Asianet Suvarna News Asianet Suvarna News

ಟಾಟಾ ನೆಕ್ಸಾನ್ ಬಳಿಕ ಅಲ್ಟ್ರೋಝ್ ದೇಶದ ಅತ್ಯಂತ ಸುರಕ್ಷತೆ ಕಾರು; ಸೇಫ್ಟಿ ರಿಸಲ್ಟ್ ಬಹಿರಂಗ!

ಭಾರತದಲ್ಲಿ ಇದೀಗ ಕಾರಿನ ಸುರಕ್ಷತೆಗೂ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಹಿಂದೆ ಕಡಿಮೆ ಬೆಲೆ, ಮೈಲೇಜ್‌ಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಹೀಗಾಗಿ ಕಾರು ಕಂಪನಿಗಳು ಸುರಕ್ಷತೆಯ ಕಾರು ಬಿಡುಗಡೆ ಮಾಡಲು ಇನ್ನಿಲ್ಲದ ಹರಸಾಹಸ ಮಾಡುತ್ತಿದೆ. ಆದರೆ ಕಡಿಮೆ ಬೆಲೆಗೆ ಇದು ಸಾಧ್ಯವಾಗುತ್ತಿಲ್ಲ. ಆದರೆ ಟಾಟಾ ಮೋಟಾರ್ಸ್ ಕಡಿಮೆ ಬೆಲೆಗೆ ದೇಶದ ಅತ್ಯಂತ ಸುರಕ್ಷತೆಯ ಕಾರು ಬಿಡುಗಡೆ ಮಾಡುತ್ತಿದೆ. ಟಾಟಾ ನೆಕ್ಸಾನ್ ಬಳಿಕ ಇದೀಗ ಬಿಡುಗಡೆಯಾಗಲಿಪುವ ಅಲ್ಟ್ರೋಝ್ ಕಾರಿನ ಸುರಕ್ಷತೆ ಬಹಿರಂಗವಾಗಿದೆ. ಈ ಕಾರು ಕೂಡ ದೇಶದ ಅತ್ಯಂತ ಸುರಕ್ಷತೆ ಕಾರು ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ. 

Tata altroz car bags 5 star rating in global ncap crash test
Author
Bengaluru, First Published Jan 16, 2020, 4:00 PM IST

ನವದೆಹಲಿ(ಜ.16): ಟಾಟಾ ಮೋಟಾರ್ಸ್ ಕಡಿಮೆ ಬೆಲೆಗೆ ಸುರಕ್ಷಿತ ಕಾರು ನೀಡುವುದರಲ್ಲಿ ಅಗ್ರಸ್ಥಾನದಲ್ಲಿದೆ. ಟಾಟಾ ಮೋಟಾರ್ಸ್‌ ಕಂಪನಿಯ ನೆಕ್ಸಾನ್ ಕಾರು 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಈ ಮೂಲಕ ಕಡಿಮೆ ಬೆಲೆಗೆ ಲಭ್ಯವಿರುವ ಕಾರುಗಳ ಪೈಕಿ 5 ಸ್ಟಾರ್ ರೇಟಿಂಗ್ ಪಡೆದ ಭಾರತದ ಮೊದಲ ಕಾರು ಅನ್ನೋ ಹಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಜನವರಿ 22 ರಂದು ಟಾಟಾ ಅಲ್ಟ್ರೋಜ್ ಕಾರು ಬಿಡುಗಡೆಯಾಗುತ್ತಿದೆ. ಈ ಕಾರು ಸುರಕ್ಷತಾ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. 

Tata altroz car bags 5 star rating in global ncap crash test

ಇದನ್ನೂ ಓದಿ: ಜ.22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ; ಬುಕಿಂಗ್ ಬೆಲೆ 21 ಸಾವಿರ

ಮಾರುತಿ ಬಲೆನೊ, ಹ್ಯುಂಡೈ ಐ20 ಸೇರಿದಂತೆ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಅಲ್ಟ್ರೋಝ್ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಬಿಡುಗಡೆಗೂ ಮುನ್ನವೇ ಟಾಟಾ ಅಲ್ಟ್ರೋಝ್ ಸುರಕ್ಷತಾ ಪರೀಕ್ಷೆಗೆ ಒಳಪಟ್ಟಿದೆ. ಇಷ್ಟೇ ಅಲ್ಲ 5 ಸ್ಟಾರ್ ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ 5 ಸ್ಟಾರ್ ರೇಟಿಂಗ್ ಗರಿಷ್ಠವಾಗಿದೆ.

Tata altroz car bags 5 star rating in global ncap crash test

ಇದನ್ನೂ ಓದಿ: ಬಲೆನೊ, ಐ20 ಕಾರಿನ ಪ್ರತಿಸ್ಪರ್ಧಿ; ಟಾಟಾ ಅಲ್ಟ್ರೋಜ್ ಕಾರಿನ ವಿಡಿಯೋ ಬಹಿರಂಗ!..

ಟಾಟಾ ನೆಕ್ಸಾನ್ ಕಾರಿನ ಸೇಫ್ಟಿ ರೇಟಿಂಗ್ ಬಹಿರಂಗವಾದ ಬಳಿಕ, ಟಾಟಾ ಮೋಟಾರ್ಸ್ ಚೇರ್ಮೆನ್ ರತನ್ ಟಾಟಾ ಸುರಕ್ಷತೆ ಕುರಿತ ಟಾಟಾ ರಾಜಿಯಾಗಲ್ಲ ಎಂದಿದ್ದರು. ಇಷ್ಟೇ ಅಲ್ಲ, ಟಾಟಾ ಬಿಡುಗಡೆ ಮಾಡುವು ಪ್ರತಿ ಕಾರು 5 ಸ್ಟಾರ್ ಸೇಫ್ಟಿ ನೀಡಲಿದೆ ಎಂದು ಭರವಸೆ ನೀಡಿದ್ದರು. ಇದೀಗ ಅಲ್ಟ್ರೋಝ್ ಕಾರು ರತನ್ ಟಾಟಾ ಮಾತು ಉಳಿಸಿಕೊಂಡಿದೆ.

Tata altroz car bags 5 star rating in global ncap crash test

ಇದನ್ನೂ ಓದಿ: ಸಾಬೀತಾಯ್ತು ಟಾಟಾ ನೆಕ್ಸಾನ್ ಕಾರು ಸುರಕ್ಷತೆ- ಪಿಲ್ಲರ್ ಬಿದ್ದರೂ ಪ್ರಯಾಣಿಕರು ಸೇಫ್

ವಯಸ್ಕರ ಸುರಕ್ಷತೆ,  ಮಕ್ಕಳ ಸುರಕ್ಷತೆ, ಫ್ರಂಟ್ ಕ್ರಾಶ್, ಸೈಡ್ ಕ್ರಾಶ್ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಟಾಟಾ ಅಲ್ಟ್ರೋಜ್ ಸೈ ಎನಿಸಿಕೊಂಡಿದ್ದು, ಒಟ್ಟು 5 ಸ್ಟಾರ್ ರೇಟಿಂಗ್ ಪಡೆದಿದೆ. ಟಾಟಾ ಅಲ್ಟ್ರೋಝ್ ಎಲ್ಲಾ ವೇರಿಯೆಂಟ್‌ಗಳಲ್ಲಿ ಎರಡು ಏರ್‌ಬ್ಯಾಗ್, ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ EBD(ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟಿಬ್ಯೂಶನ್) ಸೀಟ್ ಬೆಲ್ಟ್ ರಿಮೈಂಡರ್, ರೇರ್ ಪಾರ್ಕಿಂಗ್ ಸೆನ್ಸಾರ್ ಫೀಚರ್ಸ್ ಲಭ್ಯವಿದೆ.

ಜನವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios