ಮತ್ತೆ ನೆರವು ನೀಡಿದ ಟಾಟಾ, 20 ಆ್ಯಂಬುಲೆನ್ಸ್, 100 ವೆಂಟಿಲೇಟರ್ ಹಸ್ತಾಂತರ!

ಕೊರೋನಾ ವೈರಸ್ ವಿರುದ್ದದ ಹೋರಾಟದಲ್ಲಿ ಟಾಟಾ ಗ್ರೂಪ್ ಅವಿರತ ನೆರವು ನೀಡುತ್ತಿದೆ. ಸರ್ಕಾರದ ಜೊತೆ ಕೈಜೋಡಿಸಿರುವ ಟಾಟಾ ಗ್ರೂಪ್ ಈಗಾಗಲೇ ದೇಣಿಗೆ ಸೇರಿದಂತೆ ಹಲವು ಸಹಾಯ ಮಾಡಿದೆ. ಇದೀಗ ಮುಂಬೈನಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣದಿಂದ ಮತ್ತೆ ಮಹಾರಾಷ್ಟ್ರ ಸರ್ಕಾರದ ನೆರವಿಗೆ ನಿಂತಿದೆ. 

Tata group donate ambulance ventilator and 10 crore rupees to Maharashtra

ಮುಂಬೈ(ಜು.07);  ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಟಾಟಾ ನೆರವು ನೀಡುತ್ತಲೇ ಇದೆ.   ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಟಾಟಾ ಗ್ರೂಪ್ ಒಟ್ಟು 1500 ಕೋಟಿ ರೂಪಾಯಿ ನೀಡಿದೆ. ಬಳಿಕ ಹಲವು ರೀತಿಯಲ್ಲೇ ಸಹಾಯ ಹಸ್ತ ಚಾಚಿದೆ. ಇದೀಗ ಮುಂಬೈನಲ್ಲಿ ಹೆಚ್ಚುತ್ತಿರುವ ಕೊರೋನಾ ತಡೆಗಟ್ಟಲು ಟಾಟಾ 20 ಆ್ಯಂಬುಲೆನ್ಸ್ ಹಾಗೂ 100 ವೆಂಟಿಲೇಟರ್ ನೀಡಿದೆ.

COVID-19 ಪರಿಹಾರ ನಿಧಿಗೆ 1000 ಕೋಟಿ ನೀಡಿದ ಟಾಟಾ ಸನ್ಸ್; ಇದು ಗರಿಷ್ಠ ದೇಣಿಗೆ!.

ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಟ್ವೀಟ್ ಮೂಲಕ ಟಾಟಾ ಮೋಟಾರ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ. 20 ಆ್ಯುಂಬುಲೆನ್ಸ್ ಹಾಗೂ 100 ವೆಂಟಿಲೇಟರ್ ಜೊತೆಗೆ 10 ಕೋಟಿ ರೂಪಾಯಿಯನ್ನು ಟಾಟಾ ಗ್ರೂಪ್ ನೀಡಿದೆ. ಈ ಮೂಲಕ ಕೊರೋನಾ ವಿರುದ್ಧ ಹೋರಾಟದಲ್ಲಿ ಸರ್ಕಾರದ ಜೊತೆ ನಿಂತಿದೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

ಟ್ರಕ್ ಚಾಲಕರಿಗೆ ಆಹಾರ, ವೈದ್ಯಕೀಯ ನೆರವು ಒದಗಿಸಿದ ಟಾಟಾ ಮೋಟಾರ್ಸ್!...

ಟಾಟಾ ವಿಂಗರ್ ವಾಹನವನ್ನು ಸುಸಜ್ಜಿತ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲಾಗಿದೆ. ಹೊಚ್ಚ ಹೊಸ ವಿಂಗ್ ವಾಹನವನ್ನು 2020ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಲಾಗಿತ್ತು. ನೂತನ ವಿಂಗರ್ ವಾಹನ 3200 WB ಹಾಗೂ 3488 WB ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ವಿಂಗರ್ ವಾಹನ 2.22 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು 98 bhp ಪವರ್ ಹಾಗೂ   200 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

 

ಇದೇ ವಿಂಗರ್ ವಾಹನವನ್ನು ಆತ್ಯಾಧುನಿಕ ಸೌಲಭ್ಯಗಳ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಕೊರೋನಾ ಭೀಕರತೆಗೆ ತುತ್ತಾಗ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದ ಅಪಖ್ಯಾತಿಗೆ ಗುರಿಯಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.2 ಲಕ್ಷಕ್ಕೇರಿದೆ. ಇದರಲ್ಲಿ ಸಕ್ರಿಯ ಪ್ರಕರಣ 89,666. 

Latest Videos
Follow Us:
Download App:
  • android
  • ios