ಹಲವು ವಿಶೇಷತೆಗಳ ಹ್ಯುಂಡೈ ವೆನ್ಯೂ iMT; ಇತರ ಕಾರಿಗಿಂತ ಹೇಗೆ ಭಿನ್ನ?
ಇಂಟೆಲಿಜೆನ್ಸ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್(iMT) ಟೆಕ್ನಾಲಜಿ ಬಳಸಿ ಹ್ಯುಂಡೈ ವೆನ್ಯೂ ಕಾರು ಈಗಾಗಲೇ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದೆ. ಹ್ಯುಂಡೈ ವೆನ್ಯೂ iMT ಕಾರು ಇತರ ಕಾರಿಗಿಂತ ಭಿನ್ನ ಹೇಗೆ? ಮೈಲೇಜ್ ಸೇರಿದಂತೆ ಕಾರಿನ ಡ್ರೈವಿಂಗ್ ಅನುಭವ ಹೇಗಿದೆ? ಇಲ್ಲಿದೆ ವಿವರ.
ಬೆಂಗಳೂರು(ಸೆ.01); ಹ್ಯುಂಡೈ ವೆನ್ಯೂ ಹಲವು ವೇರಿಯೆಂಟ್ ಕಾರುಗಳನ್ನು ನೀಡುತ್ತಿದೆ. ಇದರಲ್ಲಿ ಪ್ರಮುಖವಾಗಿ ಭಾರತದಲ್ಲಿ ಮೊತ್ತ ಮೊದಲ iMT(ಇಂಟೆಲಿಜೆನ್ಸ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್) ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ iMT ಕಾರು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಮಾನ್ಯುಯೆಲ್ ಗೇರ್ ಬಾಕ್ಸ್ ಇದ್ದರೂ ಇದು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ರೀತಿಯಲ್ಲೇ ಕಾರ್ಯನಿರ್ವಹಿಸಲಿದೆ.
ಒಂದೇ ವರ್ಷದಲ್ಲಿ ದಾಖಲೆ ಬರೆದ ಹ್ಯುಂಡೈ ವೆನ್ಯೂ ಕಾರು!.
ಹ್ಯುಂಡೈ ವೆನ್ಯೂ iMT ಕಾರಿನ ಬೆಲೆ 9,90,990 ರೂಪಾಯಿ(ಎಕ್ಸ್ ಶೋ ರೂಂ) ನಿಂದ 11,25,900 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಮಾನ್ಯುಯೆಲ್ ವೇರಿಯೆಂಟ್‌ಗಿಂತ 15,990 ರೂಪಾಯಿಂದ 23,500 ರೂಪಾಯಿವರೆಗೆ ಅಧಿಕವಾಗಿದೆ. ಕೊಂಚ ಅಧಿಕ ಬೆಲೆ ನೀಡಿದರೆ ಸಾಕು, ಪ್ರತಿ ಬಾರಿ ಕ್ಲಚ್ ಹಿಡಿಯುವ ಕಾರ್ಯದಿಂದ ಮುಕ್ತಿ ಸಿಗಲಿದೆ. ಜೊತೆಗೆ ಮೈಲೇಜ್ ಕೂಡ ಉತ್ತಮವಾಗಿದೆ.
ಮಾರುತಿ ಬ್ರೆಜ್ಜಾಗೆ ತಲೆನೋವಾದ ಹ್ಯುಂಡೈ ವೆನ್ಯು;
ಹ್ಯುಂಡೈ ವೆನ್ಯೂ iMT ಕಾರು ಖರೀದಿಸುವ ಬದಲು 20,000 ರೂಪಾಯಿ ಅಧಿಕ ನೀಡಿದರೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು ಖರೀದಿ ಮಾಡಬುಹುದು ಅನ್ನೋದು ಹಲವರ ಅಭಿಪ್ರಾಯವಾಗಿದೆ. ಆದರೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರಿನಲ್ಲಿ ಜರ್ಕಿನ್ಸ್ ಲೆವೆಲ್ 10ರಲ್ಲಿ 10. ಆದರೆ iMT ಕಾರಿನಲ್ಲಿ 10ರಲ್ಲಿ 2 ಮಾತ್ರ.
ಹೆಚ್ಚು ಪೀಕ್ ಟಾರ್ಕ್, ಪವರ್, ಡ್ಯುಯೆಲ್ ಕ್ಲಚ್ ಹಾಗೂ ಸಿವಿಟಿ ಗೇರ್ ಬಾಕ್ಸ್, ಗೇರ್ ಕಾರು ಇಷ್ಟಪಡುವ, ಸ್ಪೋರ್ಟ್ AT ಕಾರು ಇಷ್ಟಪಡುವವರಿಗೆ iMT ಕಾರು ಖರೀದಿ ಸೂಕ್ತವಲ್ಲ.
iMT ಕಾರು ಆಟೋಮ್ಯಾಟಿಕ್ ಅಥವಾ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರಲ್ಲ. ಕ್ಲಬ್ ಪೆಡಲ್ ಈ ಟೆಕ್ನಾಲಜಿ ಕಾರಿನಲಿಲ್ಲ. ಈ ಕಾರು ಚಾಲನೆ ವೇಳೆ ಗೇರ್ ಬದಲಿಸುವಾಗ ಸೆನ್ಸಾರ್ ಮೂಲಕ ಟ್ರಾನ್ಸ್‌ಮಿಶನ್ ಕಂಟ್ರೋಲ್‌ಗೆ ಸಂಜ್ಞೆಗಳನ್ನು ನೀಡಲಿದೆ. ಎಕ್ಸಲೇಟರ್ ಪ್ರೆಸ್ ಮಾಡದೇ ಗೇರ್ ಬದಲಿಸಬಹುದು. ಇನ್ನು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರಿನಲ್ಲಿರುವಂತೆ ಈ ಕಾರಿನಲ್ಲಿ ಎಕ್ಸಲೇಟರ್ ಹಾಗೂ ಬ್ರೇಕ್ ಮಾತ್ರವಿರುತ್ತಿದೆ. ಕ್ಲಚ್ ಪೆಡಲ್ ಇರುವುದಿಲ್ಲ.
ಕಾರು ಸ್ಟಾರ್ಟ್ ಮಾಡಲು ಬ್ರೇಕ್ ಪೆಡಲ್ ಪ್ರೆಸ್ ಮಾಡಬೇಕು, ಬಳಿಕ ಸ್ಟಾರ್ಟ್ ಬಟನ್ ಪ್ರೆಸ್ ಮಾಡಬೇಕು. ಈ ವೇಳೆ ಗೇರ್ ನ್ಯೂಟ್ರಲ್‌ನಲ್ಲಿಡಬೇಕು. ಬಳಿಕ ಗೇರ್ ಬದಲಾಯಿಸಿ ಚಾಲನೆ ಆರಂಭಿಸಬಹದು. ಯಾವುದೇ ಗೇರ್‌ನಲ್ಲಿ ಕಾರು ಎಂಜಿನ್ ಆಫ್ ಮಾಡಬುಹುದು. ಆದರೆ ಫಸ್ಟ್ ಗೇರ್‌ನಲ್ಲಿ ಕಾರು ನಿಲ್ಲಿಸಿದರೆ ಸೂಕ್ತ.
ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು ಇಷ್ಟಪಡುತ್ತಾರೆ. ಕಾರಣ ಕ್ಲಚ್ ಕಿರಿಕಿರಿ ಇರುವುದಿಲ್ಲ. ಇದೀಗ iMT ಟೆಕ್ನಾಲಜಿ ಕಾರು ಕೂಡ ಇದೇ ರೀತಿ ಬಳಕೆ ಮಾಡಲು ಸಾಧ್ಯವಿದೆ. ಕ್ಲಚ್ ಬಳಕೆ ಇಲ್ಲದ ಕಾರಣ ಈ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇನ್ನು ಮಾನ್ಯುಯೆಲ್ ಗೇರ್ ಬಾಕ್ಸ್ ಇರುವುದರಿಂದ ಚಾಲನಾ ಅನುಭವ ಕೂಡ ಸಿಗಲಿದೆ.