ಟಾಟಾ ಮೋಟಾರ್ಸ್ ನೂತನ ಅಲ್ಟ್ರೋಝ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಆಟೋ ಎಕ್ಸ್ಪೋದಲ್ಲಿ ಪ್ರದರ್ಶನಕ್ಕಿಟ್ಟಿದ್ದ ರೀತಿಯಲ್ಲೇ ಅಲ್ಟ್ರೋಜ್ ನಿರ್ಮಾಣಗೊಂಡಿದೆ. ನೂತನ ಕಾರಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಮುಂಬೈ(ನ.22): ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಹ್ಯಾಚ್‌ಬ್ಯಾಕ್ ಅಲ್ಟ್ರೋಝ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟೀಸರ್ ಬಿಡುಗಡೆ ಮಾಡಿದ್ದು, ಎಲ್ಲರ ಗಮನಸೆಳೆಯುತ್ತಿದೆ. ನೂತನ ಕಾರು 2020ರ ಜನವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ಟಾಟಾ ಮೋಟಾರ್ ಸ್ಪಷ್ಟಪಡಿಸಿದೆ. ಶೀಘ್ರದಲ್ಲೇ ಕಾರು ಅನಾವರಣಗೊಳ್ಳಲಿದ್ದು, ಬುಕಿಂಗ್ ಕೂಡ ಆರಂಭವಾಗಲಿದೆ. 

Scroll to load tweet…

ಇದನ್ನೂ ಓದಿ: ಹೆಚ್ಚು ಮೈಲೇಜ್, ಕಡಿಮೆ ಬೆಲೆ; ಟಾಟಾ ಬಿಡುಗಡೆ ಮಾಡಿದೆ ಹೊಸ ಕಾರು

ಈಗಾಗಲೇ ಹಲವು ಸುತ್ತಿನ ಪರೀಕ್ಷೆಗಳಲ್ಲಿ ಟಾಟಾ ಅಲ್ಟ್ರೋಝ್ ಯಶಸ್ವಿಯಾಗಿದೆ. ಮಾರುತಿ ಬಲೆನೋ, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಅಲ್ಟ್ರೋಝ್ ರಸ್ತೆಗಳಿಯುತ್ತಿದೆ. ನೂತನ ಕಾರು ಹಲವು ವಿಶೇಷತೆ ಹೊಂದಿದೆ. ALPHA ಪ್ಲಾಟ್‌ಫಾರಂನಲ್ಲಿ ನಿರ್ಮಾಣಗೊಂಡ ಭಾರತದ ಮೊದಲ ಕಾರು ಅಲ್ಟ್ರೋಝ್. ಈ ಸೆಗ್ಮೆಂಟ್ ವಿಭಾಗದಲ್ಲಿ ಟಾಟಾ ಅಲ್ಟ್ರೋಝ್ ಕಡಿಮೆ ಬೆಲೆ ಹೊಂದಿರಲಿದೆ ಎಂದು ಕಂಪನಿ ಹೇಳಿದೆ.

Scroll to load tweet…

ಇದನ್ನೂ ಓದಿ: ಭಾರತದಿಂದ 200 ಟಾಟಾ ಕಾರು ಖರೀದಿಸಿದ ಬಾಂಗ್ಲಾದೇಶ ಸೇನೆ!

ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್, ಹಾಗೂ ಹೈ ವೇರಿಯೆಂಟ್ ಟರ್ಬೋಜಾರ್ಜಡ್ ಎಂಜಿನ್ ಹೊಂದಿರಲಿದೆ. ಡೀಸೆಲ್ ವೇರಿಯೆಂಟ್ 1.5 ಲೀಟರ್ ಎಂಜಿನ್ ಹೊಂದಿರಲಿದೆ. ಇನ್ನು BS6 ಎಮಿಶನ್ ನಿಯಮಕ್ಕೆ ಒಳಪಡಲಿದೆ. ಈಗಾಗಲೇ ಟಾಟಾ ನೆಕ್ಸಾನ್ ಭಾರತದ ಗರಿಷ್ಠ ಸುರಕ್ಷತೆಯ 5 ಸ್ಟಾರ್ ರೇಟಿಂಗ್ ಕಾರು ಅನ್ನೋ ಹೆಗ್ಗಳಿಕೆಗೆ ಪಡೆದಿದೆ. ಹೀಗಾಗಿ ಅಲ್ಟ್ರೋಝ್ ಕೂಡ ಅಷ್ಟೇ ಸುರಕ್ಷತೆ ನೀಡವುದರಲ್ಲಿ ಅನುಮಾನವಿಲ್ಲ.