ನವದೆಹಲಿ(ಡಿ.25): ಹ್ಯುಂಡೈ ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ ನೀಡುತ್ತಿದೆ. 2019ರಲ್ಲಿ ಹ್ಯುಂಡೈ ವೆನ್ಯೂ ಹಾಗೂ ಹ್ಯುಂಡೈ ಗ್ರ್ಯಾಂಡ್ ಐ10 ನಿಯೊಸ್ ಕಾರು ಅತ್ಯಂತ ಯಶಸ್ವಿಯಾಗಿದೆ. ಮಾರಾಟದಲ್ಲೂ ದಾಖಲೆ ಬರೆದಿದೆ. ಇದೀಗ 2020ರ ಆರಂಭದಲ್ಲೇ ಹ್ಯುಂಡೈ ಔರಾ ಕಾರು ಬಿಡುಗಡೆ ಮಾಡುತ್ತಿದೆ. \

ಇದನ್ನೂ ಓದಿ: ಮಾರುತಿ ಸುಜುಕಿ ಅಲ್ಟೋ VXI+ ಕಾರು ಬಿಡುಗಡೆ!

ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಎಕ್ಸೆಂಟ್ ಕಾರಿನ ಬದಲಾಗಿ ಔರಾ ಕಾರು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಔರಾ ಮೂಲತಃ  ಎಕ್ಸೆಂಟ್ ನ್ಯೂಜನರೇಶನ್ ಮಾಡೆಲ್ ಕಾರು. ಹ್ಯುಂಡೈ ಗ್ರ್ಯಾಂಡ್ ಐ10 ನಿಯೊಸ್ ಕಾರಿನ ಡಿಸೈನ್ ಹೊಂದಿದೆ.  ಈಗಾಲೇ ಕಾರಿನ ಟೆಸ್ಟಿಂಗ್ ಆರಂಭವಾಗಿದ್ದು, ಜನವರಿ ಆರಂಭಲ್ಲೇ ಸಬ್‌ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆಯಾಗಲಿದೆ. 

ಹ್ಯುಂಡೈ ಔರಾ ಕಾರಿನ ಬೆಲೆ 6 ರಿಂದ 8 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಮುಂಭಾಗದ ಗ್ರಿಲ್, LED ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಔರಾ ಕಾರು 3,995mm ಲಾಂಗ್, ಎತ್ತರ 1,680 mm, ಅಗಲ 1,520 mm ವೀಲ್ಹ್ ಬೇಸ್ 2450 mm ಹೊಂದಿದೆ. 402 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

ಇದನ್ನೂ ಓದಿ: ಹ್ಯುಂಡೈ ವೆನ್ಯು ಕಾರಿನ ಸುರಕ್ಷತಾ ಫಲಿತಾಂಶ ಬಹಿರಂಗ!

ಹ್ಯುಂಡೈ ಔರಾ ಕಾರು 2 ವೇರಿಯೆಂಟ್‌ನಲ್ಲಿ ಲಭ್ಯ. 2 ಪೆಟ್ರೋಲ್ ಹಾಗೂ ಡೀಸೆಲ್ ಕಾರು ಲಭ್ಯವಿದೆ. BS6 ಎಂಜಿನ್ ಕೂಡ ಇದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ 82 bhp ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಮಾನ್ಯುಯೆವ್ ಹಾಗೂ ಎಎಂಟಿ ಆಯ್ಕೆ ಲಭ್ಯವಿದೆ.

1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್  99 bhp ಪವರ್ ಹಾಗೂ 172 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇದರಲ್ಲಿ 5 ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. 1.2 ಲೀಟರ್ ಡೀಸೆಲ್ ಎಂಜಿನ್ 74 bhp ಪವರ್ ಹಾಗೂ190 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ಡೀಸೆಲ್ ವೇರಿಯೆಂಟ್‌ನಲ್ಲಿ 5 ಸ್ಪೀಡ್ ಮಾನ್ಯುಯೆಲ್ ಹಾಗೂ AMT ಆಯ್ಕೆ ಲಭ್ಯವಿದೆ.