಾರ್ಸ್ ಅನಾವರಣ ಮಾಡಿದೆ. ಈ ಕಾರಿನ ಬೆಲೆ 13 ಲಕ್ಷ ರೂಪಾಯಿ(ಎಕ್ಸ್ ಶೋರೂಂ) ಆರಂಭಗೊಳ್ಳಲಿದೆ. ವಿನ್ಯಾಸ, ಸಾಮರ್ಥ್ಯದ ಜೊತೆಗೆ ಬೆಲೆಯಲ್ಲೂ ಇನೋವಾ ಕಾರಿಗೆ ಪೈಪೋಟಿ ನೀಡಲು  MG ಮೋಟಾರ್ಸ್ ಸಜ್ಜಾಗಿದೆ.

ಇದನ್ನೂ ಓದಿ: ಸ್ಯಾಂಟ್ರೋ ಕಾರು ದರ ಪರಿಷ್ಕರಣೆ; ಇಲ್ಲಿದೆ ನೂತನ ಬೆಲೆ!

MG ಹೆಕ್ಟರ್ 7ಸೀಟು ಬೇಸ್ ಮಾಡೆಲ್ ಕಾರಿನ ಬೆಲೆ 13 ಲಕ್ಷ ರೂಪಾಯಿ. ಇದು ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಇದರಲ್ಲಿ CVT ವೇರಿಯೆಂಟ್ ಕಾರಿಗೆ 13.64 ಲಕ್ಷ ರೂಪಾಯಿ. ಟಾಪ್ ಮಾಡೆಲ್ ಬೆಲೆ 16.76 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ನೂತನ 7 ಸೀಟರ್ ಅಲ್ಮಾಝ್ ಕಾರು ಶೀಘ್ರದಲ್ಲೇ ಭಾರತ ಪ್ರವೇಶಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಿರುವ MG ಹೆಕ್ಟರ್ ಕಾರು ಹಾಗೂ ನೂತನ 7 ಸೀಟಿನ ಕಾರಿನ ಎಂಜಿನ್ ಹಾಗೂ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆಗಲಿಲ್ಲ. ನೂತನ ಕಾರು ಟೊಯೊಟಾ ಇನೋವಾ, ಮಹೀಂದ್ರ XUV500 ಹಾಗೂ ಬಿಡುಗಡೆಯಾಗಲಿರುವ ಟಾಟಾ ಹ್ಯಾರಿಯರ್ 7 ಸೀಟರ್‌ ಕಾರಿಗೆ ಪೈಪೋಟಿ ನೀಡಲಿದೆ.
 

Follow Us:
Download App:
  • android
  • ios