ಟಾಟಾ ಮೋಟಾರ್ಸ್ ಕ್ರಾಂತಿ; ಬಿಡುಗಡೆಯಾಗಲಿದೆ 12 ಹೊಸ ಕಾರು!

ಟಾಟಾ ಮೋಟಾರ್ಸ್ ನೆಕ್ಸಾನ್ ಕಾರಿನ ಮೂಲಕ ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಕ್ರಾಂತಿ ಮಾಡಿದ್ದರೆ, ಹ್ಯಾರಿಯರ್ ಮೂಲಕ ಅತ್ಯಂತ ಆಕರ್ಷಕ ಹಾಗೂ ಲಕ್ಸುರಿ ಕಾರಿನಲ್ಲೂ ಸೈಎನಿಸಿಕೊಂಡಿದೆ. ಇದೀಗ ಬರೋಬ್ಬರಿ 12 ಕಾರು ಬಿಡುಗಡೆ ಮಾಡಲು ಟಾಟಾ ಮುಂದಾಗಿದೆ. ಈ ಮೂಲಕ ಇತರ ಎಲ್ಲಾ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಟಾಟಾ ರೆಡಿಯಾಗಿದೆ. 

Tata motors plan to launch 12 new cars  next 4 years

ನವದೆಹಲಿ(ಡಿ.30): ಟಾಟಾ ಮೋಟಾರ್ಸ್ ಹೊಸ ವರ್ಷದ ಆರಂಭದಲ್ಲೇ ಮೊತ್ತ ಮೊದಲ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ ಮಾಡುತ್ತಿದೆ. ಜನವರಿ 22ರಂದು ಟಾಟಾ ಅಲ್ಟ್ರೋಜ್ ಕಾರು ಮಾರುಕಟ್ಟೆ ಪ್ರವೇಶಿಸುತ್ತಿದೆ. ಈಗಾಗಲೇ ಅಲ್ಟ್ರೋಜ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಟಾಟಾ ನೆಕ್ಸಾನ್, ಟಿಯಾಗೋ, ಹ್ಯಾರಿಯರ್ ಕಾರುಗಳ ಯಶಸ್ಸಿನಲ್ಲಿರುವ ಟಾಟಾ,  ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಮುಂದಾಗಿದೆ. 

ಇದನ್ನೂ ಓದಿ: ಹೊಸ ವರ್ಷಕ್ಕೆ ಹ್ಯುಂಡೈ ಔರಾ ಕಾರು; ಬೆಲೆ, ಇಲ್ಲಿದೆ ವಿಶೇಷತೆ!

ಟಾಟಾ ಮೋಟಾರ್ಸ್ ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ 12 ಹೊಸ ಕಾರು ಬಿಡುಗಡೆ ಮಾಡುತ್ತಿದೆ. ಹೊಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾದ ಇವಿಷನ್ ಕಾನ್ಸೆಪ್ಟ್ ಕಾರು ಈಗಾಗಲೇ ಟ್ರೆಂಡ್ ಆಗಿದೆ. ಹಾರ್ನಬಿಲ್ ಸೇರಿದಂತೆ ಸೆಡಾನ್, SUV, ಹ್ಯಾಚ್‌ಬ್ಯಾಕ್ ಕಾರುಗಳನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: HBC ಕಾಂಪಾಕ್ಟ್ SUV ಕಾರು ಬಿಡುಗಡೆ ಖಚಿತ ಪಡಿಸಿದ ರೆನಾಲ್ಟ್!.

ಅಲ್ಫಾ, ಒಮೆಗಾ ಪ್ಲಾಟ್‌ಫಾರ್ಮ್ ಸೇರಿದಂತೆ ವಿವಿದ ರೀತಿಯ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಟಾಟಾ ಕಾರು ಬಿಡುಗಡೆ ಮಾಡಲಿದೆ. ಎಲ್ಲಾ ಕಾರುಗಳು ಕಡಿಮೆ ಬೆಲೆ ಹಾಗೂ ಗರಿಷ್ಠ ಸುರಕ್ಷತೆ ಒದಗಿಸಲಿದೆ. ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲ ಎಂದು ಟಾಟಾ ಮೋಟಾರ್ ಸ್ಪಷ್ಟಪಡಿಸಿದೆ.

Latest Videos
Follow Us:
Download App:
  • android
  • ios