ನವದೆಹಲಿ(ಜ.19): ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಅತ್ಯಂತ ಮುಖ್ಯ. ಇದೀಗ ಅತ್ಯುತ್ತಮ ಗುಣಮಟ್ಟದ ಹೆಲ್ಮೆಟ್ ಬಿಡುಗಡೆಯಾಗಿದೆ. ಕಡಿಮೆ ಬೆಲೆಯಲ್ಲಿ ಸ್ಟೀಲ್‌ಬರ್ಡ್ ಎರಡು ಹೆಲ್ಮೆಟ್ ಬಿಡುಗಡೆ ಮಾಡಿದೆ. ಸ್ಟೀಲ್‌ಬರ್ಡ್ ಎಸ್‌ಬಿಹೆಚ್ ZIP ಹಾಗೂ ಎಸ್‌ಬಿಹೆಚ್ 21 WIZ ಹೆಲ್ಮೆಟ್ ಮಾರುಕಟ್ಟೆ ಪ್ರವೇಶಿಸಿದೆ. ಈ ಹೆಲ್ಮೆಟ್ ಬೆಲೆ  849 ರೂಪಾಯಿ.

ಇದನ್ನೂ ಓದಿ: ಹೆಲ್ಮೆಟ್ ಧರಿಸಿದ್ದರೆ 26 ಸಾವಿರ ರೂ ಉಳಿಯುತ್ತಿತ್ತು, ಅಪ್ಪ-ಮಗನಿಗೆ ಎದುರಾಯ್ತು ಸಂಕಷ್ಠ!

ನೂತನ ಹೆಲ್ಮೆಟ್‌ನ್ನು ಇಟಲಿ ಮೂಲದ ಎಕ್ಸ್‌ಟೆಕ್ ಕಂಪನಿ ಡಿಸೈನ್ ಮಾಡಿದೆ. ಈ ಹೆಲ್ಮೆಟ್ ಕಡಿಮೆ ತೂಕದ ಹೆಲ್ಮೆಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೆಲ್ಮೆಟ್ 800 ಗ್ರಾಂ ತೂಕ ಹೊಂದಿದೆ. ಸವಾರರು ಈ ಹೆಲ್ಮೆಟ್ ಬಳಸುವುದರಿಂದ ಯಾವುದೇ ಕಿರಿಕಿರಿ ಆಗುವುದಿಲ್ಲ, ಆರಾಮಗದ.ಯ ಪ್ರಯಾಣ ನಿಮ್ಮದಾಗಲಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: ಫಾಸ್ಟ್ಯಾಗ್‌ ವ್ಯವಸ್ಥೆ ಬಂದ ಬಳಿಕ ಟೋಲ್‌ಗಳಲ್ಲಿ ಕಾಯುವಿಕೆ ಹೆಚ್ಚಳ!

ಈ ಹೆಲ್ಮೆಟ್ ಸ್ಕ್ರಾಚ್ ಮುಕ್ತವಾಗಿದೆ. ಹೆಲ್ಮೆಟ್ ಮೇಲೆ ಯಾವುದೇ ಗೆರೆ, ಗೀಟು ಬೀಳುವುದಿಲ್ಲ. ISI ಸ್ಟಾಂಡರ್ಡ್ ಹೊಂದಿದ್ದು, ಕೆಲ ಸೈಜ್‌ಗಳಲ್ಲಿ ಲಭ್ಯವಿದೆ.  580mm (ಮೀಡಿಯಂ), 600mm (ಲಾರ್ಜ್)  ಸೈಜ್ ಲಭ್ಯವಿದೆ. SBH-21 WIZ ಹೆಲ್ಮೆಟ್ 3 ಸೈಜ್ ಲಭ್ಯವಿದೆ.   560mm (ಸ್ಮಾಲ್), 580mm (ಮೀಡಿಯಂ) ಮತ್ತು 600mm (ಲಾರ್ಜ್) ಸೈಜ್ ಲಭ್ಯವಿದೆ.