ಪಂಜಾಬ್(ಸೆ.06):  ಮನೆ ಮುಂದೆ ಹೊಚ್ಚ ಹೊಸ ಕಾರು ನಿಲ್ಲಿಸಿ ಪೋಷಕರನ್ನು ಕರೆದುಕೊಂಡು ಬಂದು ಅಚ್ಚರಿ ಗಿಫ್ಟ್ ನೀಡಿದ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಇದೀಗ ಲಂಡನ್‌ನಲ್ಲಿದ್ದುಕೊಂಡು ತನ್ನ ಪೋಷಕರಿಗೆ ಟಾಟಾ ಹ್ಯಾರಿಯರ್ ಕಾರು ಗಿಫ್ಟ್ ಮಾಡಿದ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಪೋಷಕರಿಗಾಗಿ ಪುತ್ರ ಹೊಚ್ಚ ಹೊಸ ಟಾಪ್ ಮಾಡೆಲ್ ಟಾಟಾ ಹ್ಯಾರಿಯರ್ ಬ್ಲಾಕ್ ಎಡಿಶನ್ ಕಾರು ಗಿಫ್ಟ್ ಮಾಡಿದ್ದಾರೆ.

ಟಾಟಾ ಹ್ಯಾರಿಯರ್ XT+ ವೇರಿಯೆಂಟ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್!.

ಲಂಡನ್‌ನಲ್ಲಿ ಉದ್ಯೋಗಿಯಾಗಿರುವ ಪುತ್ರ ಪೋಷಕರಿಗಾಗಿ ಹೊಚ್ಚ ಹೊಸ ಮನೆ ನಿರ್ಮಾಣ ಮಾಡಿದ್ದಾನೆ. ಮನೆ ಕಾರ್ಯಗಳು ಬಹುತೇಕ ಪೂರ್ಣಗೊಂಡಿದೆ. ಇದರ ನಡುವೆ ಲಂಡನ್‌ನಲ್ಲಿದ್ದುಕೊಂಡೇ ಪಂಜಾಬ್ ಟಾಟಾ ಮೋಟಾರ್ಸ್ ಡೀಲರ್‌ಗೆ ಕರೆ ಮಾಡಿ ಟಾಟಾ ಹ್ಯಾರಿಯರ್ ಕಾರು ಬುಕ್ ಮಾಡಿದ್ದಾನೆ. ಬಳಿಕ ದಾಖಲೆ ಪತ್ರ, ಹಣದ ವ್ಯವಹಾರ ಆನ್‌ಲೈನ್ ಮುಖಾಂತರ ಮುಗಿಸಿದ್ದಾನೆ.

5 ತಿಂಗಳಲ್ಲಿ 10 ಸಾವಿರ ಟಾಟಾ ಹ್ಯಾರಿಯರ್ ಕಾರು ಬುಕಿಂಗ್!.

ಹೊಚ್ಚ ಹೊಸ ಟಾಟಾ ಹ್ಯಾರಿಯರ್ ಟಾಪ್ ಮಾಡೆಲ್ ಬ್ಲಾಕ್ ಎಡಿಶನ್ ಕಾರು ಖರೀದಿಸಿ, ತನ್ನ ಪೋಷಕರ ವಿಳಾಸ ನೀಡಿದ್ದಾನೆ. ಈ ಕಾರನ್ನು ಪೋಷಕರಿಗೆ ಗಿಫ್ಟ್ ನೀಡುವಂತೆ ಹೇಳಿದ್ದಾನೆ. ಹೀಗಾಗಿ ಟಾಟಾ ಮೋಟಾರ್ಸ್ ಸಿಬ್ಬಂಧಿ ಕಾರನ್ನು ಪೋಷಕರ ವಿಳಾಸಕ್ಕೆ ತಲುಪಿಸಿ, ಹೊಚ್ಚ ಹೊಸ ಕಾರು ಡೆಲಿವರಿ ಮಾಡಿದ್ದಾರೆ. ಪುತ್ರನ ಸರ್ಪ್ರೈಸ್ ಗಿಫ್ಟ್ ನೋಡಿದ ಪೋಷಕರು ಭಾವುಕರಾಗಿದ್ದಾರೆ. ಬಳಿಕ ಪುತ್ರನ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ. 

ಟಾಟಾ ಹ್ಯಾರಿಯರ್ ಬ್ಲಾಕ್ ಎಡಿಶನ್ ಕಾರು ಟಾಪ್ ಎಡ್ XZA ವೇರಿಯೆಂಟ್ ಕಾರಾಗಿದೆ. ಆಟೋಮ್ಯಾಟಿಕ್ ವೇರಿಯೆಂಟ್ ಕಾರು ಇದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. 2.0 ಲೀಟರ್ ಡೀಸೆಲ್ ಎಂಜಿನ್ ಕಾರು ಇದಾಗಿದೆ. 170 ps ಪವರ್ ಹಾಗೂ 350 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.